ಪ್ಲಾಸ್ಟಿಕ್ ಬಾಟಲಿಯನ್ನು ಪುನರ್ ಬಳಕೆ ಮಾಡಿ ತಯಾರಿಸಿರುವ ಜಾಕೆಟ್ ಧರಿಸಿರುವ ಪ್ರಧಾನ ಮಂತ್ರಿ ಮೋದಿ ಸಂಸತ್ತಿಗೆ ತಲುಪಿದರು !

ನವ ದೆಹಲಿ – ಪ್ರಧಾನಿ ಮೋದಿಯವರು ಫೆಬ್ರುವರಿ ೮ ರಂದು ಸಂಸತ್ತಿನಲ್ಲಿ ತಿಳಿ ನೀಲಿ ಬಣ್ಣದ ಜಾಕಿಟ್ ಧರಿಸಿ ಬಂದಿದ್ದರು. ಈ ಜಾಕೆಟ ಬಟ್ಟೆಯದಾಗಿರದೇ ಪುನರ್ ಬಳಕೆ ಮಾಡಿರುವ ಪ್ಲಾಸ್ಟಿಕ್ ಬಾಟಲಿಯಿಂದ ತಯಾರಿಸಲಾಗಿದೆ. ಇಂಡಿಯನ್ ಆಯಿಲ್ ಕಾರ್ಪೊರೇಷನ್ ಬೆಂಗಳೂರು ಇಲ್ಲಿಯ ‘ಇಂಡಿಯಾ ಎನರ್ಜಿ ವೀಕ್’ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿಯವರಿಗೆ ಈ ಜಾಕೆಟ್ ಉಡುಗೊರೆಯಾಗಿ ನೀಡಿದ್ದರು. ಪೆಟ್ರೋಲ್ ಪಂಪ್ ಮತ್ತು ಎಲ್.ಪಿ.ಜಿ. ಏಜೆನ್ಸಿ ಈ ಸ್ಥಳಗಳಲ್ಲಿ ಕೆಲಸ ಮಾಡುವ ಕಾರ್ಮಿಕರಿಗಾಗಿ ಇದನ್ನು ಸಮವಸ್ತ್ರ ತಯಾರಿಸುವುದು ಈ ಕಂಪನಿಯ ಯೋಜನೆಯಾಗಿದೆ. ಒಂದು ಸಮವಸ್ತ್ರ ತಯಾರಿಸಲು ಒಟ್ಟು ೨೮ ಬಾಟಲಿಗಳ ಪುನರ್ ಬಳಕೆ ಮಾಡುತ್ತೇವೆ. ಕಂಪನಿಯು ಪ್ರತಿವರ್ಷ ೧೦ ಕೋಟಿ ಪ್ಲಾಸ್ಟಿಕ್ ಬಾಟಲಿಯ ಪುನರ್ ಬಳಕೆ ಮಾಡುವ ಯೋಜನೆ ರೂಪಿಸಿದೆ. ಆದ್ದರಿಂದ ಪರಿಸರ ರಕ್ಷಣೆಯಾಗಲು ಸಹಾಯ ಆಗುವುದು ಮತ್ತು ಹೆಚ್ಚಿನ ಪ್ರಮಾಣದಲ್ಲಿ ನೀರಿನ ಉಳಿತಾಯ ಕೂಡ ಆಗುವುದು. ಈ ಜಾಕೆಟಿನ ಮಾರುಕಟ್ಟೆ ಬೆಲೆ ೨ ಸಾವಿರ ರೂಪಾಯಿಯಷ್ಟು ಇದೆ.