ಆಸ್ಟ್ರೇಲಿಯಾದಲ್ಲಿ ಖಲಿಸ್ತಾನಿಗಳಿಂದ ರಾಷ್ಟ್ರಧ್ವಜ ಹಿಡಿದಿದ್ದ ಭಾರತೀಯರ ಮೇಲೆ ದಾಳಿ

೬ ಭಾರತೀಯರಿಗೆ ಗಾಯ, ಇಬ್ಬರು ಖಲಿಸ್ತಾನಿಗಳ ಬಂಧನ

(ಸೌಜನ್ಯ Hindustan Times)

ಮೆಲ್‌ಬರ್ನ್ (ಆಸ್ಟ್ರೇಲಿಯಾ) – ಜನವರಿ ೨೯ ರಂದು ಭಾರತದ ರಾಷ್ಟ್ರಧ್ವಜವನ್ನು ಹಿಡಿದು ‘ಭಾರತ ಮಾತಾಕೀ ಜೈ’, ‘ಖಲಿಸ್ತಾನ್ ಮುರ್ದಾಬಾದ್’ ಎಂದು ಘೋಷಣೆ ಕೂಗುತ್ತಿದ್ದ ಭಾರತೀಯ ನಾಗರಿಕರ ಮೇಲೆ ಖಲಿಸ್ತಾನಿಗಳು ದಾಳಿ ಮಾಡಿದರು. ಈ ಘಟನೆ ಸಂಜೆ ನಡೆದಿದೆ. ಈ ದಾಳಿಯಲ್ಲಿ ೬ ಜನ ಭಾರತೀಯರು ಗಾಯಗೊಂಡರು ಹಾಗೂ ಇಬ್ಬರು ದಾಳಿಕೋರ ಖಲಿಸ್ತಾನಿಗಳನ್ನು ಬಂಧಿಸಲಾಗಿದೆ. ಭಾರತದಲ್ಲಿನ ಭಾಜಪದ ನಾಯಕ ಮನಜಿಂದರ್‌ಸಿಂಹ ಸಿರಸಾ ಇವರು ಈ ದಾಳಿಯನ್ನು ಖಂಡಿಸಿದ್ದಾರೆ. ಕೆನಡಾದ ನಂತರ ಆಸ್ಟ್ರೇಲಿಯಾದಲ್ಲಿಯೂ ಕಳೆದ ೫ ವರ್ಷಗಳಲ್ಲಿ ಖಲಿಸ್ತಾನಿಗಳ ಪ್ರಭಾವ ಹೆಚ್ಚಾಗಿದೆ. ಕಳೆದ ತಿಂಗಳಲ್ಲಿ ಆಸ್ಟ್ರೇಲಿಯಾದಲ್ಲಿ ಹಿಂದೂಗಳ ೩ ದೇವಸ್ಥಾನಗಳ ಮೇಲೆ ಖಲಿಸ್ತಾನಿಗಳು ದಾಳಿ ಮಾಡಿದ್ದರು.

(ಸೌಜನ್ಯ : India Today)

೧. ಭಾರತದಲ್ಲಿ ನಿಷೇಧಿತ ಸಂಘಟನೆ ‘ಸಿಕ್ಖ್ ಫಾರ್ ಜಸ್ಟೀಸ್’ (‘ಎಸ್.ಎಫ್.ಜೆ.’ಯು) ಮೆಲ್‌ಬರ್ನ್‌ನ ಫೆಡರೇಶನ್ ವೃತ್ತದಲ್ಲಿ ತಥಾ ಕಥಿತ ಜನಾಭಿಪ್ರಾಯ ಪರಿಶೀಲನೆಯ ಆಯೋಜನೆ ಮಾಡಿತ್ತು. ಅಲ್ಲಿ ದೊಡ್ಡ ಸಂಖ್ಯೆಯಲ್ಲಿ ಖಲಿಸ್ತಾನಿಗಳು ಧ್ವಜ ಹಿಡಿದುಕೊಂಡು ಘೋಷಣೆ ನೀಡುತ್ತಿದ್ದರು.

೨. ಈ ಸಮಯದಲ್ಲಿ ೨೫ ರಿಂದ ೩೦ ಯುವಕರ ಗುಂಪೊಂದು ಭಾರತದ ರಾಷ್ಟ್ರಧ್ವಜವನ್ನು ಹಿಡಿದುಕೊಂಡು ‘ಭಾರತಮಾತಾ ಕೀ ಜೈ’ ಹಾಗೂ ‘ಖಲಿಸ್ತಾನಿ ಮುರ್ದಾಬಾದ್’ ಎಂದು ಘೋಷಣೆ ನೀಡುತ್ತಾ ಫೆಡರೇಶನ್ ವೃತ್ತದ ಕಡೆಗೆ ಬರುತ್ತಿದ್ದರು. ಇದನ್ನು ನೋಡಿ ಖಲಿಸ್ತಾನಿಗಳು ಅವರ ಮೇಲೆ ದೊಣ್ಣಯಿಂದ ದಾಳಿ ಮಾಡಿ ಭಾರತದ ವಿರುದ್ಧ ಘೋಷಣೆಯನ್ನೂ ಕೂಗುತ್ತಿದ್ದರು.

ಸಂಪಾದಕರ ನಿಲುವು

ದೇಶವಿದೇಶಗಳಲ್ಲಿ ಹೆಚ್ಚುತ್ತಿರುವ ಖಲಿಸ್ತಾನಿಗಳ ಚಟುವಟಿಕೆಗಳಿಗೆ ಕಡಿವಾಣಾ ಹಾಕಲು ಭಾರತ ಸರಕಾರ ಈಗಲೇ ಕಠಿಣ ಹೆಜ್ಜೆಯಿಡುವ ಅವಶ್ಯಕತೆಯಿದೆ. ಹಿಂದಿನ ಇತಿಹಾಸದಿಂದ ಪಾಠ ಕಲಿತು ದೊಡ್ಡ ಹಾನಿಯಾಗುವ ಮೊದಲೇ ಶೀಘ್ರ ಕೃತಿ ಮಾಡುವ ಅವಶ್ಯಕತೆಯಿದೆ !