ಹಿಂದೂ ದ್ವೇಷಿ ಮುಖಂಡ ಸ್ವಾಮಿ ಪ್ರಸಾದ ಮೌರ್ಯ ಇವರ ವಾಹನದ ಮೇಲೆ ಭಾಜಪ ಕಾರ್ಯಕರ್ತರಿಂದ ಕಪ್ಪು ಮಸಿ ಎಸೆತ !

ಸ್ವಾಮಿ ಪ್ರಸಾದ ಮೌರ್ಯ

ವಾರಾಣಸಿ – ‘ಶ್ರೀರಾಮಚರಿತಮಾನಸ’ವನ್ನು ನಿಷೇಧಿಸಲು ಒತ್ತಾಯಿಸಿರುವ ಸಮಾಜವಾದಿ ಪಕ್ಷದ ಕಾರ್ಯದರ್ಶಿ ಸ್ವಾಮಿ ಪ್ರಸಾದ ಮೌರ್ಯ ಇವರಿಗೆ ಇಲ್ಲಿಯ ರಾಮನಗರ ಪ್ರದೇಶದಲ್ಲಿ ಭಾಜಪದ ಕಾರ್ಯಕರ್ತರು ಕಪ್ಪು ಬಾವುಟ ತೋರಿಸಿ ಅವರ ವಾಹನದ ಮೇಲೆ ಕಪ್ಪು ಮಸಿ ಎಸೆದರು. ಈ ಸಮಯದಲ್ಲಿ ‘ಜೈ ಶ್ರೀರಾಮ’ ಮತ್ತು ‘ಹರ ಹರ ಮಹಾದೇವ’ ಎಂದು ಘೋಷಣೆ ಕೂಗಿದರು. ಭಾಜಪದ ನಾಯಕ ದೀಪಕ ಸಿಂಹ ರಾಜವೀರ ಇವರು, ಸ್ವಾಮಿ ಪ್ರಸಾದ ಮೌರ್ಯ ಇವರು ಶ್ರೀರಾಮಚರಿತಮಾನಸ ಬಗ್ಗೆ ನೀಡಿರುವ ಹಿಂದೂದ್ವೇಷಿ ಹೇಳಿಕೆಗೆ ಕ್ಷಮೆ ಯಾಚಿಸಬೇಕು ಎಂದು ಹೇಳಿದರು.

ಸಂಪಾದಕೀಯ ನಿಲುವು

ಹಿಂದೂ ದ್ವೇಷಿ ಹೇಳಿಕೆ ನೀಡಿ ಸಮಾಜದಲ್ಲಿ ದ್ವೇಷ ಪಸರಿಸುವ ಮೌರ್ಯ ಇವರ ಮೇಲೆ ಇಲ್ಲಿಯವರೆಗೆ ಕ್ರಮ ಕೈಗೊಳ್ಳುವುದು ಅವಶ್ಯಕವಾಗಿತ್ತು !