ರಾ. ಸ್ವ. ಸಂಘದ ಸಹಕಾರ್ಯವಾಹಕ ದತ್ತಾತ್ರೇಯ ಹೊಸಬಾಳೆಯವರ ಸ್ಪಷ್ಟೋಕ್ತಿ !
ಜೈಪುರ (ರಾಜಸ್ಥಾನ) – ಭಾರತವು ಹಿಂದೂ ರಾಷ್ಟ್ರವೇ ಆಗಿದೆ; ಏಕೆಂದರೆ ಈ ದೇಶವನ್ನು ನಿರ್ಮಿಸಿದರೋ ಅವರು ಹಿಂದೂಗಳೇ ಆಗಿದ್ದಾರೆ. ಭಾರತದಲ್ಲಿರುವ ಎಲ್ಲ ಜನರು ಹಿಂದೂ ಆಗಿದ್ದಾರೆ; ಏಕೆಂದರೆ ಅವರ ಪೂರ್ವಜರು ಹಿಂದೂ ಆಗಿದ್ದರು. ಅವರ ಉಪಾಸನೆಯ ಪದ್ಧತಿ ಬೇರೆಯಾಗಿರಬಹುದು; ಆದರೆ ಅವರೆಲ್ಲರ ಡಿಎನ್‌ಎ ಒಂದೇ ಆಗಿದೆ, ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಸಹಕಾರ್ಯವಾಹಕ ದತ್ತಾತ್ರೇಯ ಹೊಸಬಾಳೆ ಇವರು ಇಲ್ಲಿನ ಬಿರ್ಲಾ ಸಭಾಗೃಹದಲ್ಲಿ ದೀನದಯಾಳ ಸ್ಮೃತಿ ವ್ಯಾಖ್ಯಾನಮಾಲೆಯಲ್ಲಿ ಹೇಳಿಕೆ ನೀಡಿದರು. ಅವರು ‘ರಾಷ್ಟ್ರೀಯ ಸ್ವಯಂಸೇವಕ ಸಂಘ : ನಿನ್ನೆ, ಇಂದು ಮತ್ತು ನಾಳೆ’ ಈ ವಿಷಯದಲ್ಲಿ ಮಾತನಾಡುತ್ತಿದ್ದರು.
Bharat’s Identity is of Hindu Rashtra, Says RSS Sarkaryavah Shri Dattatreya Hosabale @RSSorg #HinduRashtra #RSS https://t.co/3HhrUs5SFo
— Organiser Weekly (@eOrganiser) January 1, 2022
ಸಹಕಾರ್ಯವಾಹಕ ಹೊಸಬಾಳೆ ಇವರು ಮಂಡಿಸಿರುವ ಸೂತ್ರಗಳು
೧. ಕೆಲವರು ವೇದ ಹಾಗೂ ಪುರಾಣಗಳಲ್ಲಿ ಹಿಂದೂ ಶಬ್ದ ಇಲ್ಲ ಎಂದು ಹೇಳುತ್ತಾರೆ; ಆದರೆ ವೇದ ಹಾಗೂ ಪುರಾಣಗಳಲ್ಲಿ ಇದನ್ನು ಒಪ್ಪದೇ ಇರುವಂತಹ ಯಾವುದೇ ವಿಷಯ ಇಲ್ಲ. ಸತ್ಯ ಹಾಗೂ ಉಪಯುಕ್ತ ವಿಷಯಗಳನ್ನು ಸ್ವೀಕರಿಸಬೇಕು.
೨. ಡಾ. ಹೆಡಗೆವಾರ್ ‘ಹಿಂದೂ ಯಾರು ?’ ಈ ವ್ಯಾಖ್ಯೆಯಲ್ಲಿ ಸಿಲುಕಲಿಲ್ಲ. ಯಾರು ಭಾರತ ಭೂಮಿಯನ್ನು ಪಿತೃಭೂಮಿಯೆಂದು ಒಪ್ಪುತ್ತಾರೊ, ಅವರು ಹಿಂದೂ ಆಗಿದ್ದಾರೆ. ಯಾರ ಪೂರ್ವಜರು ಹಿಂದೂ ಆಗಿದ್ದಾರೆ, ಅವರು ಹಿಂದೂ ಆಗಿದ್ದಾರೆ. ಯಾರು ತನ್ನನ್ನು ಹಿಂದೂ ಎಂದು ತಿಳಿಯುತ್ತಾನೊ, ಅವನು ಹಿಂದೂ ಆಗಿದ್ದಾನೆ. ಯಾರನ್ನು ನಾವು ಹಿಂದೂ ಎಂದು ಹೇಳುತ್ತೇವೆಯೊ, ಅವರು ಹಿಂದೂ ಆಗಿದ್ದಾರೆ.
೩. ಭಾರತದಲ್ಲಿನ ೬೦೦ ಕ್ಕಿಂತಲೂ ಹೆಚ್ಚು ಪಂಗಡಗಳು, ‘’ನಾವು ಬೇರೆಯೇ ಆಗಿದ್ದೇವೆ ಹಿಂದೂಗಳಲ್ಲ’’ ಎಂದು ಹೇಳುತ್ತಾರೆ. ಅವರನ್ನು ಪ್ರಚೋದಿಸುವ ಕಾರ್ಯವನ್ನು ಭಾರತವಿರೋಧಿ ಶಕ್ತಿಗಳು ಮಾಡುತ್ತಿದ್ದುವು. ಆಗ ಪೂ. ಗೋಳವಲಕರ್ ಗುರೂಜಿ “ಅವರು ಹಿಂದೂ ಆಗಿದ್ದಾರೆ” ಎಂದು ಹೇಳಿದ್ದರು.
೪. ನಾವು ‘ವಸುದೈವ ಕುಟುಂಬಕಮ್ |’ (ಅರ್ಥ : ಪೃಥ್ವಿಯೇ ಕುಟುಂಬ ಆಗಿದೆ.) ಈ ಸಂಕಲ್ಪನೆಯಲ್ಲಿ ಕಾರ್ಯ ಮಾಡುವವರಿಗೆ ಬಾಗಿಲು ತೆರೆದಿದೆ. ಯಾರಾದರೂ ಪರ್ಯಾವಿಲ್ಲದೆ ಗೋಮಾಂಸ ತಿಂದಿದ್ದರೆ ಹಾಗೂ ಯಾವುದೊ ಕಾರಣದಿಂದ ಅವರು ಹೊರಗೆ ಹೋಗಿದ್ದರೆ; ಅವರಿಗೆ ನಾವು ನಮ್ಮ ಬಾಗಿಲನ್ನು ಮುಚ್ಚಲು ಸಾಧ್ಯವಿಲ್ಲ. ಇಂದು ಕೂಡ ಅವರು ಹಿಂದೂ ಧರ್ಮದಲ್ಲಿ ಪುನಃ ಪ್ರವೇಶ ಮಾಡಬಹುದು.
೫. ಇಂದು ಸಂಘ ರಾಷ್ಟ್ರೀಯ ಜೀವನದ ಕೇಂದ್ರಸ್ಥಾನದಲ್ಲಿದೆ. ಸಂಘ ವ್ಯಕ್ತಿ ಹಾಗೂ ಸಮಾಜ ನಿರ್ಮಾಣದ ಕಾರ್ಯ ಮಾಡುತ್ತಾ ಇರುವುದು. ಸಮಾಜದಲ್ಲಿನ ಜನರನ್ನು ಜೋಡಿಸಿ ಸಮಾಜಕ್ಕಾಗಿ ಕಾರ್ಯ ಮಾಡಲಿದೆ. ಇಂದು ಸಂಘದ ಒಂದು ಲಕ್ಷ ಸ್ಥಳಗಳಲ್ಲಿ ಸೇವಾಕಾರ್ಯ ನಡೆಯುತ್ತಿದೆ. ದೇಶದಲ್ಲಿ ಸಂಘದ ನೂರಾರು ಜನರ ಹತ್ಯೆಯಾಯಿತು; ಆದರೆ ಕಾರ್ಯಕರ್ತರು ಭಯಭೀತರಾಗಿಲ್ಲ. ಸಂಘ ಕೇವಲ ರಾಷ್ಟ್ರಹಿತಕ್ಕಾಗಿ ಕಾರ್ಯ ಮಾಡುತ್ತದೆ. ಹಾಗೂ ನಾವು ರಾಷ್ಟ್ರವಾದಿಗಳಾಗಿದ್ದೇವೆ ಎಂದು ಹೇಳಿದರು.