ಅಮೇರಿಕಾದ ಮಿಶಿಗನ್ ವಿದ್ಯಾಪೀಠದಲ್ಲಿ ಗುಂಡು ಹಾರಾಟ, ಮೂವರ ಸಾವು

ಮಿಶಿಗನ್ (ಅಮೇರಿಕಾ) – ಇಲ್ಲಿನ ಮಿಶಿಗನ್ ಸ್ಟೇಟ್ ಯುನಿವರ್ಸಿಟಿಯ ಪರಿಸರದಲ್ಲಿ ಗುಂಡುಹಾರಾಟದ ೨ ಘಟನೆಗಳು ಘಟಿಸಿವೆ. ಇದರಲ್ಲಿ ಇಲ್ಲಿಯವರೆಗೆ ೩ ಜನರು ಮೃತರಾಗಿದ್ದು ಕನಿಷ್ಠ ೫ ವಿದ್ಯಾರ್ಥಿಗಳು ಗಾಯಗೊಂಡಿದ್ದಾರೆ. ಇಲ್ಲಿ ಗುಂಡು ಹಾರಾಟ ಮಾಡಿದವನು ಕೂಡ ತನ್ನ ಮೇಲೆ ಗುಂಡು ಹೊಡೆದುಕೊಂಡಿರುವುದರಿಂದ ಅವನು ಕೂಡ ಸಾವನ್ನಪ್ಪಿದ್ದಾನೆ. ಈ ವಿದ್ಯಾಪೀಠದ ಬರ್ಕ್ ಹಾಲ್ ಮತ್ತು ಐ.ಎಮ್. ಈಸ್ಟ್ ಸೆಂಟರ್‌ನಲ್ಲಿ ಈ ಘಟನೆ ಘಟಿಸಿದೆ. ಈ ಎರಡು ಸ್ಥಳಗಳಲ್ಲಿನ ಅಂತರ ಸುಮಾರು ಒಂದುವರೆ ಕಿಲೋಮೀಟರ್ ಇದೆ. ಈ ಗುಂಡು ಹಾರಾಟದ ಹಿಂದಿನ ಕಾರಣ ಇನ್ನೂ ತಿಳಿದಿಲ್ಲ.

ಸಂಪಾದಕೀಯ ನಿಲುವು

‘ಅಮೇರಿಕಾದಂತಹ ಅಭಿವೃದ್ಧಿಹೊಂದಿದ ಸಮಾಜದಲ್ಲಿ ಗುಂಡುಹಾರಾಟದ ಘಟನೆ ಪದೇ ಪದೇ ಏಕೆ ನಡೆಯುತ್ತದೆ ?’, ಎಂಬುದನ್ನು ಸಮಾಜ ಶಾಸ್ತ್ರಜ್ಞರು ವಿಚಾರ ಮಾಡುವರೇ ?