ಜೈಶಂಕರ ಇವರು ತಮ್ಮ ಪುಸ್ತಕ ಬಿಡುಗಡೆ ಕಾರ್ಯಕ್ರಮದ ಸಮಯದಲ್ಲಿನ ಹೇಳಿಕೆ
ಪುಣೆ – ಭಗವಾನ್ ಶ್ರೀ ಕೃಷ್ಣ ಮತ್ತು ಹನುಮಂತ ಇವರು ಜಗತ್ತಿನ ಎಲ್ಲಕ್ಕಿಂತ ಮಹಾನ ಮುತ್ಸದ್ದಿ (ರಾಜತಾಂತ್ರಿಕರು) ಆಗಿದ್ದರು. ಧೋರಣೆಯಲ್ಲಿನ ಸಂಯಮದ ಉದಾಹರಣೆ ಎಂದರೆ ಶ್ರೀ ಕೃಷ್ಣ ! ಶ್ರೀ ಹನುಮಂತ ಅಂತು ಮುತ್ಸದ್ದಿತನ ಮಿರಿದವರಾಗಿದ್ದನು. ಅವನು ಲಂಕೆಗೆ ಹೋಗಿ ಅಲ್ಲಿ ಅವನು ಸೀತೆಯನ್ನು ಭೇಟಿ ಮಾಡಿದನು, ಲಂಕೆಗೆ ಬೆಂಕಿ ಕೂಡ ಹಚ್ಚಿದನು, ಭಾರತದ ವಿದೇಶಾಂಗ ಸಚಿವ ಎಸ್ ಜೈಶಂಕರ ಇವರು ಅಭಿಪ್ರಾಯ ವ್ಯಕ್ತಪಡಿಸಿದರು. ಜೈಶಂಕರ ಇವರು ಬರೆದಿರುವ ‘ದಿ ಇಂಡಿಯಾ ವೇ : ಸ್ಟ್ರ್ಯಾಟಜಿ ಫಾರ್ ಅಂನ್ ಸರ್ಟನ್ ವರ್ಲ್ಡ್’ ಈ ಮರಾಠಿ ಭಾಷೆಯಲ್ಲಿನ ಪುಸ್ತಕದ ಪ್ರಕಾಶನವು ಜನವರಿ ೨೮ ರಂದು ನಡೆಯಿತು. ‘ಭಾರತ ಮಾರ್ಗ’ವು ಮರಾಠಿಯಲ್ಲಿ ಭಾಷಾಂತರ ಮಾಡಿದೆ. ಆ ಸಮಯದಲ್ಲಿ ಆಯೋಜಿಸಿರುವ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು.
Lord #Krishna, #Hanuman were the ‘Greatest’ diplomats of World: EAM #SJaishankar @DrSJaishankar https://t.co/9yD8bPubt3
— Zee News English (@ZeeNewsEnglish) January 29, 2023
ಜೈಶಂಕರ ಇವರು ಮುತ್ಸದ್ದಿತನದ ವ್ಯಾಖ್ಯೆ ಮಾಡುವಾಗ ಮಹಾಭಾರತ ಮತ್ತು ರಾಮಾಯಣದ ಮಹತ್ವ ಹೇಳಿದರು.
ಜೈಶಂಕರ ಮಾತು ಮುಂದುವರೆಸಿ, ‘ಶ್ರೀ ಕೃಷ್ಣನು ನಮಗೆ ಧೈರ್ಯವಾಗಿ ಹೇಗೆ ಇರುವುದು, ಅದನ್ನು ಕಲಿಸಿದ. ಶ್ರೀ ಕೃಷ್ಣನು ಶಿಶುಪಾಲನ ೧೦೦ ಅಪರಾಧಗಳನ್ನು ಕ್ಷಮಿಸಿದನು; ಆದರೆ ಅದರ ನಂತರ ಅವನ ವಧೆ ಮಾಡಿದನು. ಕೌರವ ಮತ್ತು ಪಾಂಡವರಲ್ಲಿ ಮಹಾಭಾರತದ ಯುದ್ಧ ನಡೆದಿತ್ತು. ಇತಿಹಾಸ ಮತ್ತು ಧಾರ್ಮಿಕ ಗ್ರಂಥ ಇದರಿಂದ ನಮಗೆ ಹೊಸ ದೃಷ್ಟಿಕೋನ ಸಿಗುತ್ತದೆ ಎಂದು ಜನರು ಹೇಳುತ್ತಾರೆ. ಮುತ್ಸದ್ದಿತನದ ದೃಷ್ಟಿಕೋನದಿಂದ ನಾವು ಶ್ರೀ ಕೃಷ್ಣನನ್ನು ಮತ್ತು ಹನುಮಂತನನ್ನು ನೋಡಿದರೆ ಅವರ ಮಹಾನತೆಯ ಪ್ರಚಿತಿ ಸಿಗುತ್ತದೆ. ‘ಹನುಮಂತನಿಗೆ ಯಾವ ಕಾರ್ಯ ನೀಡಿದ್ದರು ?’, ‘ಆ ಕಾರ್ಯ ಹನುಮಂತನು ಹೇಗೆ ಪೂರ್ಣಗೊಳಿಸಿದನು ?’, ಸ್ವಂತದ ಬುದ್ಧಿಯ ಪರಿಚಯ ನೀಡುವಾಗ ಎಷ್ಟು ಮುಂದುವರೆದ ಎಂದರೆ ಅವನು ತನ್ನ ಕಾರ್ಯಾಪೂರ್ಣ ಮಾಡಿಯೇ ತೀರಿದನು ಮತ್ತು ಅದಲ್ಲದೆ ಅವನು ಲಂಕೆಯನ್ನು ಸುಟ್ಟು ಭಸ್ಮ ಮಾಡಿದನು ಎಂದು ಹೇಳಿದರು.