‘ಬಂಗಾಳದ ಗಡಿಯಲ್ಲಿ ಗಡಿ ಭದ್ರತಾ ಪಡೆ ಭಯೋತ್ಪಾದನೆ ಮೂಡಿಸಿದೆ !'(ಅಂತೆ) – ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ

ವಿಧಾನಸಭೆಯಲ್ಲಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರ ಆರೋಪ !

ಎಡಬದಿಗೆ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ

ಕೋಲಕತ್ತಾ (ಬಂಗಾಳ) – ಬಂಗಾಳದಲ್ಲಿ ದೇಶದ ಇತರೆ ರಾಜ್ಯಗಳ ತುಲನೆಯಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಉತ್ತಮವಾಗಿದೆ. (ಇದಕ್ಕಿಂತ ದೊಡ್ಡ ಹಾಸ್ಯಾಸ್ಪದ ಮತ್ತೇನಾಗಿರಬಹುದು ? – ಸಂಪಾದಕ) ಹೀಗಿದ್ದರೂ ರಾಜ್ಯದ ಗಡಿ ಭಾಗದಲ್ಲಿ ಗಡಿ ಭದ್ರತಾ ಪಡೆ ಭಯೋತ್ಪಾದನೆ ಮೂಡಿಸಿದೆ. ಗಡಿಭಾಗದ ನಿರಪರಾಧಿ ಜನರು ಕೊಲ್ಲಲ್ಪಡುತ್ತಿದ್ದಾರೆ; ಆದರೆ ಈ ಹತ್ಯೆಯ ವಿಚಾರಣೆಗಾಗಿ ಕೇಂದ್ರಸರಕಾರವು ಒಂದು ವಿಚಾರಣಾ ಸಮಿತಿಯನ್ನು ರಚಿಸಲು ಕೂಡ ಕ್ರಮ ಕೈಗೊಂಡಿಲ್ಲ ಎಂದು ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರು ರಾಜ್ಯದ ವಿಧಾನಸಭೆಯಲ್ಲಿ ಹುರಿಳಿಲ್ಲದ ಆರೋಪ ಮಾಡಿದ್ದಾರೆ. (ಬಂಗಾಳದಲ್ಲಿ ಭಾಜಪ ಮತ್ತು ಇತರೆ ಹಿಂದೂ ಸಂಘಟನೆಗಳ ಕಾರ್ಯಕರ್ತದ ಹತ್ಯೆಗಳು ನಡೆದವು. ಇಂತಹ ಎಷ್ಟು ಘಟನೆಗಳ ವಿಚಾರಣೆ ಮಮತಾ ಬ್ಯಾನರ್ಜಿಯವರ ಸರಕಾರ ನಡೆಸಿದೆ ? ಮತ್ತು ಎಷ್ಟು ಜನರಿಗೆ ಶಿಕ್ಷೆ ನೀಡಲು ಪ್ರಯತ್ನಿಸಿದೆ ? ಎನ್ನುವುದನ್ನು ಅವರು ಹೇಳಬೇಕು ! – ಸಂಪಾದಕರು)

ಕೇಂದ್ರಸರಕಾರ ಹಸುವನ್ನು ಆಲಂಗಿಸುವ ಕರೆಯನ್ನು ಹಿಂಪಡೆದಿರುವ ಬಗ್ಗೆ ಮಮತಾ ಬ್ಯಾನರ್ಜಿಯವರು ಒಂದು ವೇಳೆ ಯಾವುದೇ ವ್ಯಕ್ತಿ ಹಸುವನ್ನು ಅಪ್ಪಿಕೊಳ್ಳಲು ಹೋದರೆ ಹಸು ಆ ವ್ಯಕ್ತಿಗೆ ಕೊಂಬಿನಿಂದ ತಿವಿದರೆ ಅಥವಾ ಒದ್ದರೆ ಏನಾಗುವುದು ? ಭಾಜಪ ಸರಕಾರ ಜನರಿಗೆ ಪರಿಹಾರ ನೀಡುವುದೇ? (ಬಂಗಾಳ ಹಾಗೂ ದೇಶದಲ್ಲಿ ಎಲ್ಲೆಡೆ ಗೋಹತ್ಯೆ ಹೆಚ್ಚಾಗುತ್ತಿದೆ. ಬಂಗಾಳದ ಬಾಂಗ್ಲಾದ ದೇಶದ ಗಡಿಯಲ್ಲಿ ಹಸುಗಳ ಕಳ್ಳಸಾಗಾಣಿಕೆ ಮಾಡಲಾಗುತ್ತಿದೆ. ಇದನ್ನು ತಡೆಯಲು ಮಮತಾ ಬ್ಯಾನರ್ಜಿಯವರ ಸರಕಾರ ಕಳೆದ 15 ವರ್ಷಗಳಲ್ಲಿ ಏನು ಪ್ರಯತ್ನ ಮಾಡಿದ್ದಾರೆ ಎನ್ನುವುದನ್ನು ಅವರು ಹೇಳಬೇಕು – ಸಂಪಾದಕರು) ಭಾಜಪ ಸರಕಾರ ಇಷ್ಟು ಕೀಳು ಮಟ್ಟಕ್ಕೆ ಹೋಗಿದೆಯೆಂದರೆ ಅದು ನೊಬೆಲ ಪುರಸ್ಕಾರ ಪಡೆದ ಅಮರ್ತ್ಯ ಸೇನ ಇವರನ್ನೂ ಅಪಮಾನಿಸಿದೆ. ( ‘ಜಯ ಶ್ರೀರಾಮ’ ಹೇಳಿದಾಗ ಮಮತಾ ಬ್ಯಾನರ್ಜಿಯವರಿಗೆ ಹೇಗೆ ಕೋಪ ಬರುತ್ತದೆಯೋ, ಅದು ಭಗವಾನ ಶ್ರೀರಾಮನ ಅವಮಾನವಲ್ಲದೇ ಮತ್ತೇನು ? – ಸಂಪಾದಕರು)

ಸಂಪಾದಕೀಯ ನಿಲುವು

ಗಡಿ ಕಾಯುವ ಒಂದು ದಳದ ಮೇಲೆ ಈ ರೀತಿಯ ಆರೋಪವು ಕೇವಲ ರಾಷ್ಟ್ರಘಾತುಕರೇ ಮಾಡಬಲ್ಲರು ! ಈ ರೀತಿಯ ಆರೋಪದಿಂದ ಮಮತಾ ಬ್ಯಾನರ್ಜಿಯವರ ಮಾನಸಿಕತೆ ಗಮನಕ್ಕೆ ಬರುತ್ತದೆ ! ಇದಕ್ಕಾಗಿಯೇ ಬಂಗಾಳದಲ್ಲಿ ರಾಷ್ಟ್ರಪತಿ ಆಡಳಿತ ಜಾರಿಗೊಳಿಸುವ ಆವಶ್ಯಕತೆಯಿದೆ !