ಉತ್ತರ ಪ್ರದೇಶದಲ್ಲಿ ಮದರಸಾದ ಹುಡುಗನಿಂದ ಓರ್ವ ಹುಡುಗನ ಲೈಂಗಿಕ ದೌರ್ಜನ್ಯ ನಡೆಸಿ ಹತ್ಯೆ !

ಮದರಸದಲ್ಲಿ ಈ ರೀತಿ ಕಾಮುಕ ಮತ್ತು ಹಂತಕ ಹುಡುಗರನ್ನು ಪೋಷಿಸುತ್ತಿದ್ದರೆ ಅಂತಹ ಮದರಸಾಗಳನ್ನು ನಿಷೇಧಿಸುವುದು ಅವಶ್ಯಕ !

ಲಕ್ಷ್ಮಣಪುರಿ – ದೇವಬಂದ ಜಿಲ್ಲೆಯಲ್ಲಿನ ಸಂಪಲಾ ಬಕ್ಕಲ ಗ್ರಾಮದಲ್ಲಿ ರಹಿಮಿಯಾ ಮದರಸಾದಲ್ಲಿ ಕಲಿಯುತ್ತಿದ್ದ ಓರ್ವ ೧೩ ವರ್ಷದ ಹುಡುಗನ ಮೇಲೆ ಅದೇ ಮದರಸದಲ್ಲಿ ಓದುತ್ತಿದ್ದ ಮತ್ತೋರ್ವ ಹುಡುಗನು ಲೈಂಗಿಕ ದೌರ್ಜನ್ಯ ನಡೆಸಿದ್ದಾನೆ. ಇದರ ಬಗ್ಗೆ ಸಂತ್ರಸ್ತ ಹುಡುಗ ಸಮಾಜಕ್ಕೆ ಹೋಗಿ ಹೇಳುವನು ಎಂಬ ಭಯದಿಂದ ಲೈಂಗಿಕ ದೌರ್ಜನ್ಯ ಮಾಡಿದವನು ಆ ಹುಡುಗನ ಹತ್ಯೆ ಮಾಡಿದ್ದಾನೆ.

ಜನವರಿ ೩೦ ರಂದು ಸಂಜೆ ೭.೩೦ ಗಂಟೆಗೆ ಸಂತ್ರಸ್ತ ಹುಡುಗ ಮನೆಯಿಂದ ಹೊರ ಬಂದಿದ್ದನು. ಅವನು ತಡರಾತ್ರಿ ಆದರು ಮನೆಗೆ ಹಿಂತಿರುಗಿರಲಿಲ್ಲ. ಆದ್ದರಿಂದ ಕುಟುಂಬದವರು ಅವನನ್ನು ಹುಡುಕಲು ಪ್ರಾರಂಭಿಸಿದರು. ಮರುದಿನ ಬೆಳಿಗ್ಗೆ ಒಂದು ಹೊಲದಲ್ಲಿ ಅವನ ಶವ ಕಂಡಿತು. ಅವನ ಮೈ ಮೇಲೆ ಬಟ್ಟೆ ಇಲ್ಲದ್ದರಿಂದ ಕುಟುಂಬದವರು ಅವನ ಮೇಲೆ ಲೈಂಗಿಕ ದೌರ್ಜನ್ಯ ನಡೆದಿರುವ ಅನುಮಾನ ವ್ಯಕ್ತಪಡಿಸಿದರು. ಪೊಲೀಸರು ತನಿಖೆ ನಡೆಸುತ್ತಿರುವಾಗ ‘ಹತ್ಯೆ ಮಾಡುವ ಹುಡುಗನ ಜೊತೆ ಇನ್ನೂ ೫ ಹುಡುಗರಿದ್ದರು’ ಎಂಬ ಮಾಹಿತಿ ಸಿಕ್ಕಿದೆ. ಈ ಸಮಯದಲ್ಲಿ ಪೊಲೀಸರು ಈ ಐದು ಜನ ಹುಡುಗರನ್ನು ವಶಕ್ಕೆ ಪಡೆದಿದ್ದಾರೆ. ವಿಚಾರಣೆ ನಡೆಸುತ್ತಿರುವಾಗ ಓರ್ವ ಹುಡುಗನು ದೌರ್ಜನ್ಯ ನಡೆಸಿ ಹುಡುಗನ ಹತ್ಯೆ ಮಾಡಿರುವುದು ಒಪ್ಪಿಕೊಂಡಿದ್ದಾನೆ. ಈ ಹುಡುಗನ ಮೊದಲು ಸಂತ್ರಸ್ತ ಹುಡುಗನ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿ ನಂತರ ಅವನ ಕತ್ತು ಕೊಯ್ದು ಹತ್ಯೆ ಮಾಡಿದ್ದಾನೆ.