ಬಿಬಿಸಿಯ ಸಾಕ್ಷ್ಯಚಿತ್ರವನ್ನು ಏಕೆ ನಿಷೇಧಿಸಲಾಯಿತು ?, ಉತ್ತರ ನೀಡಿ !

ಸರ್ವೋಚ್ಚ ನ್ಯಾಯಾಲಯದಿಂದ ಕೇಂದ್ರ ಸರಕಾರಕ್ಕೆ ಆದೇಶ

ನವದೆಹಲಿ – ಗುಜರಾತ ಗಲಭೆಯ ಬಗ್ಗೆ ‘ಇಂಡಿಯಾ : ದಿ ಮೊದಿ ಕ್ವೆಶ್ಚನ್’ ಎಂದು ಬಿಬಿಸಿಯಿಂದ ನಿರ್ಮಿಸಿರುವ ಸಾಕ್ಷ್ಯಚಿತ್ರವನ್ನು ಏಕೆ ನಿಷೇಧಿಸಿದ್ದೀರಿ ? ಎಂದು ಸರ್ವೋಚ್ಚ ನ್ಯಾಯಾಲಯವು ಕೇಂದ್ರ ಸರಕಾರಕ್ಕೆ ಇದರ ಮಾಹಿತಿ ನೀಡುವ ಆದೇಶ ನೀಡಿದೆ. ಇದಕ್ಕಾಗಿ ಕೇಂದ್ರ ಸರಕಾರಕ್ಕೆ ೩ ವಾರದ ಸಮಯ ಮಿತಿ ನೀಡಿದೆ. ತೃಣಮೂಲ ಕಾಂಗ್ರೆಸ್ಸಿನ ಸಂಸದ ಮಾಹುಆ ಮೋಯಿತ್ರಾ, ಹಿರಿಯ ಪತ್ರಕರ್ತ ಎನ್. ರಾಮ, ಕಾನೂನ ತಜ್ಞ ಪ್ರಶಾಂತ ಭೂಷಣ ಮತ್ತು ನ್ಯಾಯವಾದಿ ಎಂ.ಎಲ್. ಶರ್ಮಾ ಇವರು ಕೇಂದ್ರ ಸರಕಾರದ ವಿರುದ್ಧ ಅರ್ಜಿ ದಾಖಲಿಸಿದ್ದಾರೆ. (ಇಂತಹ ಜನರು ಎಂದಾದರೂ ಹಿಂದೂಗಳ ಮೇಲೆ ನಡೆದಿರುವ ದೌರ್ಜನ್ಯದ ವಿರುದ್ಧ ಧ್ವನಿ ಎತ್ತುವುದಿಲ್ಲ ಅಥವಾ ಹಿಂದೂಗಳಿಗೆ ಸಹಾಯ ಮಾಡುವುದಿಲ್ಲ ಇದನ್ನು ತಿಳಿದುಕೊಳ್ಳಿ ! – ಸಂಪಾದಕರು) ಈ ಸಾಕ್ಷ್ಯಚಿತ್ರದಿಂದ ಪ್ರತ್ಯಕ್ಷ ಅಥವಾ ಪರೋಕ್ಷ ನಿಷೇಧ ಹೇರುವ ನಿರ್ಣಯ ಕೇಂದ್ರ ಸರಕಾರ ರದ್ದು ಪಡಿಸಬೇಕು ಎಂದು ಅರ್ಜಿಯಲ್ಲಿ ಆಗ್ರಹಿಸಿದ್ದಾರೆ. ಈ ಸಾಕ್ಷ್ಯಚಿತ್ರದಲ್ಲಿ ೨೦೦೨ ರಲ್ಲಿ ಗುಜರಾತನ ಗಲಭೆಯಲ್ಲಿ ಅಂದಿನ ಮುಖ್ಯಮಂತ್ರಿ ಮತ್ತು ಈಗಿನ ಪ್ರಧಾನ ಮಂತ್ರಿ ನರೇಂದ್ರ ಮೋದಿ ಇವರ ಸಹಭಾಗಿರುವ ದಾವೆ ಮಾಡಿ ಹಿಂದೂದ್ವೇಷ ತೋರಿಸಿದ್ದಾರೆ.