ಮುಸ್ಲಿಂ ದೇಶಗಳಲ್ಲಿನ ಮುಸಲ್ಮಾನರಿಗಿಂತ ಭಾರತದಲ್ಲಿರುವ ಮುಸಲ್ಮಾನರಿಗೆ ಹೆಚ್ಚು ಧಾರ್ಮಿಕ ಸ್ವಾತಂತ್ರ್ಯ- ಮುಸಲ್ಮಾನ ವಿಚಾರವಾದಿ ಪೋನಮಾಲಾ ಅಬ್ದುಲಖದೆರ ಮುಸಲಿಯಾರ

ಮುಸಲ್ಮಾನ ವಿಚಾರವಾದಿ ಪೋನಮಾಲಾ ಅಬ್ದುಲ್ ಖದೆರ ಮುಸಲಿಯಾ

ಕೋಝಿಕೋಡ (ಕೇರಳ) – ನೀವು ಜಗತ್ತಿನ ವಿವಿಧ ದೇಶಗಳನ್ನು ನೋಡಿದರೆ, ಭಾರತದಂತೆ ಇನ್ಯಾವುದೇ ದೇಶವಿಲ್ಲ. ಇಸ್ಲಾಮಿ ಕಾರ್ಯಗಳನ್ನು ಮಾಡಲು ಇಲ್ಲಿ ಪೂರ್ಣ ಸ್ವಾತಂತ್ರ್ಯ ಸಿಗುತ್ತದೆ. ಕೊಲ್ಲಿ ದೇಶಗಳಲ್ಲಿಯೂ ಇಷ್ಟು ಸ್ವಾತಂತ್ರ್ಯ ಸಿಗುವುದಿಲ್ಲ ಎಂಬುದು ಕಂಡುಬರುತ್ತದೆ ಎಂದು ಮುಸಲ್ಮಾನ ವಿಚಾರವಾದಿ ಪೋನಮಾಲಾ ಅಬ್ದುಲ್ ಖದೆರ ಮುಸಲಿಯಾರ ಹೇಳಿದ್ದಾರೆ. ಮುಸಲಿಯಾರ ಮಾರ್ಕ್ಸವಾದಿ ಕಮ್ಯುನಿಸ್ಟ ಪಕ್ಷದ ‘ಸಂಪೂರ್ಣ ಕೇರಳ ಜಮಾಯತುಲ್ಲಾ ಉಲಮಾ’ದ ಸಚಿವರಾಗಿದ್ದಾರೆ. ಅವರು ಕೋಝಿಕೋಡನಲ್ಲಿ ಸುನ್ನಿ ಸ್ಟುಡೆಂಟ್ಸ ಫೆಡರೇಶನ ಸಭೆಯಲ್ಲಿ ಮಾತನಾಡುತ್ತಿದ್ದರು.

ಇಸ್ಲಾಮಿ ಕಾರ್ಯಗಳನ್ನು ಮಾಡಲು ಭಾರತದಂತಹ ಬೇರೆಯಾವುದೇ ದೇಶವಿಲ್ಲ !

ಮುಸಲಿಯಾರ ಮಾತನಾಡುತ್ತಾ, ಮಲೇಶಿಯಾದಂತಹ ಪೂರ್ವದ ದೇಶದಲ್ಲಿಯೂ ನಮಗೆ ಇಸ್ಲಾಮಿ ಕಾರ್ಯ ಮಾಡಲು ಧಾರ್ಮಿಕ ಸ್ವಾತಂತ್ರ್ಯ ಸಿಗುವುದಿಲ್ಲ. ನಾವು ಭಾರತದಲ್ಲಿ ಮಾಡುತ್ತಿರುವ ಸಂಘಟನಾತ್ಮಕ ಕಾರ್ಯಗಳನ್ನು ಬೇರೆ ಕಡೆಗೆ ಮಾಡಲು ಸಾಧ್ಯವಿದೆಯೇ ? ಇಸ್ಲಾಮಿ ಕಾರ್ಯಕ್ಕಾಗಿ ಭಾರತದಂತಹ ಬೇರೆ ದೇಶವಿಲ್ಲ ಎಂದು ಹೇಳಿದರು.

‘ಸಂಪೂರ್ಣ ಕೇರಳ ಜಮಾ-ಯಿತುಲ್ಲಾ ಉಲಮಾ’ದ ಪ್ರದೇಶಾಧ್ಯಕ್ಷ ಸೈಯ್ಯದ ಅಲಿ ಶಿಹಾಬ ಥಂಗಲ್ ಇವರು ಪೋನಮಾಲಾ ಮುಸಲಿಯಾರ ಹೇಳಿಕೆಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸುತ್ತಾ, ಇಲ್ಲಿಯ ಮುಸಲ್ಮಾನರಿಗೆ ದೇಶದಲ್ಲಿ ಯಾವುದೇ ರೀತಿಯ ಅಪಾಯವನ್ನು ಎದುರಿಸಬೇಕಾಗುವುದಿಲ್ಲ; ಕಾರಣ ಈ ದೇಶದ ಸಂವಿಧಾನ ಸಧೃಢವಾಗಿದೆ ಎಂದು ಹೇಳಿದರು.

ಸಂಪಾದಕೀಯ ನಿಲುವು

ಭಾರತೀಯ ಸಂವಿಧಾನ ಜಾತ್ಯತೀತವಾಗಿರುವುದರಿಂದ ಮತ್ತು ಕಳೆದ 75 ವರ್ಷಗಳಲ್ಲಿ ಎಲ್ಲ ಪಕ್ಷಗಳ ರಾಜಕಾರಣಿಗಳ ಓಲೈಕೆಯ ರಾಜಕೀಯದಿಂದ ಬಹುಸಂಖ್ಯಾತ ಹಿಂದೂಗಳನ್ನು ಅದುಮಿಟ್ಟು ಮುಸಲ್ಮಾನರನ್ನು ತಲೆಯ ಮೇಲೆ ಕುಳ್ಳಿರಿಸಿಕೊಂಡಿರುವುದರಿಂದಲೇ ಈ ಸ್ಥಿತಿ ಬಂದಿದೆ. ಭಾರತದಲ್ಲಿರುವ ಹಿಂದೂಗಳ ಸ್ಥಿತಿ ಮಾತ್ರ ಮುಸ್ಲಿಂ ದೇಶದಲ್ಲಿರುವ ಅಲ್ಪಸಂಖ್ಯಾತ ಹಿಂದೂಗಳಂತೆಯೇ ಇದೆ.