ಶ್ರೀರಾಮಚರಿತಮಾನಸ ನಿಷೇಧಿಸುಂತೆ ಒತ್ತಾಯಿಸಿದ್ದ ಪಕ್ಷದ ಮುಖಂಡ ಸ್ವಾಮಿ ಪ್ರಸಾದ ಮೌರ್ಯ ಇವರಿಂದ ಬೆಂಬಲ !
ಲಕ್ಷ್ಮಣಪುರಿ (ಉತ್ತರಪ್ರದೇಶ) – ಇಲ್ಲಿ ‘ಶ್ರೀರಾಮಚರಿತಮಾನಸ’ದ ಕೆಲವು ಪ್ರತಿಗಳು ಸುಟ್ಟು ಹಾಕಿ ಸಮಾಜವಾದಿ ಪಕ್ಷದ ಓಬಿಸಿ ಮಹಾಸಭೇಯ ಮುಖಂಡ ಸ್ವಾಮಿ ಪ್ರಸಾದ ಮೌರ್ಯ ಇವರನ್ನು ಬೆಂಬಲಿಸಿದರು. ಮೌರ್ಯ ಇವರು ಈ ಹಿಂದೆ ‘ಶ್ರೀರಾಮಚರಿತಮಾನಸ’ವನ್ನು ನಿಷೇಧಿಸುವಂತೆ ಒತ್ತಾಯಿಸಿದ್ದರು. ಸಮಾಜವಾದಿ ಪಕ್ಷವು ಮೌರ್ಯ ಇವರನ್ನು ಪಕ್ಷದ ಕಾರ್ಯದರ್ಶಿ ಮಾಡಿದ್ದಾರೆ. ಒಬಿಸಿ ಮಹಾಸಂಘದ ಕಾರ್ಯಕರ್ತರು, ನಾವು ‘ಶ್ರೀರಾಮಚರಿತಮಾನಸ’ದಲ್ಲಿನ ಆಕ್ಷೇಪಾರ್ಹ ಭಾಗದ ಪ್ರತಿಗಳನ್ನು ಸುಟ್ಟಿದ್ದೇವೆ. ಅದರಲ್ಲಿ ನಾರಿ, ಶೂದ್ರ, ದಲಿತ ಮತ್ತು ಒಬಿಸಿ ಸಮಾಜ ಇವರ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ಇದೆ. ಅದನ್ನು ‘ಶ್ರೀರಾಮಚರಿತಮಾನಸ’ದಿಂದ ತೆಗೆದು ಹಾಕುವುದು ಅವಶ್ಯಕವಾಗಿದೆ. ಯಾವಾಗ ಅದನ್ನು ತೆಗೆಯುವರು ಆಗ ನಮ್ಮ ವಿರೋಧ ಕಡಿಮೆ ಆಗುವುದು, ಇಲ್ಲವಾದರೆ ಅಲ್ಲಲ್ಲಿ ವಿರೋಧ ಮುಂದುವರೆಯಲಿದೆ ಎಂದು ಹೇಳಿದರು.
#WATCH: Copies of #Ramcharitmanas torn apart and burnt in UP in support of SP leader #SwamiPrasadMaurya #SamajwadiParty https://t.co/mEljNvI8Iz
— Zee News English (@ZeeNewsEnglish) January 30, 2023
ವಿನಾಶಕಾಲೇ ವಿಪರೀತ ಬುದ್ಧಿ ! – ಉಪಮುಖ್ಯಮಂತ್ರಿ ಕೇಶವ ಪ್ರಸಾದ ಮೌರ್ಯ
ಶ್ರೀರಾಮಚರಿತ ಮಾನಸ ಪ್ರತಿ ಸುಟ್ಟಿರುವ ಘಟನೆಯ ಬಗ್ಗೆ ಉತ್ತರ ಪ್ರದೇಶದ ಉಪಮುಖ್ಯಮಂತ್ರಿ ಕೇಶವ ಪ್ರಸಾದ ಮೌರ್ಯ ಇವರು, ಹುಚ್ಚರಂತೆ ಆಡುವ ಸಮಾಜವಾದಿ ಪಕ್ಷವು ಹಿಂದೂ ವಿರೋಧಿ ಚರಿತ್ರೆ ಬಹಿರಂಗಪಡಿಸಿದೆ. ಶ್ರೀರಾಮಚರಿತಮಾನಸದ ಅವಮಾನ ಮಾಡಿರುವವರಿಗೆ ಪಕ್ಷದ ಅಧ್ಯಕ್ಷ ಅಖಿಲೇಶ ಯಾದವ ಇವರು ಕಾರ್ಯದರ್ಶಿ ಸ್ಥಾನ ನೀಡಿ ಪಕ್ಷದ ಶವ ಪೆಟ್ಟಿಗೆಗೆ ಕೊನೆಯ ಮೊಳೆ ಹೊಡೆದಿದ್ದಾರೆ. ಇದನ್ನು ವಿನಾಶಕಾಲೇ ವಿಪರೀತ ಬುದ್ಧಿ !(ವಿನಾಶಕಾಲ ಸಮೀಪ ಬಂದಾಗ ಬುದ್ಧಿ ಭ್ರಷ್ಟವಾಗುತ್ತದೆ) ಹೇಗೆ ಹೇಳಬೇಕಾಗುವುದು ಎಂದು ಟ್ವೀಟ್ ಮಾಡಿದ್ದಾರೆ.
* ಈ ರೀತಿ ಪ್ರತಿಗಳನ್ನು ಸುಟ್ಟು ಹಾಕುವುದರಿಂದ ವಿಚಾರ ಎಂದು ನಾಶವಾಗುವುದಿಲ್ಲ. ವಿಚಾರಗಳಿಗೆ ಯೋಗ್ಯ ರೀತಿಯಲ್ಲಿ ಪ್ರತಿಪಾದಿಸಿದರೆ ಮಾತ್ರ ಆ ವಿಚಾರ ತೆಗೆದು ಹಾಕಬಹುದು. ‘ಶ್ರೀರಾಮಚರಿತಮಾನಸ’ ಗ್ರಂಥದಲ್ಲಿ ಬಹಳಷ್ಟು ಚೈತನ್ಯ ಇರುವುದರಿಂದ ೫೦೦ ವರ್ಷಗಳ ನಂತರ ಕೂಡ ಶ್ರೀರಾಮಚರಿತ ಮಾನಸವನ್ನು ಕೋಟ್ಯಾಂತರ ಜನರಿಗೆ ಶ್ರದ್ಧೆಯಿದೆ ಮತ್ತು ಅವರು ಭಕ್ತಿ ಮಾಡುತ್ತಾರೆ ! * ಹಿಂದುಗಳ ಧಾರ್ಮಿಕ ಭಾವನೆಗೆ ಧಕ್ಕೆ ತಂದಿರುವ ಪ್ರಕರಣದಲ್ಲಿ ಕೇಂದ್ರ ಸರಕಾರ ಗಮನ ಹರಿಸಿ, ಇಂತಹ ಕೃತ್ಯ ಮಾಡಿದವರ ಮೇಲೆ ಕ್ರಮ ಕೈಗೊಳ್ಳುವುದು ಅವಶ್ಯಕ ! |