‘ಕಾಶ್ಮೀರದ ಮೂಲ ನಿವಾಸಿ ಅಲ್ಲದಿರುವವರಿಗೆ ಇಲ್ಲಿ ವಾಸಿಸಲು ಬಿಡುವುದಿಲ್ಲ !’ (ಅಂತೆ)

‘ಜಮ್ಮು ಅಂಡ್ ಕಾಶ್ಮೀರ ಅಪನಿ ಪಾರ್ಟಿ’ ಪಕ್ಷದ ಸಂಸ್ಥಾಪಕ ಮತ್ತು ಅಧ್ಯಕ್ಷ ಅಲ್ತಾಫ ಬುಖಾರಿ ಇವರ ಬೆದರಿಕೆ !

ಅಲ್ತಾಫ್ ಬುಖಾರಿ

ಶ್ರೀನಗರ (ಜಮ್ಮು ಕಾಶ್ಮೀರ) – ಯಾರು ಜಮ್ಮು-ಕಾಶ್ಮೀರದ ಮೂಲ ನಿವಾಸಿಗಳಾಗಿಲ್ಲ, ಅಂತಹ ವ್ಯಕ್ತಿಗಳಿಗೆ ನಾವು ಇಲ್ಲಿ ಇರಲು ಬಿಡುವುದಿಲ್ಲ. ಅವರ ರಕ್ಷಣೆಗಾಗಿ ಎಷ್ಟೇ ಬಂದೋಬಸ್ತ ಮಾಡಿದರೂ ನಾವು ಹಾಗಾಗಲು ಬಿಡುವುದಿಲ್ಲ, ಎಂದು ‘ಜಮ್ಮು ಅಂಡ್ ಕಾಶ್ಮೀರ್ ಅಪನಿ ಪಾರ್ಟಿ’ ಪಕ್ಷದ ಸಂಸ್ಥಾಪಕ ಮತ್ತು ಅಧ್ಯಕ್ಷ ಅಲ್ತಾಫ್ ಬುಖಾರಿ ಒಂದು ಸಭೆಯಲ್ಲಿ ಹೇಳಿದರು.

೧. ಬುಖಾರಿ ಮಾತು ಮುಂದುವರಿಸಿ, ಈ ಭೂಮಿ ನಮ್ಮದಾಗಿದೆ ಮತ್ತು ಇಲ್ಲಿ ಜಮ್ಮು-ಕಾಶ್ಮೀರದಲ್ಲಿನ ಜನರ ಹಕ್ಕಿದೆ. ಹೊರಗಿನ ಜನರನ್ನು ಇಲ್ಲಿಗೆ ತಂದು ವಾಸಿಸಲು ಯಾರಾದರೂ ಅನುಕೂಲ ಮಾಡಿಕೊಟ್ಟರೇ ನಾವೇನು ಬಳೆ ತೊಟ್ಟಿಕೊಂಡು ಕುಳಿತ್ತಿಲ್ಲ, ಎಂದು ಬೆದರಿಕೆ ನೀಡಿದರು.

೨. ಕಾಶ್ಮೀರಿ ಹಿಂದುಗಳ ಮೇಲೆ ದೌರ್ಜನ್ಯದ ಬಗ್ಗೆ ಬುಖಾರಿ ಕೀಳಾಗಿ ಮಾತಾಡುತ್ತಾ, ಬೇರೆ ಕಡೆ ಹೋಗಿ ನಾಟಕ ಮಾಡುವ ಜನರುನಾವಲ್ಲ. (ಕಾಶ್ಮೀರಿ ಹಿಂದೂಗಳಿಗಾಗಿ) ಕಟ್ಟಿರುವ ಮನೆಗಳು ಏನು ಮಾಡಬೇಕು, ಅದರ ನಿರ್ಣಯ ಇಲ್ಲಿ ಆರಿಸಿ ಬಂದ ಸರಕಾರ ತೆಗೆದುಕೊಳ್ಳುವುದು, ನಾವು ತೆಗೆದುಕೊಳ್ಳುವೆವು ಎಂದು ಹೇಳಿದರು.

ಸಂಪಾದಕರ ನಿಲುವು

ಕಾಶ್ಮೀರ ಏನು ಬುಖಾರಿ ಇವರ ವೈಯಕ್ತಕ ಆಸ್ತಿಯೇ ? ಕಾಶ್ಮೀರದ ರಕ್ಷಣೆಗಾಗಿ, ವಿಕಾಸಕ್ಕಾಗಿ ಭಾರತದಲ್ಲಿನ ಪ್ರತಿಯೊಬ್ಬ ನಾಗರೀಕರು ತ್ಯಾಗ ಮಾಡಿದ್ದಾರೆ ! ಈ ರೀತಿಯ ಹೇಳಿಕೆ ನೀಡುವವರ ವಿರುದ್ಧ ದೇಶದ್ರೋಹದ ಅಪರಾಧ ದಾಖಲಿಸಿ ಅವರನ್ನು ಜೈಲಿಗೆ ಅಟ್ಟುಬೇಕು !