ಅಯೋಧ್ಯೆಯಲ್ಲಿರುವ ಶ್ರೀ ರಾಮ ಜನ್ಮ ಭೂಮಿಯನ್ನು ‘ಅಯೋಧ್ಯೆ ಬುದ್ಧ ವಿಹಾರ’ ಎಂದು ಘೋಷಿಸಲು ಸರ್ವೋಚ್ಚ ನ್ಯಾಯಾಲಯದಿಂದ ನಿರಾಕರಣೆ !

ನವದೆಹಲಿ – ಅಯೋಧ್ಯೆಯಲ್ಲಿರುವ ಶ್ರೀ ರಾಮಜನ್ಮ ಭೂಮಿಯನ್ನು ‘ಅಯೋಧ್ಯಾ ಬುದ್ಧ ವಿಹಾರ’ ಎಂದು ಘೋಷಿಸಲು ಸರ್ವೋಚ್ಚ ನ್ಯಾಯಾಲಯ ನಿರಾಕರಿಸಿದೆ. ನ್ಯಾಯಮೂರ್ತಿ ಚಂದ್ರ ಚೂಡರ ಖಂಡಪೀಠದೆದುರಿಗೆ ಈ ಅರ್ಜಿ ವಿಚಾರಣೆಗೆ ಬಂದಿತ್ತು. ಆ ಸಂದರ್ಭದಲ್ಲಿ ಖಂಡಪೀಠವು, ‘ನ್ಯಾಯಾಲಯವು 2019ರಲ್ಲಿ ಅಯೋಧ್ಯೆ ಪ್ರಕರಣದ ವಿಷಯದಲ್ಲಿ ತೀರ್ಪು ನೀಡಿದೆ‌ ಇದರಿಂದ ದೂರುದಾರರು ಈ ಅರ್ಜಿಯನ್ನು ಹಿಂಪಡೆಯಬೇಕು. ಇಲ್ಲವಾದರೆ ನ್ಯಾಯಾಲಯ ಅದನ್ನು ರದ್ದು ಗೊಳಿಸುವುದು’ ಎಂದು ಹೇಳಿದೆ. ವಿನೀತ ಮೌರ್ಯ ಹೆಸರಿನ ಅರ್ಜಿದಾರರು ಈ ಅರ್ಜಿಯನ್ನು ದಾಖಲಿಸಿದ್ದರು. ‘ಶ್ರೀ ರಾಮಜನ್ಮ ಭೂಮಿಯ ಸ್ಥಳದಿಂದ ಬೌದ್ಧ ಕಲಾಕೃತಿ ವಶಕ್ಕೆ ಪಡೆಯಲಾಗಿತ್ತು. ಶ್ರೀರಾಮಜನ್ಮ ಭೂಮಿ-ಬಾಬರಿ ಮಸೀದಿಯ ತೀರ್ಪು ನೀಡುವಾಗ ಅಲಹಾಬಾದ್ ಉಚ್ಚ ನ್ಯಾಯಾಲಯವು 2010ರಲ್ಲಿ ನೀಡಿದ ತೀರ್ಪಿನಲ್ಲಿ ಈ ವಿಷಯವನ್ನು ನಮೂದಿಸಿದೆ. ಆದ್ದರಿಂದ ಪ್ರಾಚೀನ ಸ್ಮಾರಕಗಳು, ಪುರಾತತ್ವ ಸ್ಥಳಗಳು ಮತ್ತು ಅವಶೇಷಗಳು (ಸುಧಾರಣಾ ಮತ್ತು ಪ್ರಮಾಣೀಕರಣ) ಕಾನೂನಿನ ಕಲಂ 3ಮತ್ತು 4 ಅನ್ವಯ ಈ ಭೂಮಿಯನ್ನು ರಾಷ್ಟ್ರೀಯ ಪುರಾತತ್ವ ಸ್ಥಳವೆಂದು ಘೋಷಿಸಬೇಕು’ ಎಂದು ಮೌರ್ಯರು ಪ್ರತಿವಾದಿಸಿದ್ದರು.