ಸಂಪತ್ತಿನಲ್ಲಿ ಆಗುತ್ತಿದೆ ಪುನಃ ವೃದ್ಧಿ
ನವದೆಹಲಿ – ಅಮೇರಿಕಾದ `ಹಿಂಡೆನಬರ್ಗ’ ಕಂಪನಿಯ ವರದಿಯಲ್ಲಿ ಭಾರತೀಯ ಉದ್ಯಮಿ ಗೌತಮ ಅದಾನಿಯವರ ಮೇಲೆ ಆರ್ಥಿಕ ಅವ್ಯವಹಾರದ ಆರೋಪ ಮಾಡಿದ ಬಳಿಕ ಅದಾನಿಯವರ ಉದ್ಯಮಸಮೂಹಕ್ಕೆ ಬಹುದೊಡ್ಡ ಆರ್ಥಿಕ ಹೊಡೆತ ಬಿದ್ದಿತ್ತು. ಅದಾನಿಯವರ ಸಂಪತ್ತು ಪಾತಾಳಕ್ಕೆ ಕುಸಿದಿತ್ತು, ಹಾಗೆಯೇ ಜಗತ್ತಿನ ಎರಡನೇ ಕ್ರಮಾಂಕದ ಶ್ರೀಮಂತ ವ್ಯಕ್ತಿಯಿಂದ 21 ನೇ ಸ್ಥಾನ ತಲುಪಿತು. ಈಗ ಪುನಃ ಅವರ ಶೇರುಗಳು ಪುಟಿದೆದ್ದಳು ಆರಂಭವಾಗಿದೆ. ಈಗ ಅದಾನಿಯವರ ಸಂಪತ್ತಿಯಲ್ಲಿ ಪುನಃ ವೃದ್ಧಿಯಾಗುತ್ತಿದ್ದು, ಅದೀಗ 21ನೇ ಕ್ರಮಾಂಕದಿಂದ 17ನೇ ಸ್ಥಾನಕ್ಕೆ ಜಿಗಿದಿದೆ.
Gautam Adani back in the world’s top 20 billionaire rich list; here’s howhttps://t.co/iPiducUKbA
— Business Today (@business_today) February 7, 2023
ಅದಾನಿ ಎಂಟರಪ್ರೈಸಸ್, ಅದಾನಿ ಪೋರ್ಟ ಮತ್ತು ಅದಾನಿ ಪಾವರಗಳ ಶೇರುಗಳಲ್ಲಿ ಹೆಚ್ಚಳವಾಗುತ್ತಿದೆ. ಅದಾನಿಯವರ ಸಂಪತ್ತಿನಲ್ಲಿ ಕೇವಲ ಮೂರು ಗಂಟೆಗಳಲ್ಲಿ ಶೇ. 7.31 ಗಳಿಂದ ವೃದ್ಧಿಸಿದೆ. ಅಂದರೆ ಅವರ ಸಂಪತ್ತು 3 ಲಕ್ಷ 55 ಸಾವಿರ ಕೋಟಿಗಳಷ್ಟು ಹೆಚ್ಚಳವಾಗಿದೆ. ಸಂಪತ್ತಿನ ಹೆಚ್ಚಳದ ವೇಗ ಈಗಲೂ ಮುಂದುವರಿದಿದೆ.
ಅದಾನಿಯವರ ಮೇಲಿನ ಆರೋಪಗಳ ಹಿಂದೆ ಅಂತರರಾಷ್ಟ್ರೀಯ ಸಂಚು?
ಗೌತಮ ಅದಾನಿ ಭಾರತೀಯ ಉದ್ಯಮಿಯಾಗಿರುವುದರಿಂದ ಮತ್ತು ಅವರ ಉತ್ತರೋತ್ತರ ವೃದ್ಧಿಯಾಗುತ್ತಿರುವುದನ್ನು ನೋಡಿ ಅವರನ್ನು ಗುರಿ ಮಾಡಲು ಅಂತರರಾಷ್ಟ್ರೀಯ ಸಂಚನ್ನು ರಚಿಸಲಾಗಿದೆಯೆಂದು ಈಗ ಹೇಳಲಾಗುತ್ತಿದೆ. ಇದರಿಂದಲೇ ಏನೋ ಸಮಾಜದಲ್ಲಿ ಅವರ ವಿಷಯದಲ್ಲಿ ಸಹಾನುಭೂತಿ ನಿರ್ಮಾಣವಾಗಿ ಅವರಿಗೆ ಪುನಃ ಆರ್ಥಿಕ ಬೆಂಬಲ ಸಿಗುತ್ತಿರುವುದರಿಂದ ಅವರ ಸೂಚ್ಯಾಂಕ ಏರುತ್ತಿದೆಯೆಂದು ಹೇಳಲಾಗುತ್ತಿದೆ. ಸಾಮಾಜಿಕ ಮಾಧ್ಯಮದಿಂದ ಅದಾನಿಯವರನ್ನು ಬೆಂಬಲಿಸಿ ಪೋಸ್ಟ ಮಾಡುತ್ತಿರುವ ಚಿತ್ರಗಳು ಕಂಡು ಬರುತ್ತಿವೆ.