ಪೊಲೀಸರ ಸಾಹಿತ್ಯ ಮತ್ತು ಶಸ್ತ್ರಾಸ್ತ್ರಗಳನ್ನು ಲೂಟಿಗೈದ ಖಲಿಸ್ತಾನಿ !

ಚಂಡಿಗಡದಲ್ಲಿ ಖಲಿಸ್ತಾನಿಗಳಿಂದ ಭೀಕರ ಹಿಂಸಾಚಾರ

ಚಂಡಿಗಡ್ – ಇಲ್ಲಿಯ ಚಂಡಿಗಡ್-ಮೊಹಾಲಿ ಗಡಿಯಲ್ಲಿ ಫೆಬ್ರುವರಿ ೮ ರಂದು ಖಲಿಸ್ತಾನಿವಾದಿ ಶಿಖ್ಕರಿಂದ ಭೀಕರ ಹಿಂಸಾಚಾರ ನಡೆಸಿದ್ದಾರೆ. ಅವರು ಶಿಕ್ಷೆ ಪೂರ್ಣಗೊಂಡಿರುವ ಶಿಖ್ಕ ಕೈದಿಗಳನ್ನು ಬಿಡುಗಡೆಗೊಳಿಸಬೇಕೆಂದು ಒತ್ತಾಯಿಸಿ ಪ್ರತಿಭಟನೆ ನಡೆಸುತ್ತಿದ್ದರು. ಆ ಸಮಯದಲ್ಲಿ ಅವರು ಚಂಡಿಗಡ್ ನಲ್ಲಿ ನುಗ್ಗುವ ಪ್ರಯತ್ನ ಮಾಡಿದಾಗ ಪೊಲೀಸರು ಅವರನ್ನು ತಡೆದರು. ಆ ಸಮಯದಲ್ಲಿ ಪ್ರತಿಭಟನಾಕಾರ ಶಿಖ್ಕರು ಪೊಲೀಸರ ಮೇಲೆ ಕತ್ತಿ ಮತ್ತು ಲಾಠಿಯಿಂದ ದಾಳಿ ಮಾಡಿದರು. ಪೊಲೀಸರ ಬಳಿ ಇರುವ ಗುರಾಣಿ, ಶಿರಸ್ತ್ರಾಣ, ಶಸ್ತ್ರಾಸ್ತ್ರಗಳು ಮತ್ತು ಆಶ್ರುವಾಯು ಲೂಟಿ ಮಾಡಿದರು. ಈ ಪ್ರಕರಣದಲ್ಲಿ ಪೊಲೀಸರು ಅನೇಕ ಪ್ರತಿಭಟನಾಕಾರರನ್ನು ಬಂಧಿಸಿದ್ದಾರೆ. ಪೊಲೀಸರ ಅಭಿಪ್ರಾಯ, ಈ ಪ್ರತಿಭಟನೆಯಲ್ಲಿ ೧೨ ಖಲಿಸ್ತಾನ ಬೆಂಬಲಿಗ ಸಂಘಟನೆಯು ಭಾಗವಹಿಸಿತ್ತು. ಈ ಪ್ರತಿಭಟನಾಕಾರರು ಖಲಿಸ್ತಾನವನ್ನು ಬೆಂಬಲಿಸಿ ಘೋಷಣೆ ನೀಡುತ್ತಿದ್ದರು. ಈ ಪ್ರತಿಭಟನೆ ಮತ್ತು ಹಿಂಸಾಚಾರ ಸುನಿಯೋಜೀತ ಷಡ್ಯಂತ್ರವಾಗಿತ್ತು ಎಂದು ಹೇಳಿದರು.

ಸಂಪಾದಕೀಯ ನಿಲುವು

ಪಂಜಾಬದಲ್ಲಿ ಖಲಿಸ್ತಾನಿಗಳ ಚಟುವಟಿಕೆಗಳು ದಿನೇ ದಿನೇ ಹೆಚ್ಚುತ್ತಿದೆ. ಇದರಿಂದ ನಾಳೆ ಹೆಚ್ಚಿನ ಅಪಾಯ ಆಗುವ ಮೊದಲು ಕೇಂದ್ರ ಸರಕಾರ ಕಠಿಣ ಕ್ರಮ ಕೈಗೊಂಡು ಅವರ ಹೆಡೆಮುರಿ ಕಟ್ಟುವುದು ಅವಶ್ಯಕವಾಗಿದೆ !