ಪಲಾಮೂ (ಝಾರಖಂಡ) ನಲ್ಲಿ ಮತಾಂಧ ಮುಸಲ್ಮಾನರಿಂದ ಮಹಾಶಿವರಾತ್ರಿಯ ಕಮಾನುಗಳನ್ನು ವಿರೋಧಿಸಿ ಹಿಂಸಾಚಾರ

  • ಮಸೀದಿಯಿಂದ ಹಿಂದೂಗಳ ಮೇಲೆ ಕಲ್ಲು ತೂರಾಟ, ಪ್ರತ್ಯುತ್ತರವಾಗಿ ಮಸೀದಿಯ ಮೇಲೆ ಕಲ್ಲು ತೂರಾಟ

  • ಮಸೀದಿ ಹೊರಗೆ ಅಂಗಡಿಗಳಿಗೆ ಬೆಂಕಿ

  • ಮನೆ, ಅಂಗಡಿ, ದ್ವಿಚಕ್ರ ವಾಹನ ಮುಂತಾದವುಗಳಿಗೆ ಬೆಂಕಿ

ಪಲಾಮೂ (ಝಾರಖಂಡ) – ಝಾರಖಂಡನ ಪಲಾಮು ಜಿಲ್ಲೆಯ ಪಾಂಕಿಯ ಮಸೀದಿ ಚೌಕದಲ್ಲಿ ಮಹಾಶಿವರಾತ್ರಿ ನಿಮಿತ್ತ ತೋರಣದ್ವಾರ (ಕಮಾನ) ಹಾಕಿದ್ದರಿಂದ ಮತಾಂಧ ಮುಸಲ್ಮಾನರು ಹಿಂದೂಗಳ ಮೇಲೆ ದಾಳಿ ನಡೆಸಿದ್ದರಿಂದ ಅಲ್ಲಿ ಹಿಂಸಾಚಾರ ನಡೆಯಿತು. ಇದರಲ್ಲಿ ಮನೆಗಳು, ಅಂಗಡಿಗಳು, ದ್ವಿಚಕ್ರ ವಾಹನ ಮುಂತಾದವನ್ನು ಸುಡುವುದರೊಂದಿಗೆ ಇಲ್ಲಿ ಮಸೀದಿಯ ಮೇಲೆ ಕಲ್ಲು ತೂರಾಟ ಮಾಡಲಾಯಿತು. ಈ ಹಿಂಸಾಚಾರದಲ್ಲಿ 18 ಕ್ಕಿಂತ ಹೆಚ್ಚು ಜನರು ಗಾಯಗೊಂಡರು. ಇದರಲ್ಲಿ ಕೆಲವು ಪೊಲೀಸ ಸಹಿತ ಉಪ ಅಧೀಕ್ಷಕ ಆಲೋಕ ಕುಮಾರ ಇವರೂ ಗಾಯಗೊಂಡಿದ್ದಾರೆ. ಇಲ್ಲಿ ದೊಡ್ಡ ಪ್ರಮಾಣದಲ್ಲಿ ಪೊಲೀಸರನ್ನು ನಿಯುಕ್ತಿಗೊಳಿಸಲಾಗಿದೆ.

1. ಪಾಂಕಿಯ ರಾಹೆವೀರ ಗುಡ್ಡದ ಮೇಲಿನ ಶಿವಮಂದಿರದಲ್ಲಿ ಪ್ರತಿವರ್ಷ ಮಹಾಶಿವರಾತ್ರಿ ಆಚರಿಸಲಾಗುತ್ತದೆ. ಇಲ್ಲಿ ಫೆಬ್ರವರಿ 18 ರಂದು ಮಹಾಶಿವರಾತ್ರಿಯಿದೆ. ಈ ಹಿನ್ನೆಲೆಯಲ್ಲಿ ಮಸೀದಿ ಚೌಕದಲ್ಲಿ ತೋರಣದ ಕಮಾನು ನಿರ್ಮಾಣ ಮಾಡಲಾಗುತ್ತಿತ್ತು. ಇದಕ್ಕಾಗಿ ಸಾಮಗ್ರಿಗಳನ್ನು ತೆಗೆದುಕೊಂಡು ಕೆಲಸಗಾರರು ತಲುಪಿದ್ದರು. ಆ ಸಮಯದಲ್ಲಿ ಮುಸಲ್ಮಾನರು ಅವರಿಗೆ ತೋರಣದ ದ್ವಾರವನ್ನು ನಿರ್ಮಿಸದಂತೆ ತಡೆದರು. ಅವರು, `ಇಲ್ಲಿ ಮಸೀದಿಯಿರುವುದರಿಂದ ತೋರಣದ ದ್ವಾರವನ್ನು ನಿರ್ಮಿಸಬಾರದು’ ಎಂದು ಹೇಳಿದ್ದರು.’ (ಮುಸಲ್ಮಾನರ `ಸರ್ವಧರ್ಮಸಮಭಾವ’ ! ಇಂತಹ ಸಮಯದಲ್ಲಿ ಜಾತ್ಯತೀತವಾದಿಗಳು, ಪ್ರಗತಿ(ಅಧೋ)ಪರರು ಯಾವ ಬಿಲದಲ್ಲಿ ಅಡಗಿರುತ್ತಾರೆ ?- ಸಂಪಾದಕರು) ಈ ಕುರಿತು ವಾದ ನಡೆಯಿತು. ತದನಂತರ ಕೆಲಸಗಾರರು ಅಲ್ಲಿಂದ ಹೋದರು.

2. ಮರುದಿನ ಬೆಳಗ್ಗೆ ಮತ್ತೆ ಕೆಲವರು ಕಮಾನು ಮಾಡಲು ಮಸೀದಿ ಚೌಕ್ ತಲುಪಿದರು. ಆಗ ಅಲ್ಲಿ ಮುಸ್ಲಿಮರು ಜಮಾಯಿಸಿದರು. ಈ ಬಗ್ಗೆ ಮಾಹಿತಿ ಪಡೆದ ಪೊಲೀಸರು ಅಲ್ಲಿಗೆ ಆಗಮಿಸಿದರು. ಇಬ್ಬರೊಂದಿಗೆ ಚರ್ಚಿಸಿದರು. ಈ ವೇಳೆ ಮುಸ್ಲಿಂರೊಬ್ಬರು ದೇವಸ್ಥಾನದ ಸಮಿತಿ ಸದಸ್ಯ ನಿರಂಜನ್ ಸಿಂಗ್ ಅವರ ತಲೆಗೆ ದೊಣ್ಣೆಯಿಂದ ಹೊಡೆದಿದ್ದಾರೆ. ಈ ವೇಳೆ ಆತನ ತಲೆಗೆ ಪೆಟ್ಟಾದ ಬಳಿಕ ಅಲ್ಲಿ ಹಿಂಸಾಚಾರ ಆರಂಭವಾಗಿದೆ. ಎರಡೂ ಕಡೆಯವರು ಪರಸ್ಪರ ಕಲ್ಲು ತೂರಾಟ ಆರಂಭಿಸಿದರು. ಮಸೀದಿಯಿಂದ ಕಲ್ಲು ತೂರಾಟ ಆರಂಭವಾದ ನಂತರ ಮಸೀದಿಯ ಮೇಲೆ ಕಲ್ಲುಗಳು ಮತ್ತು ತಂಪು ಪಾನೀಯಗಳ ಬಾಟಲಿಗಳನ್ನು ಎಸೆಯಲಾಯಿತು. ಅಲ್ಲದೆ ಮಸೀದಿ ಬಳಿಯ ಅಂಗಡಿಗಳಿಗೂ ಬೆಂಕಿ ಹಚ್ಚಲಾಗಿದೆ. ಇದಾದ ನಂತರ ಪೊಲೀಸರು ಹೆಚ್ಚಿನ ಪೊಲೀಸ್ ತುಕಡಿಗಳನ್ನು ಕರೆಸಿ ಪರಿಸ್ಥಿತಿಯನ್ನು ಹತೋಟಿಗೆ ತಂದರು. ಈಗ ಇಲ್ಲಿ ಸೆಕ್ಷನ್ 144 (ಜನಸಂದಣಿ ನಿಷೇಧ) ವಿಧಿಸಲಾಗಿದೆ. ಇಂಟರ್ನೆಟ್ ಕೂಡ ಸ್ಥಗಿತಗೊಂಡಿದೆ.

ಸಂಪಾದಕೀಯ ನಿಲುವು

ಝಾರಖಂಡನಲ್ಲಿ ‘ಝಾರಖಂಡ ಮುಕ್ತಿ ಮೋರ್ಚಾ’ ಹಿಂದೂದ್ವೇಷಿ ಸರಕಾರವಾಗಿರುವುದರಿಂದ ಅಲ್ಲಿ ಮತಾಂಧರು ಬಾಲಬಿಚ್ಚಿವೆ ಮತ್ತು ಅದ್ದರಿಂದಲೇ ಅವರು ಇಂತಹ ಕೃತ್ಯ ನಡೆಸುತ್ತಿದ್ದಾರೆ ! ಹಿಂದೂಗಳು ತಮ್ಮ ರಕ್ಷಣೆಗಾಗಿ ಹಿಂದುತ್ವನಿಷ್ಠರನ್ನು ಆರಿಸುವುದು ಆವಶ್ಯಕವಿದೆ !