ಬರುವ ಯುಗಾದಿಯ ನಂತರ ಪ್ರಕೃತಿ ವಿಕೋಪ ಆಗುವುದು !

ಕೋಡಿಮಠದ ಡಾ. ಶಿವಾನಂದ ಶಿವಯೋಗಿ ರಾಜೇಂದ್ರ ಮಹಾಸ್ವಾಮಿಜಿ ಇವರ ಭವಿಷ್ಯವಾಣಿ !

ಕರ್ನಾಟಕದಲ್ಲಿನ ರಾಜಕೀಯ ಪಕ್ಷಗಳು ಚಲ್ಲಾಪಿಲ್ಲಿ ಆಗುವ ಮುನ್ಸೂಚನೆ !

ಕೋಡಿಮಠದ ಡಾ. ಶಿವಾನಂದ ಶಿವಯೋಗಿ ರಾಜೇಂದ್ರ ಮಹಾಸ್ವಾಮಿಜಿ

ಬಾಗಲಕೋಟ (ಕರ್ನಾಟಕ) – ಬರುವ ಯುಗಾದಿಯ ನಂತರ ಪ್ರಕೃತಿ ವಿಕೋಪ ಆಗಲಿದೆ, ಎಂದು ಕೋಡಿ ಮಠದ ಡಾ. ಶಿವಾನಂದ ಶಿವಯೋಗಿ ರಾಜೇಂದ್ರ ಮಹಾಸ್ವಾಮೀಜಿಯವರು ಭವಿಷ್ಯವಾಣಿ ನೀಡಿದ್ದಾರೆ. ಜಮಖಂಡಿಯಲ್ಲಿ ಪತ್ರಕರ್ತರ ಜೊತೆಗೆ ಮಾತನಾಡುವಾಗ, ಮಾಡಬಾರದು ಮಾಡಿದರೆ ಆಗಬಾರದು ಆಗುತ್ತದೆ. ಯಾರದೇ ತಪ್ಪು ಇರಲಿ ಸರಿ ಇರಲಿ ನಾವು ಏನು ಮಾಡುತ್ತೇವೆ ಹಾಗೆ ನಡೆಯುತ್ತದೆ. ನಾವು ಏನು ಬಿತ್ತುತ್ತೇವೆ ಅದೇ ಬೆಳೆಯುತ್ತದೆ. ಮುಂದಿನ ಸಲ ಕೂಡ ರಾಜ್ಯದಲ್ಲಿ ಅಸ್ಥಿರತೆ ಇರುವುದು. ಎಲ್ಲಾ ಪಕ್ಷಗಳು ಚಲ್ಲಾಪಿಲ್ಲಿಯಾಗುವ ಲಕ್ಷಣಗಳಿದೆ. ಚುನಾವಣೆಯ ನಂತರ ಪಕ್ಷಾಂತರವಾಗುವುದು. ರಾಜಕೀಯ ಪಕ್ಷ ಒಡೆಯುವುದು. ಆದರೆ ಒಂದೇ ಪಕ್ಷ ಅಧಿಕಾರಕ್ಕೆ ಬರುವುದು. ಎಷ್ಟು ಸುಖ ಇದೆ ಅಷ್ಟೇ ದುಃಖ ಇರಲಿದೆ. ಒಲೆ ಹೊತ್ತಿ ಉರಿಯುತ್ತಿದ್ದರೆ ಅದನ್ನು ಆರಿಸಬಹುದು, ಆದರೆ ಭೂಮಿ ಹೊತ್ತಿ ಉರಿದರೆ ಅದನ್ನು ಆರಿಸುವುದು ಸಾಧ್ಯವಿಲ್ಲ ಎಂದು ಹೇಳಿದರು.

(ಸೌಜನ್ಯ: Asianet Suvarna News)