‘ಇಸ್ಲಾಂ ಹೊರಗಿನಿಂದ ಭಾರತಕ್ಕೆ ಬಂದಿಲ್ಲ !’ (ಅಂತೆ) – ಜಮೀಯತ್-ಉಲೇಮಾ-ಎ-ಹಿಂದ್ ದ ಮುಖ್ಯಸ್ಥ ಮಹಮ್ಮದ್ ಮದನಿ

ಜಮೀಯತ್-ಉಲೇಮಾ-ಎ-ಹಿಂದ್ ದ ಮುಖ್ಯಸ್ಥ ಮಹಮ್ಮದ್ ಮದನಿ ಇವರ ದಾವೆ !

ಮಹಮ್ಮದ್ ಮದನಿ

ನವ ದೆಹಲಿ – ಎಲ್ಲಾ ಧರ್ಮಗಳೊಂದಿಗೆ ಇಸ್ಲಾಂನ ಹಿಂದಿನಿಂದಲೂ ಸಂಬಂಧ ಇದೆ. ಇಸ್ಲಾಂ ಹೊರಗಿನಿಂದ ಭಾರತಕ್ಕೆ ಬಂದಿಲ್ಲ. ಭಾರತ ನಮ್ಮ ದೇಶವಾಗಿದೆ. ಭಾರತ ಎಷ್ಟು ನರೇಂದ್ರ ಮೋದಿ ಮತ್ತು ಸರಸಂಘ ಚಾಲಕ ಮೋಹನ ಭಾಗವತ ಅವರದಾಗಿದೆ ಅಷ್ಟೇ ಅದು ಮಹಮ್ಮದ್ ಮದನಿಯವರದ್ದೂ ಆಗಿದೆ. ಮದನಿಗಿಂತಲೂ ಒಂದು ಇಂಚು ಹೆಚ್ಚು ಅಥವಾ ಕಡಿಮೆ ಆಗಿಲ್ಲ, ಎಂದು ಜಮೀಯತ್-ಉಲೆಮಾ-ಏ-ಹಿಂದ್’ನ ಮುಖ್ಯಸ್ಥ ಮಹಮೂದ್ ಮದನಿ ಇವರು ಹೇಳಿದರು. ಅವರು ಇಲ್ಲಿಯ ರಾಮಲೀಲಾ ಮೈದಾನದಲ್ಲಿ ನಡೆಯುತ್ತಿರುವ ಜಮೀಯತ್-ಉಲೇಮಾ-ಎ-ಹಿಂದ್ ನ ಅಧಿವೇಶನದಲ್ಲಿ ಮಾತನಾಡುತ್ತಿದ್ದರು. ‘ಸಂಘ ಮತ್ತು ಮುಸಲ್ಮಾನರು ಇವರಲ್ಲಿ ಯಾವುದೇ ವಿವಾದ ಇಲ್ಲ, ಎಂದೂ ಸಹ ಅವರು ಸ್ಪಷ್ಟಪಡಿಸಿದರು.

ಮದನಿ ಮಾತು ಮುಂದುವರೆಸುತ್ತಾ,

೧. ಭಾರತ ಅಲ್ಲಾನ ಮೊದಲ ಪೈಗಂಬರ್ ಅಬ್ದುಲ್ ಸಯಿದಾಲಾ ಆಲಂ ಇವರ ಭೂಮಿಯಾಗಿದೆ. ಭಾರತ ಮುಸಲ್ಮಾನರ ಮೊದಲ ಮಾತೃಭೂಮಿಯಾಗಿದೆ. ಆದ್ದರಿಂದ ‘ಇಸ್ಲಾಂ ಹೊರಗಿನಿಂದ ಬಂದಿದೆ’, ಎಂದು ಹೇಳುವುದು ಸಂಪೂರ್ಣವಾಗಿ ತಪ್ಪು ಮತ್ತು ಆಧಾರ ರಹಿತವಾಗಿದೆ. ಭಾರತ ಹಿಂದಿ ಮುಸಲ್ಮಾನರಿಗಾಗಿ ಎಲ್ಲಕ್ಕಿಂತ ಒಳ್ಳೆಯ ದೇಶವಾಗಿದೆ.

೨. ಅಲ್ಪಸಂಖ್ಯಾತರ ವಿರುದ್ಧ ಹಿಂಸೆ ನಡೆಸುವವರಿಗೆ ಶಿಕ್ಷೆ ನೀಡುವುದಕ್ಕಾಗಿ ಸ್ವತಂತ್ರ ಕಾನೂನು ರೂಪಿಸುವುದು ಅವಶ್ಯಕವಾಗಿದೆ. ಮುಸಲ್ಮಾನರ ಬಗ್ಗೆ ದ್ವೇಷ ಮತ್ತು ಪ್ರಚೋದನೆಯ ಪ್ರಕರಣಗಳು ಮತ್ತು ಇಸ್ಲಾಂ ದ್ವೇಷ ಇವುಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಏರಿಕೆಯಾಗಿದೆ.

೩. ಇಂದು ದೇಶದಲ್ಲಿ ದ್ವೇಷದ ವಾತಾವರಣವಿದೆ. ಆಧಾರರಹಿತ ಪ್ರಚಾರ ಮಾಡುವ ಕೆಲಸ ವೇಗವಾಗಿ ನಡೆಯುತ್ತಿದೆ. ಅದು ದೇಶಕ್ಕಾಗಿ ಅಪಾಯಕಾರಿ ಆಗಿದೆ, ಅವರನ್ನು ಸ್ವತಂತ್ರವಾಗಿ ಬಿಡಲಾಗುತ್ತಿದೆ.

೪. ಈಗಿನ ಸ್ಥಿತಿಯಲ್ಲಿ ಸ್ವಾಮಿ ವಿವೇಕಾನಂದ, ಮೋಹನದಾಸ ಗಾಂಧಿ, ನೆಹರು ಮತ್ತು ಚಿಶ್ತಿ ಇವರ ಆದರ್ಶ ಇಟ್ಟುಕೊಂಡಿರುವ ನಾಯಕರು ಏನಾದರೂ ಇದನ್ನು ನೋಡುತ್ತಿದ್ದರೆ, ದೇಶದ ಸ್ಥಿತಿ ಏನಾಗುವುದು ಇದರ ಕಲ್ಪನೆ ಮಾಡಲು ಸಾಧ್ಯವಿಲ್ಲ.

ಭೇದಭಾವ ಮತ್ತು ಶತ್ರುತ್ವ ಮರೆತು ಒಟ್ಟಾಗಿ ಸೇರಿ ದೇಶವನ್ನು ಪ್ರಪಂಚದಲ್ಲಿ ಶಕ್ತಿಶಾಲಿ ಮಾಡೋಣ ! ರಾಷ್ಟ್ರೀಯ ಸ್ವಯಂಸೇವಕ ಸಂಘ ಮತ್ತು ಅದರ ಸರಸಂಘಚಾಲಕರು ಇವರಿಗೆ, ಬನ್ನಿ ಮತ್ತು ನಾವು ನಮ್ಮಲ್ಲಿನ ಭೇದಭಾವ ಮತ್ತು ಶತ್ರುತ್ವ ಮರೆತು ಒಬ್ಬರನ್ನೊಬ್ಬರು ಅಪ್ಪಿಕೊಳ್ಳೋಣ. ದೇಶವನ್ನು ಜಗತ್ತಿನಲ್ಲಿ ಶಕ್ತಿಶಾಲಿ ದೇಶ ಮಾಡೋಣ. ನಮಗೆ ಸನಾತನ ಧರ್ಮದ ತೇಜದ ಬಗ್ಗೆ ಯಾವುದೇ ತಕರಾರು ಇಲ್ಲ. ನಿಮಗೂ ಇಸ್ಲಾಂನ ಬಗ್ಗೆ ಯಾವುದೇ ತಕರಾರು ಇರಬಾರದು ಹೀಗೆ ಮದನಿ ಇವರು ಈ ಸಮಯದಲ್ಲಿ ಆಂತ್ರಿಸುತ್ತಾ ಕರೆ ನೀಡಿದರು. ಅವರು, ನಮ್ಮ ವಿರೋಧದಲ್ಲಿನ ಘಟನೆಗಳು ಕೆಲವು ವರ್ಷಗಳಲ್ಲೇ ಹೆಚ್ಚಾಗಿವೆ. ಸರಕಾರ ಈ ರೀತಿಯ ಘಟನೆಯ ವಿರುದ್ಧ ಯಾವ ರೀತಿ ಕ್ರಮ ಕೈಗೊಳ್ಳಬೇಕು, ಅದು ಅವರ ಜವಾಬ್ದಾರಿಯಾಗಿತ್ತು, ಅದರ ಪಾಲನೆ ಆಗುತ್ತಿಲ್ಲ. ದೇಶದಲ್ಲಿ ಹಿಂದುತ್ವದ ವ್ಯಾಖ್ಯೆಗೆ ಬದಲಾಯಿಸಲಾಗಿದೆ. (ಮದನಿ ಜಿಹಾದಿ ಭಯೋತ್ಪಾದಕರ ಬಗ್ಗೆ ಏಕೆ ಮಾತನಾಡುವುದಿಲ್ಲ ? – ಸಂಪಾದಕರು)

ಸಂಪಾದಕೀಯ ನಿಲುವು

ಇದರ ಬಗ್ಗೆ ಯಾರಾದರು ವಿಶ್ವಾಸ ಇಡುವರೇ ? ಈ ರೀತಿಯ ಹೇಳಿಕೆ ನೀಡಿ ದೇಶದ ದಾರಿ ತಪ್ಪಿಸುವ ಪ್ರಯತ್ನ ಮಾಡುತ್ತಿದ್ದಾರೆ. ಇದರಿಂದ ‘ಭಾರತ ಇದು ಇಸ್ಲಾಮಿಗಳ ದೇಶವಾಗಿದೆ’, ಹೀಗೆ ಹೇಳುವ ಪ್ರಯತ್ನವಾಗಿದೆ; ಆದರೆ ಭಾರತದ ಉನ್ನತಿಗಾಗಿ ಇಂತಹ ಎಷ್ಟು ಇಸ್ಲಾಂವಾದಿಗಳು ಸಹಭಾಗಿಯಾಗಿದ್ದಾರೆ ಮತ್ತು ಭಾರತದಲ್ಲಿನ ಅರಾಜಕತೆಯ ಹಿಂದೆ ಮತ್ತು ಇತರ ತಪ್ಪು ಘಟನೆಗಳಲ್ಲಿ ಅವರು ಎಷ್ಟು ಸಹ ಭಾಗಿ ಇದ್ದಾರೆ, ಇದರ ಚರ್ಚೆ ಕೂಡ ನಡೆಯುವುದು ಅವಶ್ಯಕವಾಗಿದೆ !