‘ಡಾ. ಅಂಬೇಡ್ಕರ ಬದುಕಿದ್ದರೇ, ನಾನು ಅವರ ಮೇಲೆ ಗುಂಡು ಹಾರಿಸುತ್ತಿದ್ದೆ’ ಎಂದು ಹೇಳಿದ್ದ ದಲಿತ ಮುಖಂಡನ ಬಂಧನ

ರೀಡಲ್ಸ್ ಇನ್ ಹಿಂದೂಯಿಝಮ್ ಪುಸ್ತಕದಲ್ಲಿ ಡಾ. ಅಂಬೇಡ್ಕರ ಇವರು ಹಿಂದೂಗಳ ಧಾರ್ಮಿಕ ಭಾವನೆ ಧಕ್ಕೆ ತಂದಿರುವ ಆರೋಪ

ನವ ದೆಹಲಿ – ತೆಲಂಗಾಣದಲ್ಲಿ ‘ರಾಷ್ಟ್ರೀಯ ದಲಿತ ಸೇನೆ’ ಹೆಸರಿನ ಸಂಘಟನೆ ನಡೆಸುವ ಮುಖಂಡ ಹಮಾರಾ ಪ್ರಸಾದ ಇವರನ್ನು ಪೊಲೀಸರು ಬಂಧಿಸಿದ್ದಾರೆ. ಅವರು ಒಂದು ವಿಡಿಯೋ ಪ್ರಸಾರ ಮಾಡಿ, ಡಾ. ಬಾಬಾಸಾಹೇಬ ಅಂಬೇಡ್ಕರ ಇವರ ಬಗ್ಗೆ ಆಕ್ಷೇಪಾರ್ಹ ಹೇಳಿಕೆ ನೀಡಿದ್ದಾರೆ. ಹಮಾರಾ ಪ್ರಸಾದ ಇವರು ಈ ವಿಡಿಯೋದಲ್ಲಿ ಡಾ. ಅಂಬೇಡ್ಕರರ ಪುಸ್ತಕ ಕೈಯಲ್ಲಿ ಹಿಡಿದುಕೊಂಡು, ಡಾ. ಅಂಬೇಡ್ಕರ್ ಇವರು ಅವರ ‘ರೀಡಲ್ಸ್ ಇನ್ ಹಿಂದೂಯಿಝಮ್’ (ಹಿಂದೂ ಧರ್ಮದಲ್ಲಿನ ಒಗಟು) ಈ ಪುಸ್ತಕದಲ್ಲಿ ಹಿಂದೂಗಳ ಧಾರ್ಮಿಕ ಭಾವನೆಗೆ ಧಕ್ಕೆ ತಂದಿದ್ದಾರೆ. ಹೇಗೆ ನಥೂರಾಮ ಗೋಡ್ಸೆ ಇವರು ಮ. ಗಾಂಧೀಜಿಯವರನ್ನು ಹತ್ಯೆ ಗೈದರೋ, ಅದೇ ರೀತಿ ನಾನು ಡಾ. ಅಂಬೇಡ್ಕರರಿಗೆ ಗುಂಡು ಹಾರಿಸಿ ಹತ್ಯೆ ಮಾಡುತ್ತಿದ್ದೆ ಎಂದು ಹೇಳಿದರು.

ಹಮಾರಾ ಪ್ರಸಾದ ಇವರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಪ್ರಸಾರವಾದ ನಂತರ ಬಹುಜನ ಸಮಾಜ ಪಕ್ಷದ ತೆಲಂಗಾಣ ಶಾಖೆಯ ಮುಖ್ಯಸ್ಥ ಆರ್.ಎಸ್. ಪ್ರವೀಣ ಕುಮಾರ ಇವರು ಈ ವಿಡಿಯೋ ಶೇರ್ ಮಾಡುತ್ತಾ ಪ್ರಸಾದ ಇವರ ಮೇಲೆ ಕಠಿಣ ಕ್ರಮ ಕೈಗೊಳ್ಳಲು ಒತ್ತಾಯಿಸಿದ್ದಾರೆ.