ವಾರಾಣಸಿಯ ಒಂದು ಗ್ರಾಮದ ಮಾರುತಿ ದೇವಸ್ಥಾನದಲ್ಲಿ ದುಷ್ಕರ್ಮಿಗಳಿಂದ ಮೂರ್ತಿಭಂಜನೆ !

ವಾರಾಣಸಿ (ಉತ್ತರಪ್ರದೇಶ) – ಇಲ್ಲಿಯ ಚೌಬೇಪುರದ ಡುಬಕಿ ಎಂಬ ಗ್ರಾಮದಲ್ಲಿರುವ ಖಪಡಿಯಾ ಬಾಬಾ ಆಶ್ರಮದಲ್ಲಿರುವ ದಕ್ಷಿಣಮುಖಿ ಮಾರುತಿ ದೇವಸ್ಥಾನದಲ್ಲಿರುವ ಮೂರ್ತಿಯನ್ನು ಧ್ವಂಸಗೊಳಿಸಲಾಗಿದೆ ಹಾಗೂ ತ್ರಿಶೂಲವನ್ನು ಹೊರಗೆ ಎಸೆಯಲಾಗಿದೆ. ಹಾಗೆಯೇ ಇಲ್ಲಿದ್ದ ಶಿವಲಿಂಗವು ಕಾಣೆಯಾಗಿದ್ದು ನಂದಿಯ ಮೂರ್ತಿಯನ್ನು ಹೊರಗೆ ಎಸೆಯಲಾಗಿದೆ. ಸಿಸಿಟಿವಿಯ ಚಿತ್ರಿಕರಣದ ಆಧಾರದಲ್ಲಿ ಪೊಲೀಸರು ಆರೋಪಿಗಳನ್ನು ಹುಡುಕುತ್ತಿದ್ದಾರೆ. ಹಾಗೆಯೇ ಇಲ್ಲಿ ಹೊಸ ಮೂರ್ತಿಯನ್ನು ಸ್ಥಾಪಿಸುವುದಾಗಿ ಆಶ್ವಾಸನೆ ನೀಡಿದ್ದಾರೆ. ಈ ವಿಧ್ವಂಸದ ಘಟನೆಯು ಫೆಬ್ರುವರಿ ೫ರ ರಾತ್ರಿ ನಡೆದಿದೆ.

ಸಂಪಾದಕೀಯ ನಿಲುವು

ಇಸ್ಲಾಮಿ ದೇಶದಲ್ಲಿ ಅಲ್ಲ, ಹಿಂದೂಗಳು ಬಹುಸಂಖ್ಯಾತರಾಗಿರುವ ಭಾರತದಲ್ಲಿ ಹಿಂದೂ ಗಳ ದೇವಸ್ಥಾನಗಳು ಅಸುರಕ್ಷಿತವಾಗಿರುವುದು ಹಿಂದೂಗಳಿಗೆ ನಾಚಿಕೆಗೇಡಿನ ಸಂಗತಿ !