ಭೂಕಂಪದಿಂದ ಟರ್ಕಿಯ ಅರ್ಥ ವ್ಯವಸ್ಥೆಗೆ ಪೆಟ್ಟು

ಅಂಕಾರಾ (ಟರ್ಕಿ) – ಮೊದಲೇ ಆರ್ಥಿಕ ಬಿಕ್ಕಟ್ಟಿನಲ್ಲಿರುವ ಟರ್ಕಿ ಈಗ ಭೂಕಂಪದಿಂದ ಅಲ್ಲಿಯ ಅರ್ಥ ವ್ಯವಸ್ಥೆಗೆ ದೊಡ್ಡ ಹೊಡೆತ ಬಿದ್ದಿದೆ. ಅಲ್ಲಿಯ ಚಲನ ‘ಲೀರಾ’ದ ಮೌಲ್ಯ ಕುಸಿದಿದೆ. ಅಮೇರಿಕಾದಲ್ಲಿನ ಭೂಗರ್ಭ ವಿಜ್ಞಾನಿಗಳು ನಡೆಸಿರುವ ಸಮೀಕ್ಷೆಯ ಪ್ರಕಾರ ಟರ್ಕಿ ಮತ್ತು ಸಿರಿಯಾದಲ್ಲಿ ಆಗಿರುವ ಭೂಕಂಪನದಲ್ಲಿ ೧ ಅಬ್ಜ ಡಾಲರ್ (ಅಂದಾಜು ೮ ಸಾವಿರ ಕೋಟಿ ರೂಪಾಯಿ) ನಷ್ಟ ಆಗಿದೆ ಎಂದು ಅಂದಾಜಿಸಲಾಗಿದೆ. ಜನವರಿ ೨೦೨೦ ರಲ್ಲಿ ಇದೇ ಪ್ರದೇಶದಲ್ಲಿ ೬.೭ ರೆಕ್ಟರ್ ತೀವ್ರತೆಯ ಭೂಕಂಪದಿಂದ ಅಂದಾಜು ೪ ಸಾವಿರ ೯೦೦ ಕೋಟಿ ರೂಪಾಯಿ ನಷ್ಟ ಆಗಿತ್ತು.

೧. ಬೆಬಿಸಿಯಿಂದ ಪ್ರಕಟವಾದ ವಾರ್ತೆಯಲ್ಲಿ ಟರ್ಕಿಯ ಮಹಿಳೆಯ ಅಭಿಪ್ರಾಯದ ವರದಿ ನೀಡುವಾಗ, ಕಳೆದ ವರ್ಷ ಈ ಮಹಿಳೆ ಅಂದಾಜು ೧೯ ಸಾವಿರ ೭೦೦ ರೂಪಾಯಿ ಮನೆಯ ಬಾಡಿಗೆ ನೀಡುತ್ತಿದ್ದಳು. ಈಗ ಅದೇ ಮನೆ ಮಾಲೀಕನು ಮನೆ ಬಾಡಿಗೆ ಎರಡರಷ್ಟು ಹೆಚ್ಚಿಸಿದ್ದಾನೆ ಎಂದು ಹೇಳಿದ್ದಾರೆ.

೨. ಇಸ್ತಂಬುಲನಲ್ಲಿ ಒಬ್ಬ ಹೋಟೆಲ್ ವ್ಯವಸ್ಥಾಪಕ ಎರ್ಸಿನ್ ಫುಆಟ ಉಲುಕ್ ಇವರು, ಈಗ ಟರ್ಕಿಯಲ್ಲಿ ಕೇವಲ ಬಹಳ ಶ್ರೀಮಂತರು ಅಥವಾ ಬಹಳ ಬಡ ಜನರಿದ್ದಾರೆ. ಮಧ್ಯಮ ವರ್ಗದವರಿಲ್ಲ. ಸರಕಾರದ ಸಹಾಯದ ನಂತರ ಕೂಡ ಬೆಲೆ ಏರಿಕೆ ಎದುರಿಸುವುದು ಕಷ್ಟ ಸಾಧ್ಯವಾಗಿದೆ. ಇಲ್ಲಿಯ ಭವಿಷ್ಯ ಕತ್ತಲಲ್ಲಿದೆ ಎಂದು ಹೇಳಿದರು.

೩. ‘ಮುಂಬರುವ ಕಾಲದಲ್ಲಿ ಟರ್ಕಿಯ ಪರಿಸ್ಥಿತಿ ಇನ್ನೂ ಹದಗೆಡಬಹುದು’, ಎಂದು ಹೇಳುತ್ತಿದ್ದಾರೆ; ಕಾರಣ ‘ರಾಷ್ಟ್ರಪತಿ ಏರ್ದೋಗನ್ ಇವರು ಆರ್ಥಿಕ ಸಿದ್ದಾಂತದ ವಿರುದ್ಧ ಹೋಗುತ್ತಿದ್ದಾರೆ. ಅವರು ಸತತವಾಗಿ ಬಡ್ಡಿ ಕಡಿಮೆ ಮಾಡುತ್ತಿದ್ದಾರೆ. ಇತರ ದೇಶದ ಮಧ್ಯವರ್ತಿ ಬ್ಯಾಂಕಗಳ ಬೆಲೆ ಏರಿಕೆ ನಿಯಂತ್ರಣದಲ್ಲಿ ತರಲು ಬಡ್ಡಿ ಹೆಚ್ಚಿಸುತ್ತಿದ್ದಾರೆ, ಹೀಗೆ ಜನರು ಹೇಳುತ್ತಿದ್ದಾರೆ.