LTTE ಮುಖಂಡ ಪ್ರಭಾಕರನ್ ಜೀವಂತ ಮತ್ತು ಸುದೃಢನಾಗಿದ್ದು ಆದಷ್ಟು ಬೇಗನೆ ಜಗತ್ತಿನೆದುರಿಗೆ ಬರಲಿದ್ದಾನೆ ! – ಪಾಝಾ ನೆದುಮಾರನ್, ‘ವರ್ಲ್ಡ ಕಾನ್ಫೆಡರೇಶನ್ ಆಫ್ ತಮಿಳ’ನ ಅಧ್ಯಕ್ಷ

‘ವರ್ಲ್ಡ ಕಾನ್ಫೆಡರೇಶನ್ ಆಫ್ ತಮಿಳ’ನ ಅಧ್ಯಕ್ಷ ಪಾಝಾ ನೆದುಮಾರನ್ ಇವರ ದಾವೆ !

ಪಾಝಾ ನೆದುಮಾರನ್

ಚೆನ್ನೈ (ತಮಿಳುನಾಡು) – ‘ಲಿಬರೇಶನ ಟಾಯಗರ ಆಫ್ ತಮಿಳ ಇಳಂ’ ಅMdre ‘LTTE’ ಈ ಸಂಘಟನೆಯ ಮುಖಂಡ ಪ್ರಭಾಕರನ್ ಜೀವಂತವಾಗಿದ್ದಾನೆ ಎಂದು ತಮಿಳುನಾಡಿನ ಕಾಂಗ್ರೆಸ ಮಾಜಿ ಮುಖಂಡ ಮತ್ತು ‘ವರ್ಲ್ಡ ಕಾನ್ಫರಡೇಶನ ಆಫ್ ತಮಿಳ’ನ ಅಧ್ಯಕ್ಷ ಪಾಝಾ ನೆದುಮಾರನ ಅವರು ದಾವೆ ಮಾಡಿದ್ದಾರೆ. ಅವರು ಮಾತನಾಡುತ್ತಾ, ಪ್ರಭಾಕರನ ಜೀವಂತ ಮತ್ತು ಸುದೃಢನಾಗಿದ್ದಾನೆ. ಅವನು ಆದಷ್ಟು ಬೇಗನೆ ಜಗತ್ತಿನೆದುರಿಗೆ ಬರಲಿದ್ದಾನೆ. ಇದರಿಂದ ಅವನ ಸಾವಿನ ವಿಷಯದಲ್ಲಿ ಹರಡಿರುವ ಗಾಳಿ ಸುದ್ದಿಗೆ ಪೂರ್ಣವಿರಾಮ ಬೀಳಲಿದೆ ಎಂದು ಹೇಳಿದರು.

1. ನೆದುಮಾರನ್ ಇವರ ದಾವೆಯ ಬಳಿಕ ತಮಿಳುನಾಡಿನ ಕಾಂಗ್ರೆಸ್ ಪ್ರದೇಶಾಧ್ಯಕ್ಷ ಕೆ.ಎಸ್. ಅಳಗಿರಿ ಇವರು, ಈ ದಾವೆಯಿಂದ ನನಗೆ ಅತ್ಯಂತ ಸಂತೋಷವಾಗಿದೆ. ಪ್ರಭಾಕರನ ಎದುರಿಗೆ ಬಂದರೆ ನಾನು ಅವನನ್ನು ಭೇಟಿಯಾಗುತ್ತೇನೆ. ನನಗೆ ಅವನಿಂದ ಯಾವುದೇ ಅಡಚಣೆಯಿಲ್ಲ, ಎಂದು ಹೇಳಿದ್ದಾರೆ.

2. LTTE ಯು ಶ್ರೀಲಂಕಾದಲ್ಲಿ ಸ್ವತಂತ್ರ ತಮಿಳು ದೇಶದ ಬೇಡಿಕೆಗಾಗಿ ಶಸ್ತ್ರಸಜ್ಜಿತ ಹೋರಾಡಿದ ಸಂಘಟನೆಯಾಗಿದೆ. 1976 ರಿಂದ ಸಂಘಟನೆಯು ಪ್ರಭಾಕರನ್ ಇವರ ನಾಯಕತ್ವದಲ್ಲಿ ಹೋರಾಟ ನಡೆಸಿದ್ದರು. 2009 ರಲ್ಲಿ ಶ್ರೀಲಂಕಾದ ಸೈನ್ಯವು LTTE ಯನ್ನು ಪೂರ್ಣ ನಷ್ಟಗೊಳಿಸಿತು. ಆ ಸಮಯದಲ್ಲಿ ಪ್ರಭಾಕರನ್ ನನ್ನು ಕೂಡ ಹತ್ಯೆ ಮಾಡಿದ್ದರು ಮತ್ತು ಅವನ ಛಾಯಾಚಿತ್ರಗಳನ್ನು ಪ್ರಸಾರ ಮಾಡಿತ್ತು. ಅವನ ಶವವನ್ನು ಶ್ರೀಲಂಕಾದ ಪ್ರಸಾರ ಮಾಧ್ಯಮದಿಂದಲೂ ತೋರಿಸಲಾಗಿತ್ತು. ತದನಂತರ ಒಂದು ವಾರದ ವರೆಗೆ ಲಿಟ್ಟೆಯ ವಕ್ತಾರ ಸೆಲ್ವಾರಾಸಾ ಪದ್ಮನಾಥನ್ ಇವರು ಪ್ರಭಾಕರನ್ ಮರಣ ಹೊಂದಿದ್ದಾನೆ ಎಂದು ಒತ್ತು ನೀಡಿದ್ದನು. ಹಾಗೆಯೇ ಡಿ.ಎನ್.ಎ. (ಅನುವಂಶಿಕ ಗುಣ) ಪರೀಕ್ಷಣೆಯಲ್ಲಿಯೂ ಈ ಮೃತದೇಹ ಪ್ರಭಾಕರನ್ ಅವರದ್ದಾಗಿದೆಯೆಂದು ದೃಢಪಟ್ಟಿತ್ತು.