ನಮೀಬಿಯಾದಿಂದ ಇನ್ನೂ 12 ಚಿರತೆಗಳು ಭಾರತಕ್ಕೆ

ಭೋಪಾಳ (ಮಧ್ಯಪ್ರದೇಶ) – `ಪ್ರೊಜೆಕ್ಟ ಚೀತಾ’ ಅಡಿಯಲ್ಲಿ ಭಾರತದಲ್ಲಿ ಈ ಮೊದಲು 8 ಚಿರತೆಗಳನ್ನು ತರಲಾಗಿತ್ತು. ಈಗ ಪುನಃ ವಿಮಾನದ ಮೂಲಕ ಆಫ್ರಿಕಾ ಖಂಡದ ನಮೀಬಿಯಾ ದೇಶದಿಂದ 12 ಚಿರತೆಗಳನ್ನು ತರಲಾಗಿದೆ. ಅವುಗಳನ್ನು ಮಧ್ಯಪ್ರದೇಶದ ಕುನೊ ನ್ಯಾಶನಲ್ ಪಾರ್ಕನಲ್ಲಿ ಬಿಡಲಾಗಿದೆ. ಈ 12 ಚಿರತೆಗಳಲ್ಲಿ 7 ಗಂಡು ಮತ್ತು 5 ಹೆಣ್ಣು ಚಿರತೆಗಳಿವೆ. ಭಾರತದಲ್ಲಿರುವ ಚಿರತೆಗಳ ಸಂಖ್ಯೆ ಹೆಚ್ಚಿಸಲು ಈ ಚಿರತೆಗಳನ್ನು ತರಲಾಗಿದೆ.