ಇಂದು ಭಾರತ ಜೋಡೋ ಯಾತ್ರೆ ಮುಕ್ತಾಯ !

ರಾಹುಲ ಗಾಂಧಿ ಶ್ರೀನಗರದ ಲಾಲ ಚೌಕದಲ್ಲಿ ತ್ರಿವರ್ಣ ಧ್ವಜ ಹಾರಿಸಿದರು

ಶ್ರೀನಗರ (ಜಮ್ಮು ಕಾಶ್ಮೀರ) – ಇಲ್ಲಿಯ ಲಾಲ ಚೌಕದಲ್ಲಿ ಕಾಂಗ್ರೆಸ್ಸಿನ ಮುಖಂಡ ರಾಹುಲ ಗಾಂಧಿ ಇವರು ತ್ರಿವರ್ಣಧ್ವಜ ಹಾರಿಸಿದರು. ಜನವರಿ ೩೦ ರಂದು ರಾಹುಲ್ ಗಾಂಧಿ ಶ್ರೀನಗರದ ಎಂ.ಎ. ಮಾರ್ಗದಲ್ಲಿರುವ ಕಾಂಗ್ರೆಸ್ ಮುಖ್ಯ ಕಾರ್ಯಾಲಯದಲ್ಲಿ ತ್ರಿವರ್ಣ ಧ್ವಜ ಹಾರಿಸುವರು ಮತ್ತು ಈ ಯಾತ್ರೆ ಮುಕ್ತಾಯಗೊಳಿಸುವರು. ಅದರ ನಂತರ ಇಲ್ಲಿಯ ಎಸ್.ಕೆ. ಸ್ಟೇಡಿಂನಲ್ಲಿ ಜಾಹಿರು ಸಭೆ ನಡೆಸುವರು ಮತ್ತು ಅದಕ್ಕಾಗಿ ವಿರೋಧಿ ಪಕ್ಷದ ೨೩ ಮುಖಂಡರಿಗೆ ಆಮಂತ್ರಣ ನೀಡಿದ್ದಾರೆ.