ಖಲಿಸ್ತಾನಿಗಳ ನಿರ್ನಾಮ !

ಆಸ್ಟ್ರೇಲಿಯಾದಲ್ಲಿ ಭಾರತದ ಧ್ವಜಗಳನ್ನು ಹಿಡಿದು ಕೊಂಡು ಹೋಗುತ್ತಿದ್ದವವರ ಮೇಲೆ ಅಲ್ಲಿನ ಕೆಲವು ಖಲಿಸ್ತಾನವಾದಿಗಳು ದಾಳಿ ಮಾಡಿ ಅವರನ್ನು ಥಳಿಸಿದರು ಮತ್ತು ಅವರ ಕೈಯಲ್ಲಿನ ಧ್ವಜವನ್ನೂ ಅವಮಾನಿಸಿದರು. ಆಸ್ಟ್ರೇಲಿಯಾದಲ್ಲಿಯೂ ಈಗ ಖಲಿಸ್ತಾನಿಗಳ ಪ್ರಭುತ್ವ ಹೆಚ್ಚುತ್ತಿರುವುದಕ್ಕೆ ಇದೊಂದು ಉದಾಹರಣೆಯಾಗಿದೆ. ಭಾರತದಲ್ಲಿ ಖಲಿಸ್ತಾನಿಗಳ ಆಕ್ರಮಣವನ್ನು ತಡೆಯಲು ಸರಕಾರ ಯಾವ ಕಟ್ಟುನಿಟ್ಟಿನ ನೀತಿ ಯನ್ನು ಅನುಸರಿಸಲು ಹೊರಟಿದೆ ಎಂಬುದು ಈ ಕಾರಣದಿಂದ ಬಹಿರಂಗವಾಗುವುದು ಅಪೇಕ್ಷಿತವಿದೆ. ೧೮ ಸೆಪ್ಟೆಂಬರ್ ೨೦೨೨ ಈ ದಿನ ಕೆನಡಾದ ಬ್ರೈಮ್ಪಟನ್ ನಗರದಲ್ಲಿ ೧೦ ಸಾವಿರಕ್ಕಿಂತ ಹೆಚ್ಚು ಖಲಿಸ್ತಾನವಾದಿಗಳು ಒಟ್ಟು ಸೇರಿದರು. ಭಾರತದಿಂದ ಪಂಜಾಬ ಪ್ರಾಂತವನ್ನು ಬೇರ್ಪಡಿಸುವಂತೆ ಒತ್ತಾಯಿಸುವ ‘ಸಿಕ್ಖ್ ಫಾರ್ ಜಸ್ಟಿಸ್ ಈ ಖಲಿಸ್ತಾನಿ ಸಂಘಟನೆಯು ಈ ಭಾರತವಿರೋಧಿ ಆಂದೋಲನವನ್ನು ನಡೆಸಿತು. ಈ ಸಮಯ ದಲ್ಲಿ ಕೆನಡಾ ಸರಕಾರವು ಅಭಿವ್ಯಕ್ತಿಸ್ವಾತಂತ್ರ್ಯದ ಹೆಸರಿನಲ್ಲಿ ಈ ಆಂದೋಲನಕ್ಕೆ ಅನುಮತಿ ನೀಡಿತು. ಇಷ್ಟು ದೊಡ್ಡ ಪ್ರಮಾಣದಲ್ಲಿ ಭಾರತವಿರೋಧಿ ಸಂಘಟನೆಗಳು ಹಬ್ಬಲು ಕೆನಡಾ ಅವಕಾಶ ನೀಡುತ್ತಿರುವುದು, ಇದು ಭಾರತದ ವಿದೇಶಾಂಗ ನೀತಿಯ ಬಗ್ಗೆ ವಿಚಾರ ಮಾಡುವಂತಹ ವಿಷಯವಾಗಿದೆ; ಏಕೆಂದರೆ ಈ ಘಟನೆಯ ನಂತರ ವಿದೇಶಾಂಗ ಸಚಿವಾಲಯದ ವಕ್ತಾರರಾದ ಅರಿಂದಮ್ ಬಾಗಚಿಯವರು ಈ ಘಟನೆಯನ್ನು ಹಾಸ್ಯಾಸ್ಪದವೆಂದು ಹೇಳಿ ‘ದೇಶವನ್ನು ಒಡೆಯಲು ಮೂಲಭೂತವಾದಿಗಳ ಒಳಸಂಚಾಗಿದೆ, ಎಂದರು. ಭಾರತವನ್ನು ಒಡೆಯುವ ಸಂಚು ಹಾಸ್ಯಾಸ್ಪದವಲ್ಲ, ಅದು ಆಯೋಜನಾಬದ್ಧ ಮತ್ತು ವಿಚಾರಪೂರ್ವಕವಾಗಿ ಮಾಡಿರುವಂತಹದ್ದಾಗಿದೆ.

ಖಲಿಸ್ತಾನಿಗಳ ಇತಿಹಾಸ ಮತ್ತು ಯೋಜನೆ

೯೩ ವರ್ಷಗಳ ಹಿಂದೆ ಮೋತಿಲಾಲ ನೆಹರು ಇವರು ‘ಪೂರ್ಣ ಸ್ವರಾಜ್ಯದ ಬಗ್ಗೆ ಪ್ರಸ್ತಾಪಿಸಿದರು. ಆ ಸಮಯದಲ್ಲಿ ೩ ಗುಂಪುಗಳು ಅವರನ್ನು ವಿರೋಧಿಸಿತು. ಅವುಗಳ ಪೈಕಿ ಮೊದಲ ಗುಂಪು ಜಿನ್ನಾರ ಮುಸ್ಲಿಂ ಲೀಗ್ ಆಗಿತ್ತು, ಎರಡನೇ ಗುಂಪು ಡಾ. ಆಂಬೇಡಕರರ ದಲಿತರ ಗುಂಪಾಗಿತ್ತು ಮತ್ತು ಮೂರನೇಯ ಗುಂಪು ತಾರಾಸಿಂಹರ ಶಿರೋಮಣಿ ಅಕಾಲಿ ದಳದ್ದಾಗಿತ್ತು. ಇದು ಖಲಿಸ್ತಾನವಾದಿಗಳ ಮೂಲವಾಗಿತ್ತು. ಅಂದಿನಿಂದ ಸಿಕ್ಖರಿಗೆ ಭಾರತದಲ್ಲಿನ ಒಂದು ಪ್ರಾಂತವು ಪ್ರತ್ಯೇಕವಾಗಿ ಬೇಕಿತ್ತು. ಇಂದಿರಾ ಗಾಂಧಿಯವರು ೧೯೮೪ ರಲ್ಲಿ ಹಮ್ಮಿಕೊಂಡ ‘ಆಪರೇಶನ್ ಬ್ಲ್ಯೂ ಸ್ಟಾರ್ ನಂತರ ‘ಭಾರತವನ್ನು ಒಡೆಯುವ ಪ್ರತ್ಯೇಕತಾವಾದಿಗಳ ಉದ್ದೇಶವು ಕೊನೆಗೊಂಡಿತು ಎಂದು ಭಾರತಿಯರಿಗೆ ಅನಿಸುತ್ತಿರುವಾಗಲೇ ಇಂದಿರಾ ಗಾಂಧಿಯವರ ಹತ್ಯೆಯಾಯಿತು. ಅನಂತರ ವಿದೇಶದಲ್ಲಿ ಖಲಿಸ್ತಾನವಾದಿಗಳ ಸಂಘಟನೆ ರಹಸ್ಯವಾಗಿ ಬೆಳೆಯುತ್ತಲೇ ಇತ್ತು. ಗುರಪತವಂತಸಿಂಹ ಪನ್ನು ಇವನು ೨೦೦೭ ರಲ್ಲಿ ಅಮೇರಿಕಾದಲ್ಲಿ ಸ್ಥಾಪಿಸಿದ ‘ಸಿಕ್ಖ್ ಫಾರ್ ಜಸ್ಟಿಸ್ ಈ ಭಾರತವಿರೋಧಿ ಸಂಘಟನೆಯು ಇಂದು ಜಗತ್ತಿನಾದ್ಯಂತ ‘ಜನಾಭಿಪ್ರಾಯವನ್ನು ಪಡೆಯುವ ಹೆಸರಿನಲ್ಲಿ ಭಾರತವಿರೋಧಿ ದ್ವೇಷವನ್ನು ಹರಡಿ ಖಲಿಸ್ತಾನದ ಬೇಡಿಕೆಯನ್ನಿಡುತ್ತಾ ಖಲಿಸ್ತಾನಿವಾದಿಗಳ ಸಂಘಟನೆಯನ್ನು ಮಾಡುತ್ತಿದೆ. ದೆಹಲಿಯ ಶಾಹಿನಬಾಗ ಆಂದೋಲನದಲ್ಲಿ ಸಾಕಷ್ಟು ಆಹಾರವನ್ನು ಪೂರೈಸಿದವರು ಖಲಿಸ್ತಾನವಾದಿಗಳಾಗಿದ್ದರು ಮತ್ತು ಕೃಷಿ ಕಾಯಿದೆ ರದ್ದುಗೊಳಿಸಲು ದೆಹಲಿಯ ರಸ್ತೆಯಲ್ಲಿ ೧ ವರ್ಷದಾದ್ಯಂತ ಸರಕಾರದ ವಿರುದ್ಧ ಆಂದೋಲನಗಳನ್ನು ಮಾಡಿ ಸರಕಾರವನ್ನು ಇಕ್ಕಟ್ಟಿಗೆ ಸಿಲುಕಿಸುವುದರ ಹಿಂದೆ ಮತ್ತು ಕೊನೆಗೆ ಆ ಕಾನೂನನ್ನು ರದ್ದು ಪಡಿಸುವುದರ ಹಿಂದೆ ಗುಪ್ತ ಶಕ್ತಿಯು ಸಹ ಖಲಿಸ್ತಾನದ್ದಾಗಿತ್ತು, ಎಂಬುದು ರಹಸ್ಯವಾಗಿ ಉಳಿದಿಲ್ಲ. ಈ ಘಟನೆಗಳಿಂದ ಭಾರತವಿರೋಧಿ ಖಲಿಸ್ತಾನಿಗಳ ಶಕ್ತಿ, ಭಾರತದ ಹೊರಗೆ ಅವರ ಬೆಳವಣಿಗೆ ಮತ್ತು ವಿದೇಶದಿಂದ ಈ ಪ್ರತ್ಯೇಕತಾವಾದಿಗಳಿಗೆ ದೊರಕುವ ಹೇರಳ ಆರ್ಥಿಕ ಸಹಾಯ ಇವೆಲ್ಲವೂ ಬಹಿರಂಗಗೊಂಡಿದೆ. ೫ ಜನವರಿ ೨೦೨೨ ರಂದು ಪಂಜಾಬ್‌ನ ಫಿರೋಜಪುರನಲ್ಲಿ ಭಾಜಪದ ‘ರ‍್ಯಾಲಿಯಲ್ಲಿ ಪಾಲ್ಗೊಳ್ಳಲು ತೆರಳುತ್ತಿದ್ದ ಪ್ರಧಾನಿ ಮೋದಿಯವರಿಗೆ ಮಾರ್ಗದ ಸೇತುವೆಯೊಂದರಲ್ಲಿ ನಿಲ್ಲಬೇಕಾಯಿತು ಮತ್ತು ಭದ್ರತೆಯ ದೃಷ್ಟಿಯಿಂದ ಸ್ವಲ್ಪ ಸಮಯದ ನಂತರ ಹಿಂದಿರುಗಬೇಕಾಯಿತು. ಖಲಿಸ್ತಾನವಾದಿಗಳ ಸಂಚು ದೇಶದ ಪ್ರಧಾನಿಗಳ ಜೀವಕ್ಕೆ ಕುತ್ತು ತರುವವರೆಗೂ ತಲುಪಿದೆ ಎಂಬುದು ಸಹ ಆ ಸಮಯದಲ್ಲಿ ಸಿದ್ಧವಾಯಿತು. ದೇಶದ ಹಿಂದಿನ ಪ್ರಧಾನಿಗಳ ಬಲಿ ತೆಗೆದುಕೊಂಡ ಖಲಿಸ್ತಾನವಾದಿಗಳು ಎಷ್ಟು ಅಪಾಯಕಾರಿ ಕ್ರಮಗಳನ್ನು ಕೈಗೊಳ್ಳುತ್ತಾರೆ ? ಎಂಬುದನ್ನು ಗಮನದಲ್ಲಿಟ್ಟು ಸರಕಾರವು ಅನಂತರ ಯೋಗ್ಯವಾದ ಕ್ರಮಗಳನ್ನು ಕೈಗೊಂಡಿರಬಹುದು.

ವೈಚಾರಿಕ ಪ್ರತಿಕ್ರಿಯೆ ಸಹ ಬೇಕು !

ಇಂದಿನವರೆಗೆ ಹಿಂದೂಗಳು ಸಿಕ್ಖ್‌ರನ್ನು ಬೇರೆ ಧರ್ಮ ದವರೆಂದು ತಿಳಿಯದೇ ಹಿಂದೂ ಧರ್ಮದವರೆಂದೇ ತಿಳಿದಿದ್ದರು; ಆದರೆ ಆಂಗ್ಲರ ಪ್ರೇರಣೆಯಿಂದ ಕಾಂಗ್ರೆಸ್ಸಿನ ಹಿಂದೂದ್ವೇಷಿ ರಾಜಕಾರಣಿಗಳು ‘ಸಿಕ್ಖ್ ಧರ್ಮ ಎಂದು ಪ್ರತ್ಯೇಕವಾಗಿ ಉಲ್ಲೇಖಿಸಲು ಆರಂಭಿಸಿದರು. ಇತ್ತೀಚೆಗಷ್ಟೇ ಗುರು ಹರಕಿಶನ್ ಸಿಂಹ ಪಬ್ಲಿಕ್ ಸ್ಕೂಲ್‌ನಲ್ಲಿ ಓರ್ವ ಸಂಗೀತ ಶಿಕ್ಷಕಿಯು ಸರಸ್ವತಿದೇವಿಯನ್ನು ಪೂಜಿಸಿದಳೆಂದು ‘ದೆಹಲಿ ಸಿಕ್ಖ್ ಗುರುದ್ವಾರ ಪ್ರಬಂಧಕ ಕಮಿಟಿಯು ಅವಳನ್ನು ತಕ್ಷಣ ಅಮಾನತುಗೊಳಿಸಿತು. ‘ಮೂರ್ತಿವಿರೋಧಿ ಇಸ್ಲಾಮ್‌ಗೆ ಹತ್ತಿರ ವಿರುವ ಖಲಿಸ್ತಾನಿ ವಿಚಾರಗಳ ಪ್ರಭಾವ ಇದಾಗಿರಬಹುದು ?, ಎಂದು ಈ ಘಟನೆಯಿಂದ ಪ್ರಶ್ನೆ ಮೂಡುತ್ತಿದೆ. ಭಾರತೀಯರು ಮತ್ತು ಹಿಂದೂಗಳ ಬಗ್ಗೆ ದ್ವೇಷವನ್ನು ಪೋಷಿಸುವ ಖಲಿಸ್ತಾನಿಗಳು ಭಯೋತ್ಪಾದಕರೊಂದಿಗೆ ಕೈಜೋಡಿಸಿರುವುದು ಭಾರತ ಸರಕಾರವಿರೋಧಿ ಆಂದೋಲನಗಳಿಂದ ಆಗಾಗ ಬಯಲಾಗಿದೆ. ‘ನೂರಾರು ಸಿಕ್ಖ್ ಕ್ರಾಂತಿಕಾರರು ಈ ಭಾರತದ ಸ್ವಾತಂತ್ರ್ಯಕ್ಕಾಗಿ ಬಲಿದಾನ ಮಾಡಿದ್ದಾರೆಯೇ, ಹೊರತು ಖಲಿಸ್ತಾನದ ಪ್ರತ್ಯೇಕತೆಗಾಗಿ ಅಲ್ಲ ! ಅವರದೇ ಸಮಾಜದ ಮುಂದಿನ ಪೀಳಿಗೆ ಭಾರತಮಾತೆಯನ್ನು ತುಂಡು ತುಂಡು ಮಾಡಲು ಹಾತೊರೆಯುತ್ತಿದೆ. ಇದು ಎಷ್ಟರ ಮಟ್ಟಿಗೆ ಯೋಗ್ಯವಾಗಿದೆ ?, ಎಂಬ ಪ್ರಶ್ನೆಯನ್ನು ಕೇಳಿ ಸಿಕ್ಖ್ ಬಾಂಧವರಲ್ಲಿ ರಾಷ್ಟ್ರಾಭಿಮಾನವನ್ನು ಜಾಗೃತ ಮಾಡುವುದು ಇಂದಿನ ಆವಶ್ಯಕತೆಯಾಗಿದೆ. ಭಾರತದ ಶತ್ರುವೆಂದು ಭಯೋತ್ಪಾದಕರನ್ನು ಹತ್ತಿರ ಮಾಡಿಕೊಳ್ಳುವ ಸಿಕ್ಖ್‌ರು ಪಾಕ್‌ನಲ್ಲಿ ಸಿಕ್ಖ್ ಹುಡುಗಿಯರ ಮತ್ತು ಬಾಂಧವರ ಮೇಲಾಗುವ ಅತ್ಯಾಚಾರಗಳ ಕಡೆಗೆ ದೃಷ್ಟಿಹಾಯಿಸುವುದಿಲ್ಲ. ‘ಪಾಕ್‌ನಲ್ಲಿಯೂ ಸಿಕ್ಖ್‌ರ ಗುರುದ್ವಾರಾ ಮತ್ತು ತೀರ್ಥಕ್ಷೇತ್ರಗಳಿವೆ; ಹಾಗಾದರೆ ಅಲ್ಲಿನ ಭೂಮಿಯನ್ನು ಖಲಿಸ್ತಾನವಾದಿಗಳು ಬೇಡುವರೇ ?, ಎಂಬ ಪ್ರಶ್ನೆಯನ್ನು ಅವರಿಗೆ ಕೇಳಬೇಕು. ‘ಇಸ್ಲಾಂನಲ್ಲಿ ಸಿಕ್ಖ್‌ರು ಸಹ ಕಾಫೀರರೇ ಆಗಿದ್ದಾರೆ, ಎಂಬ ಸತ್ಯವನ್ನು ಅವರ ನರನಾಡಿಗಳಲ್ಲಿ ಬಿಂಬಿಸಬೇಕು. ಇಸ್ಲಾಮ್‌ನ ವಿರುದ್ಧ ಸಿಕ್ಖ್‌ರ ಧರ್ಮಗುರುಗಳು ನೀಡಿದ ಹೋರಾಟ, ಅವರಿಗಾಗಿ ನಿರ್ಮಿಸಿದ ಸೇನೆ, ಇಸ್ಲಾಮಿ ರಾಜರು ಸಿಕ್ಖ್‌ರಿಗೆ ಮಾಡಿದ ವಂಚನೆ ಮತ್ತು ಸಿಕ್ಖ್‌ರು ಅದರ ವಿರುದ್ಧ ಹೋರಾಡುವಾಗ ಮಾಡಿದ ಬಲಿದಾನ ಇವುಗಳನ್ನು ಸಿಕ್ಖ್ ಸಮಾಜಕ್ಕೆ ಸದಾ ಸ್ಮರಣೆಯಲ್ಲಿಟ್ಟು ಅವರಿಗೇ ಖಲಿಸ್ತಾನ ವನ್ನು ವಿರೋಧಿಸಲು ಹೇಳಬೇಕು. ಈ ದೃಷ್ಟಿಯಿಂದ ಸರಕಾರವು ಏನಾದರೂ ಕ್ರಮವನ್ನು ಕೈಗೊಳ್ಳುತ್ತಿದೆಯೇ ? ಎಂಬುದನ್ನು ಸರಕಾರವು ಹೇಳಬೇಕು. ಸಿಕ್ಖ್ ಬಾಂಧವರು ಮತ್ತು ಖಲಿಸ್ತಾನ್ ಪ್ರೇಮಿಗಳಿಗೆ ಅವರ ನಿಜವಾದ ಇತಿಹಾಸದ ಅರಿವು ಮಾಡಿ ಕೊಟ್ಟು ಅವರ ರಾಷ್ಟ್ರಾಭಿಮಾನವನ್ನು ಜಾಗೃತ ಮಾಡಬೇಕು. ಕೊನೆಗೆ ಯಾವುದೇ ಆಂದೋಲನ ಅಥವಾ ಚಳುವಳಿಯ ಹಿಂದೆ ಕೆಲವು ವೈಚಾರಿಕ ಬುನಾದಿ ಇದ್ದೇ ಇರುತ್ತದೆ. ಖಲಿಸ್ತಾನಿಗಳ ವೈಚಾರಿಕ ಬುನಾದಿ ಹೇಗೆ ಟೊಳ್ಳಿದೆ ಮತ್ತು ಅವರ ನಿಜವಾದ ಶತ್ರು ಭಾರತ ಅಥವಾ ಹಿಂದೂ ಅಲ್ಲ, ಇಸ್ಲಾಮ್ ಆಗಿದೆ, ಎಂಬುದನ್ನು ಅವರಿಗೆ ಹೇಳುತ್ತಾ ಹೋದರೆ, ಖಲಿಸ್ತಾನಿ ಚಳುವಳಿಯನ್ನು ವಿರೋಧಿಸುವವರಿಗೆ ಸಹಾಯವಾಗುವುದು. ಇಸ್ಲಾಮ್‌ನಲ್ಲಿನ ಕೊರತೆಯು ವೈಚಾರಿಕ ಸ್ತರದಲ್ಲಿ ಮುಂದೆ ಬಂದಾಗ ಇಂದು ಜಗತ್ತಿನಾದ್ಯಂತ ಅದಕ್ಕೆ ವಿರೋಧವಾಗುತ್ತಿದೆ. ಖಲಿಸ್ತಾನಿ ಚಳುವಳಿಯನ್ನು ಕಠೋರ ನೀತಿಯೊಂದಿಗೆ ಖಂಡಿಸಿ ಸಿಕ್ಖ್‌ರಿಗೂ ವೈಚಾರಿಕ ತಿಳುವಳಿಕೆ ನೀಡಬೇಕು !