ಹಾಪೂಡ್ (ಉತ್ತರಪ್ರದೇಶ) – ೨೦೨೦ ರಲ್ಲಿ ರಾಜಧಾನಿ ದೆಹಲಿಯಲ್ಲಿ ಮತಾಂಧರು ಗಲಭೆ ನಡೆಸಿದ್ದರು. ಈ ಗಲಭೆಯಲ್ಲಿನ ಮತಾಂಧರಿಗೆ ಶಸ್ತ್ರ ಪೂರೈಕೆಯನ್ನು ಉತ್ತರ ಪ್ರದೇಶದಲ್ಲಿನ ಮೇರಠದ ಒಂದು ಗುಂಪು ಮಾಡಿರುವ ಮಾಹಿತಿ ಪೊಲೀಸರಿಗೆ ದೊರೆತ್ತಿತ್ತು. ಈ ಗಲಭೆಯಲ್ಲಿ ಸಹಭಾಗಿಯಾಗಿರುವ ಮತಾಂಧರಿಗೆ ಶಸ್ತ್ರಾಸ್ತ್ರ ಪೂರೈಕೆಗಾಗಿ ವಾಟ್ಸಾಪ್ ಗ್ರೂಪ್ ಮಾಡಿದ್ದರು. ಈ ಪ್ರಕರಣದಲ್ಲಿ ಖಿಜರ್, ಜಮಶೇಧ ಮತ್ತು ನೌಖೆಜ್ ಇವರನ್ನು ಬಂಧಿಸಿದ್ದಾರೆ. ಈ ಗುಂಪಿನ ಪ್ರಮುಖ ಬಾಬು ವಾಸಿಮ ಪರಾರಿಯಾಗಿದ್ದಾನೆ. ಪೊಲೀಸರು ಬಂಧಿಸಿರುವ ಮೂವರಿಂದ ಕಾನೂನು ಬಾಹಿರ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಂಡಿದ್ದಾರೆ. ವಾಸಿಮ ಇವನನ್ನು ಹಿಡಿಯಲು ಪೊಲೀಸರು ಶೋಧ ಕಾರ್ಯಾ ಕೈಗೆತ್ತಿಕೊಂಡಿದ್ದಾರೆ.
ಮೇರಠದಲ್ಲಿ ಶಸ್ತ್ರಾಸ್ತ್ರ ಪೂರೈಕೆಯ ಗುಂಪಿನ ಮಾಹಿತಿ ದೊರೆತನಂತರ ಕೆಲವು ಪೊಲೀಸರು ತಮ್ಮ ಪರಿಚಯ ಮರೆಮಾಚಿ ಈ ವಾಟ್ಸಪ್ ಗ್ರೂಪಿನಲ್ಲಿ ಸಹಭಾಗಿಯಾದರು. ‘ನಮಗೆ ಶಸ್ತ್ರಾಸ್ತ್ರ ಖರಿದಿ ಮಾಡುವುದು ಇದೆ’, ಎಂದು ಪೊಲೀಸರು ಬೇಡಿಕೆ ಮಾಡಿದರು. ಶಸ್ತ್ರಾಸ್ತ್ರದ ಖರೀದಿಗಾಗಿ ಈ ಗುಂಪಿನ ಜನರು ಪೊಲೀಸರಿಗೆ ಹಾಪುಡ್ ಗೆ ಕರೆದರು. ಆ ಸಮಯದಲ್ಲಿ ಪೊಲೀಸರು ಈ ಮೂವರನ್ನು ಬಂಧಿಸಿದರು.