ಟಿಪ್ಪು ಸುಲ್ತಾನನನ್ನು ಬೆಂಬಲಿಸುವವರು ಉಳಿಯಬಾರದು !

ಭಾಜಪ ಕರ್ನಾಟಕ ಪ್ರದೇಶಾಧ್ಯಕ್ಷ ನಳಿನಕುಮಾರ ಕಟೀಲ ಇವರ ಹೇಳಿಕೆ !

ನಳಿನಕುಮಾರ ಕಟೀಲ

ಬೆಂಗಳೂರು – ನಾವು ರಾಮ ಭಕ್ತರು, ಆಂಜನೇಯನ ಭಕ್ತರು, ಆಂಜನೇಯನ ಕಾರ್ಯ ಮಾಡುವವರು, ಆಂಜನೇಯನನ್ನು ಅಭಿವೃದ್ಧಿ ಮಾಡುವವರು. ನಾವು ಟಿಪ್ಪು ಸಂತಾನದವರಲ್ಲ. ಟಿಪ್ಪು ಸಂತಾನದವರನ್ನು ಮನೆಗೆ ಕಳುಹಿಸುವವರು. ಹಾಗಾಗಿ ಯಲಬುರ್ಗದ ಜನತೆಯಲ್ಲಿ ಕೇಳುತ್ತೇನೆ. ನೀವು ಆಂಜನೆಯನ್ನು ಪೂಜೆ ಮಾಡುತ್ತೀರಾ ಇಲ್ಲ ಟಿಪ್ಪುವಿನ ಭಜನೆ ಮಾಡುತ್ತಿರಾ..? ಹಾಗಾದ್ರೆ ಟಿಪ್ಪು ಭಜನೆ ಮಾಡುವವರನ್ನು ಕಾಡಿಗೆ ಓಡಿಸುತತ್ತಿರೋ ಇಲ್ಲವೋ..?” ಎಂದು ಕಾರ್ಯಕ್ರಮದಲ್ಲಿ ನೆರೆದಿದ್ದ ಬಿಜೆಪಿ ಕಾರ್ಯಕರ್ತರನ್ನು ಉದ್ದೇಶಿಸಿ ಪ್ರಶ್ನಿಸಿದ್ದಾರೆ. ಸಂಕಲ್ಪ ಮಾಡಿ ಈ ರಾಜ್ಯಕ್ಕೆ ಟಿಪ್ಪು ಸಂತಾನಾ ಬೇಕಾ, ರಾಮ ಭಕ್ತರು ಬೇಕಾ.. ಹನುಮ ಭಕ್ತರು ಬೇಕಾ..? ಎಂದು. ಈ ಆಂಜನೇಯನ ಪುಣ್ಯ ನೆಲದಲ್ಲಿ ಹೇಳುತ್ತೇನೆ. ಈ ನೆಲದಲ್ಲಿ ಟಿಪ್ಪುವನ್ನು ಪ್ರೀತಿ ಮಾಡುವವರು ಇರಬಾರದು. ರಾಮನ ಪೂಜೆ ಮಾಡುವವರು ಇರಬೇಕು” ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ.

`ನಾನು ಟಿಪ್ಪು ಸುಲ್ತಾನನ ಹೆಸರನ್ನು ಪದೇ ಪದೇ ತೆಗೆದುಕೊಳ್ಳುತ್ತೇನೆ’ !(ಅಂತೆ) – ಅಸದುದ್ದೀನ ಓವೈಸಿ

ಅಸದುದ್ದೀನ ಓವೈಸಿ

ಯಾವ ಟಿಪ್ಪು ಒಂದೇ ದಿನದಲ್ಲಿ 1 ಲಕ್ಷಕ್ಕಿಂತ ಅಧಿಕ ಹಿಂದೂಗಳ ಹತ್ಯೆ ಮತ್ತು ಮತಾಂತರ ಮಾಡಿದನೋ, ಅವನ ಹೆಸರು ಯಾರು ಮತ್ತು ಏಕೆ ತೆಗೆದುಕೊಳ್ಳುತ್ತಾರೆ ಎನ್ನುವುದು ಹಿಂದೂಗಳಿಗೆ ತಿಳಿದಿದೆ ! ಇಂತಹವರಿಗೆ ವಿಭಜನೆಯ ಸಮಯದಲ್ಲಿ ಪಾಕಿಸ್ತಾನಕ್ಕೆ ಕಳುಹಿಸುವುದು ಯೋಗ್ಯವಾಗಿತ್ತು; ಆದರೆ ‘ಈಗಲೂ ಸಮಯ ಮೀರಿಲ್ಲ’, ಎಂದು ಯಾರಾದರೂ ಹೇಳಿದರೆ ತಪ್ಪು ತಿಳಿದುಕೊಳ್ಳಬಾರದು !

ಎ.ಎನ್.ಐ. ವಾರ್ತಾವಾಹಿನಿಯೊಂದಿಗೆ ಮಾತನಾಡುವಾಗ ಎಂ.ಐ.ಎಂ.ನ ಅಧ್ಯಕ್ಷ ಮತ್ತು ಸಂಸದ ಅಸದುದ್ದೀನ ಓವೈಸಿಯವರು ಈ ವಿವಾದದ ಬಗ್ಗೆ ಮಾತನಾಡಿ, ನಾನು ಟಿಪ್ಪು ಸುಲ್ತಾನನ ಹೆಸರನ್ನು ಪದೇ ಪದೇ ತೆಗೆದುಕೊಳ್ಳುವೆನು, ನೀವು ಏನು ಮಾಡುತ್ತೀರೋ ಅದನ್ನು ನೋಡುತ್ತೇನೆ. ಹಾಗೆಯೇ ಕರ್ನಾಟಕ ಪ್ರದೇಶಾಧ್ಯಕ್ಷರ ಹೇಳಿಕೆಯ ಬಗ್ಗೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗೆ ಒಪ್ಪಿಗೆ ಇದೆಯೇ? ಭಾಜಪ ಕಟೀಲರ ಮೇಲೆ ಕ್ರಮ ಜರುಗಿಸುವರೇ ? ಎಂದು ಪ್ರಶ್ನಿಸಿ `ಕಟೀಲರ ಹೇಳಿಕೆ ಹಿಂಸೆ ಮತ್ತು ನರಸಂಹಾರ ನಡೆಸುವಂತಹವರಿಗೆ ಪ್ರೋತ್ಸಾಹ ನೀಡುವಂತಹದ್ದಾಗಿದೆ’, ಎಂದೂ ಹೇಳಿದರು.

ರಾಜಕೀಯ ಮುಖಂಡರಿಂದ ತಮ್ಮ ಅನುಕೂಲಕ್ಕೆ ತಕ್ಕಂತೆ ಟಿಪ್ಪು ಸುಲ್ತಾನನ ಹೆಸರಿನ ಉಪಯೋಗ – ಟಿಪ್ಪು ಸುಲ್ತಾನನ ವಂಶಜರು

ರಾಜಕೀಯ ಮುಖಂಡರು ತಮಗೆ ಬೇಕಾದಂತೆ ಟಿಪ್ಪು ಸುಲ್ತಾನನ ಹೆಸರನ್ನು ಉಪಯೋಗಿಸುತ್ತಾರೆ. ಹೀಗೆ ಮಾಡಲು ಅವರಿಗೆ ಯಾವುದೇ ಅಧಿಕಾರವಿಲ್ಲ. ಇನ್ನು ಮುಂದೆ ಟಿಪ್ಪು ಸುಲ್ತಾನನ ಹೆಸರನ್ನು ದುರುಪಯೋಗ ಪಡಿಸುಕೊಳ್ಳುವವರ ವಿರುದ್ಧ ನಾವು ನಷ್ಟ ಪರಿಹಾರದ ಮೊಕದ್ದಮೆ ದಾಖಲಿಸುತ್ತೇವೆ ಎಂದು ಟಿಪ್ಪು ಸುಲ್ತಾನನ ವಂಶಜರಾದ ಮನ್ಸೂರ ಅಲಿ ಇವರು ಪ್ರತಿಕ್ರಿಯೆ ವ್ಯಕ್ತಪಡಿಸಿದರು. (ಓವೈಸಿಯವರ ವಿರುದ್ಧ ಮನ್ಸೂರ ಅಲಿ ಮೊಕದ್ದಮೆ ದಾಖಲಿಸುವ ಧೈರ್ಯ ತೋರಿಸುವರೇ ? – ಸಂಪಾದಕರು)