ನವ ದೆಹಲಿ – ಅಮೇರಿಕಾದ ಹಿಂಡೆನ್ ಬರ್ಗ ಸಂಸ್ಥೆಯು ಭಾರತೀಯ ಉದ್ಯಮಿ ಗೌತಮ ಅದಾನಿ ಇವರ ಉದ್ಯಮಗಳ ವಿರುದ್ಧ ನೀಡಿರುವ ವರದಿಯ ಕುರಿತು 2 ಫೆಬ್ರುವರಿಯಂದು ಸಂಸತ್ತಿನ ಎರಡೂ ಸದನದಲ್ಲಿ ವಿರೋಧ ಪಕ್ಷಗಳು ಗದ್ದಲ ನಡೆಸಿದರು. ಇದರಿಂದ ಸಭಾಗೃಹದ ಕಾರ್ಯ ಕಲಾಪ ಮಧ್ಯಾಹ್ನ 2 ಗಂಟೆಯ ವರೆಗೆ ಸ್ಥಗಿತಗೊಳಿಸಲಾಗಿತ್ತು. ತದನಂತರ ಕಾರ್ಯ ಕಲಾಪ ಪ್ರಾರಂಭವಾದ ಬಳಿಕ ಪುನಃ ಗದ್ದಲ ನಡೆದಿದ್ದರಿಂದ ದಿನವಿಡೀ ಸ್ಥಗಿತಗೋಳಿಸಲಾಯಿತು. ಈ ವರದಿಯನ್ವಯ ಸಂಸತ್ತಿನ ವಿಚಾರಣಾ ಸಮಿತಿ ಸ್ಥಾಪಿಸುವಂತೆ ವಿರೋಧ ಪಕ್ಷದವರು ಕೋರಿದ್ದಾರೆ.
ಲೋಕಸಭೆ ಕಲಾಪದಲ್ಲಿ ಅದಾನಿ ಗ್ರೂಪ್ ವಿರುದ್ಧದ ಆರೋಪದ ಬಗ್ಗೆ ಚರ್ಚೆಗೆ ವಿಪಕ್ಷಗಳ ಪಟ್ಟು#LokSabha #panel #Parliament #AdaniGroup https://t.co/rb85unNJZb
— Udayavani (@udayavani_web) February 2, 2023
ಸಂಪಾದಕರ ನಿಲುವುಲಕ್ಷಾಂತರ ರೂಪಾಯಿ ಖರ್ಚು ಮಾಡಿ ನಡೆಸುವ ಸಂಸತ್ತಿನ ಕಾರ್ಯ ಕಲಾಪಗಳನ್ನು ಈ ರೀತಿ ಗದ್ದಲ ಮಾಡಿ ಸ್ಥಗಿತ ಗೊಳಿಸುವವರಿಂದ ಹಣವನ್ನು ವಸೂಲು ಮಾಡುವ ಮತ್ತು ಅಂತಹವರ ಸದಸ್ಯತ್ವವನ್ನು ರದ್ದುಗೊಳಿಸುವ ಕಾನೂನು ರಚಿಸುವ ಆವಶ್ಯಕತೆ ಇದೆ ! |