ನೇಪಾಳದಲ್ಲಿ ಪುನಃ ಹಿಂದೂ ರಾಷ್ಟ್ರ ಸ್ಥಾಪಿಸುವ ಅಭಿಯಾನ ಪ್ರಾರಂಭ !

ಅಮಾನತ್ತುಗೊಂಡಿದ್ದ ರಾಜ ಜ್ಞಾನೇಂದ್ರ ಶಹಾ ಇವರಿಂದ ಅಭಿಯಾನಕ್ಕೆ ಹಸಿರು ನಿಶಾನೆ

ರಾಜ ಜ್ಞಾನೇಂದ್ರ ಶಹಾ

ಕಾಠಮಾಂಡೂ (ನೇಪಾಳ) – ಅಮಾನತ್ತುಗೊಂಡಿರುವ ನೇಪಾಳದ ರಾಜ ಜ್ಞಾನೇಂದ್ರ ಶಹಾ ಇವರ ಹಸ್ತದಿಂದ ನೇಪಾಳ ದೇಶವನ್ನು ಮೊದಲಿನಂತೆ ಹಿಂದೂ ರಾಷ್ಟ್ರವೆಂದು ಘೋಷಿಸಲು ಒಂದು ಅಭಿಯಾನವನ್ನು ಪ್ರಾರಂಭಿಸಲಾಗಿದೆ. ಈ ಅಭಿಯಾನಕ್ಕೆ ನೇಪಾಳದ ಝಾಪಾ ಜಿಲ್ಲೆಯ ಕಾಕರಭಿಟ್ಟಾದಲ್ಲಿ ಜ್ಞಾನೇಂದ್ರ ಶಹಾ ಇವರ ಹಸ್ತದಿಂದ ಹಸಿರು ನಿಶಾನೆ ತೋರಿಸಿ ಪ್ರಾರಂಭಿಸಲಾಯಿತು. ‘ಬನ್ನಿ ಧರ್ಮ, ರಾಷ್ಟ್ರ, ರಾಷ್ಟ್ರವಾದ, ಸಂಸ್ಕೃತಿ ಮತ್ತು ನಾಗರಿಕರನ್ನು ರಕ್ಷಿಸೋಣ’ ಈ ಅಭಿಯಾನದ ಹೆಸರಾಗಿದೆ. ಈ ಸಮಯದಲ್ಲಿ ಬೃಹತ್ ಸಂಖ್ಯೆಯಲ್ಲಿ ಜನರು ಉಪಸ್ಥಿತರಿದ್ದರು. ನೇಪಾಳದ ಉದ್ಯಮಿ ದುರ್ಗಾ ಪರಸಾಯಿಯವರ ನಾಯಕತ್ವದಲ್ಲಿ ಈ ಅಭಿಯಾನ ಪ್ರಾರಂಭಿಸಲಾಗಿದೆ. ದುರ್ಗಾ ಪರಸಾಯಿಯವರು ಮಾಜಿ ಪ್ರಧಾನ ಮಂತ್ರಿ ಕೆ.ಪಿ. ಒಲಿಯವರ `ಕಮ್ಯುನಿಸ್ಟ ಪಾರ್ಟಿ ಆಫ್ ನೇಪಾಳ ಯುನಿಫೈಡ್ ಮಾರ್ಕಿಸ್ಟ ಲೆನಿನಿಸ್ಟ ಪಾರ್ಟಿ’ಯ ಕೇಂದ್ರೀಯ ಸಮಿತಿಯ ಸದಸ್ಯರಾಗಿದ್ದಾರೆ.

ದುರ್ಗಾ ಪರಸಾಯಿಯವರು, ನಾವು ಎಂದಿಗೂ ಈಗಿನಂತಹ ದೇಶಬೇಕೆಂದು ಇಚ್ಛೆ ಹೊಂದಿರಲಿಲ್ಲ. ನಮಗೆ ಎಂದಿಗೂ ಇಂತಹ ಪ್ರಜಾಪ್ರಭುತ್ವದ ಅಂದರೆ 1 ಕೋಟಿಗಿಂತ ಹೆಚ್ಚು ನೇಪಾಳಿ ಯುವಕರು ತಮ್ಮ ರಕ್ತ ಮತ್ತು ಬೆವರು ಸುರಿಸಲು ಕೊಲ್ಲಿ ದೇಶಗಳಲ್ಲಿ ಹೋಗುವ ಸಮಯ ಬರಬಹುದೆನ್ನುವ ಅಪೇಕ್ಷೆ ಇರಲಿಲ್ಲ ಎಂದು ಹೇಳಿದರು.