ಛತ್ತೀಸ್ ಗಡದಲ್ಲಿ ನಕ್ಸಲರಿಂದ ಭಾಜಪದ ಪದಾಧಿಕಾರಿಯ ಹತ್ಯೆ !

ಭಾಜಪದ ಜಿಲ್ಲಾ ಉಪಾಧ್ಯಕ್ಷ ಸಾಗರ ಸಾಹೂ ಇವರ ಹತ್ಯೆ

ರಾಯಪುರ – ಬಸ್ತರದಲ್ಲಿನ ನಕ್ಸಲಪೀಡಿದ ಪ್ರದೇಶವೆಂದು ಗುರುತಿಸುವ ನಾರಾಯಣಪುರ ಜಿಲ್ಲೆಯಲ್ಲಿನ ಗುಡ್ಡಗಾಡು ಪ್ರದೇಶದಲ್ಲಿನ ನಕ್ಸಲರು ಭಾಜಪದ ಜಿಲ್ಲಾ ಉಪಾಧ್ಯಕ್ಷ ಸಾಗರ ಸಾಹೂ ಇವರ ತಲೆಗೆ ಗುಂಡು ಹಾರಿಸಿ ಹತ್ಯೆ ಗೈದಿದ್ದಾರೆ.

ಅ. ಫೆಬ್ರುವರಿ ೧೦ ರಂದು ರಾತ್ರಿ ೮ ಗಂಟೆಗೆ ಸಾಹು ಮನೆಯಲ್ಲಿ ದೂರದರ್ಶನ ನೋಡುತ್ತಿರುವಾಗ ೮ ನಕ್ಸಲರು ಸಾಹೂ ಅವರ ಮನೆಗೆ ನುಗ್ಗಿ ಅವರ ಮೇಲೆ ಗುಂಡು ಹಾರಿಸಿದರು.

ಆ. ಸಾಹೂ ಇವರಿಗೆ ಆಸ್ಪತ್ರೆಗೆ ಸೇರಿಸಲಾಯಿತು, ಅಲ್ಲಿ ಅವರನ್ನು ಮೃತರು ಎಂದು ವೈದ್ಯರು ಹೇಳಿದರು.

ಇ. ನಕ್ಸಲರು ಗ್ರಾಮಸ್ಥರ ಉಡುಗೆ ತೊಟ್ಟಿ ಸಾಹೂ ಇವರನ್ನು ಹತ್ಯೆ ಮಾಡಲು ಬಂದಿದ್ದದ್ದರು. ರಾತ್ರಿ ೮ ಗಂಟೆಗೆ ಅವರು ಸಾಹೂ ಇವರ ಬಾಗಿಲು ಬಡಿದರು. ಬಾಗಿಲು ತೆರೆದ ನಂತರ ನಕ್ಸಲರು ಸಾಹೂ ಅವರ ಕಡೆಗೆ ಓಡಿದರು.

ಈ. ಅವರ ಮೇಲೆ ಗುಂಡು ಹಾರಿಸುವಾಗ ನಕ್ಸಲರು ‘ನಕ್ಸಲವಾದಿ ಜಿಂದಾಬಾದ್’ ಎಂದು ಘೋಷಣೆ ಕೂಗಿದರು. ಸಾಹೂ ಕಳೆದ ೨೫ ವರ್ಷದಿಂದ ಭಾಜಪದಲ್ಲಿ ಸಕ್ರಿಯರಾಗಿದ್ದರು.

ಸಂಪಾದಕೀಯ ನಿಲುವು

ಕಾಂಗ್ರೆಸ್ ಅಧಿಕಾರದಲ್ಲಿರುವ ರಾಜ್ಯದಲ್ಲಿ ಇದಕ್ಕಿಂತಲೂ ಬೇರೆ ಏನು ಅಪೇಕ್ಷೆ ಮಾಡುವುದು ? ಹೆಚ್ಚಿರುವ ನಕ್ಸಲರನ್ನು ಸಂಪೂರ್ಣವಾಗಿ ಮುಗಿಸುವುದಕ್ಕೆ ಕೇಂದ್ರ ಸರಕಾರವೆ ಪ್ರಯತ್ನ ಮಾಡುವುದು ಅವಶ್ಯಕ !