ಬಿ.ಬಿ.ಸಿಯ ದೆಹಲಿ ಹಾಗೂ ಮುಂಬಯಿ ಕಾರ್ಯಾಲಯಗಳ ಮೇಲೆ ಆದಾಯ ತೆರಿಗೆ ವಿಭಾಗದ ಸಮೀಕ್ಷೆ

ವಿರೋಧಿ ಪಕ್ಷಗಳಿಂದ ಭಾಜಪ ಸರಕಾರಕ್ಕೆ ಟೀಕೆ

ನವದೆಹಲಿ – ಆದಾಯ ತೆರಿಗೆ ವಿಭಾಗವು ಬಿಬಿಸಿಯ ದೆಹಲಿ ಮತ್ತು ಮುಂಬಯಿ ಸಹಿತ ೩೦ ಸ್ಥಾನಗಳಲ್ಲಿ ಸಮೀಕ್ಷೆ ಆರಂಭಿಸಿದೆ. ದೆಹಲಿಯ ಸಮೀಕ್ಷೆಯಲ್ಲಿ ೬೦ ರಿಂದ ೭೦ ಅಧಿಕಾರಿಗಳ ತಂಡವಿದೆ. ಫೆಬ್ರವರಿ ೧೪ ರ ಬೆಳಗ್ಗಿನಿಂದ ಈ ಸಮೀಕ್ಷೆ ನಡೆಯುತ್ತಿದೆ. ‘ಇದು ದಾಳಿಯಲ್ಲ, ಸಮೀಕ್ಷೆಯಾಗಿದೆ’, ಎಂದು ತೆರಿಗೆ ವಿಭಾಗದವರು ಸ್ಪಷ್ಟಪಡಿಸಿದ್ದಾರೆ. ಈ ಸಮೀಕ್ಷೆಯ ಮೂಲಕ ಬಿಬಿಸಿಯ ಆರ್ಥಿಕ ಲೆಕ್ಕಪತ್ರಗಳನ್ನು ಪರಿಶೀಲಿಸಲಾಗುತ್ತಿದೆ. ಈ ಸಮೀಕ್ಷೆಯಿಂದ ಆದಾಯ ತೆರಿಗೆ ವಿಭಾಗದ ಅಧಿಕಾರಿಗಳು ಬಿಬಿಸಿಯ ಕಚೇರಿಯ ಸಿಬ್ಬಂದಿಗಳ ಸಂಚಾರಿವಾಣಿಗಳನ್ನು ಬಂದ್ ಮಾಡಿದ್ದಾರೆ. ಹಾಗೂ ಕಾರ್ಯಾಲಯದ ಹೊರಗೆ ಹೋಗುವುದು-ಬರುವುದಕ್ಕೂ ನಿರ್ಬಂಧ ಹೇರಲಾಗಿದೆ. ಆದಾಯ ತೆರಿಗೆ ವಿಭಾಗದ ಸೂತ್ರಗಳ ಮಾಹಿತಿಗನುಸಾರ ಬಿಬಿಸಿ ಅಂತರರಾಷ್ಟ್ರೀಯ ತೆರಿಗೆಯಲ್ಲಿ ಹೇರುಪೇರು ಮಾಡಿದೆಯೆಂಬ ಆರೋಪವಿದೆ. ಅದಕ್ಕೆ ಸಂಬಂಧಿಸಿ ಈ ಸಮೀಕ್ಷೆ ನಡೆಯುತ್ತಿದೆ.

೧. ಕಾಂಗ್ರೆಸ್ ಈ ಸಮೀಕ್ಷೆಯನ್ನು ಟೀಕಿಸುತ್ತಾ ಟ್ವೀಟ್ ಮಾಡುತ್ತಾ ‘ಇದು ಅಘೋಷಿತ ತುರ್ತುಪರಿಸ್ಥಿತಿ ಆಗಿದೆ’, ಎಂದು ಹೇಳಿದೆ. ಕಾಂಗ್ರೆಸ್ಸಿನ ಕಾರ್ಯದರ್ಶಿ ಜಯರಾಮ ರಮೇಶ ಇವರು, ನಾವು ಇಲ್ಲಿ ಅದಾನಿ ಇವರ ಪ್ರಕರಣದಲ್ಲಿ ಸಂಸತ್ತಿನ ವಿಚಾರಣ ಸಮಿತಿಯ ಬೇಡಿಕೆಯನ್ನು ಮಾಡುತ್ತಿದ್ದೇವೆ ಹಾಗೂ ಇನ್ನೊಂದು ಕಡೆ ಸರಕಾರ ಬಿಬಿಸಿಯ ಹಿಂದೆ ಬಿದ್ದಿದೆ. ‘ವಿನಾಶಕಾಲೇ ವಿಪರೀತಬುದ್ಧಿಃ |’, ಎಂದು ಹೇಳಿದರು. (ಅರ್ಥ : ವಿನಾಶಕಾಲ ಸಮೀಪಿಸಿದಾಗ ಬುದ್ಧಿ ಭ್ರಷ್ಟವಾಗುತ್ತದೆ.) (ಒಂದು ಅಂತರರಾಷ್ಟ್ರೀಯ ವಾರ್ತಾಸಂಸ್ಥೆ ಭಾರತದ ಪ್ರಧಾನಮಂತ್ರಿಯವರ ಪ್ರತಿಷ್ಠೆಯನ್ನು ಕಳಂಕಿಸುತ್ತಿರುವಾಗ ಆ ವಿಷಯದಲ್ಲಿ ಪರಸ್ಪರ ವೈರತ್ವವನ್ನು ಬದಿಗಿಟ್ಟು ಸಂಘಟಿತವಾಗಿ ವಿರೋಧಿಸುವ ಅವಶ್ಯಕತೆಯಿರುವಾಗ ಇಂತಹ ಹೇಳಿಕೆ ನೀಡುವ ರಾಷ್ಟ್ರಘಾತಕಿ ಕಾಂಗ್ರೆಸ್ಸಿಗರು ! – ಸಂಪಾದಕರು)

೨. ತೃಣಮೂಲ ಕಾಂಗ್ರೆಸ್ಸಿನ ಸಂಸದೆ ಮಹುಆ ಮೊಯಿತ್ರಾ ಇವರು, “ಬಿಬಿಸಿಯ ಕಚೇರಿಗಳ ಮೇಲೆ ಆದಾಯ ತೆರಿಗೆ ವಿಭಾಗದ ದಾಳಿ… ತುಂಬಾ ಚೆನ್ನಾಗಿದೆ… ಆಶ್ಚರ್ಯಕರವಾಗಿದೆ !”ಎಂದು ಹೇಳಿದರು.

ಬಿಬಿಸಿ ಎಂದರೇನು ?

‘ಬ್ರಿಟೀಶ್ ಬ್ರಾಡ್‌ಕಾಸ್ಟಿಂಗ್ ಕಾರ್ಪೊರೇಶನ್’ ಅಂದರೆ ‘ಬಿಬಿಸಿ’ ಇದು ಬ್ರಿಟೀಶ್ ಸರಕಾರದ ಸಂಸ್ಥೆಯಾಗಿದೆ. ಇದು ೪೦ ಭಾಷೆಗಳಲ್ಲಿ ವಾರ್ತೆಗಳನ್ನು ಪ್ರಸಾರ ಮಾಡುತ್ತದೆ. ಬ್ರಿಟೀಶ್ ಸಂಸತ್ತಿನಲ್ಲಿ ಅನುಮೋದಿಸಿದ ಅನುದಾನದಲ್ಲಿ ಅದು ನಡೆಯುತ್ತದೆ. ಅದರ ವ್ಯವಸ್ಥಾಪನೆಯನ್ನು ವಿದೇಶ ಮತ್ತು ರಾಷ್ಟ್ರೀಯ ಸ್ತರದ ಕಾರ್ಯಾಲಯಗಳಿಂದ ನಡೆಸಲಾಗುತ್ತದೆ. ಬಿಬಿಸಿಯ ವ್ಯವಹಾರವು ಡಿಜಿಟಲ್, ಸಂಸ್ಕೃತಿ, ಮಾಧ್ಯಮಗಳು ಮತ್ತು ಕ್ರೀಡೆ ಈ ವಿಭಾಗಗಳ ಮೂಲಕ ನಡೆಯುತ್ತದೆ. ಬಿಬಿಸಿ ೧೯೨೭ ರಲ್ಲಿ ಆರಂಭವಾಗಿದೆ.

ಸಂಪಾದಕೀಯ ನಿಲುವು

ಭಾರತದ್ವೇಷಿ ಹಾಗೂ ಹಿಂದೂ ದ್ವೇಷಿ ಬಿಬಿಸಿಯಲ್ಲಿ ಯಾವುದೇ ಅವ್ಯವಹಾರ ನಡೆಯುತ್ತಿದ್ದರೆ, ಅದನ್ನು ಹುಡುಕಲೇ ಬೇಕು ! ಭಾರತದಲ್ಲಿದ್ದು ಭಾರತ ಹಾಗೂ ಹಿಂದೂಗಳ ನಿಂದನೆ ಮಾಡುವ ಬಿಬಿಸಿಯಿಂದ ಅವ್ಯವಹಾರ ನಡೆಯುತ್ತಿದ್ದರೆ, ಅದರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲೇ ಬೇಕು !