ಅಮೃತಸರ ಹತ್ತಿರ ಸೈನಿಕರು ಪಾಕಿಸ್ತಾನಿ ಡ್ರೋನ ಕೆಡವಿದರು !

ಅಮೃತಸರ (ಪಂಜಾಬ) – ಇಲ್ಲಿನ ರೇಅರ್ ಕಕ್ಕರ ಪ್ರದೇಶದಲ್ಲಿ ಮಧ್ಯರಾತ್ರಿ ೨.೩೦ ಸುಮಾರಿಗೆ ಪಾಕಿಸ್ತಾನದಿಂದ ಬಂದ ಡ್ರೋನ ಭಾರತದ ಗಡಿ ಭದ್ರತಾ ಪಡೆಗಳ ಸೈನಿಕರು ಗುಂಡುಹಾರಾಟ ನಡೆಸಿ ಕೆಡವಿದರು. ಗಡಿಯಲ್ಲಿ ಭಾರತದ ಬದಿಯ ತಂತಿಯ ಬೇಲಿಯ ಹತ್ತಿರ ಬಿದ್ದಿದೆ. ಅದಕ್ಕೆ ಜೋಡಿಸಿದ್ದ ಕೆಲವು ಸಂದೇಹಾಸ್ಪದ ವಸ್ತು ಕಂಡು ಬಂದಿದೆ ಎಂದು ಗಡಿ ಭದ್ರತಾ ಪಡೆಯು ಮಾಹಿತಿ ನೀಡಿದ್ದು ಅದರ ತನಿಖೆ ನಡೆಸಲಾಗುತ್ತಿದೆ.