‘ಲವ್ ಜಿಹಾದ’ನಲ್ಲಿ ಮುಸಲ್ಮಾನ ಪುರುಷರ ಸಹಭಾಗ ! – ಸಮೀಕ್ಷೆಯ ವರದಿ

‘ಇಂಡಿಯಾ ಟುಡೆ’ ಮತ್ತು ‘ಸೀ ವೋಟರ್’ನ ಸಮೀಕ್ಷೆ

ದೇಶದ ಶೇ. 53 ರಷ್ಟು ಜನರ ಅಭಿಪ್ರಾಯ

ನವದೆಹಲಿ – ದೇಶದ ‘ಲವ್ ಜಿಹಾದ’ ಸಂದರ್ಭದಲ್ಲಿ ಒಂದು ವರದಿ ಬೆಳಕಿಗೆ ಬಂದಿದೆ. ಅದಕ್ಕನುಸಾರ ಶೇ. 53 ರಷ್ಟು ಜನರು ಮುಸಲ್ಮಾನ ಪುರುಷರು ‘ಲವ್ ಜಿಹಾದ‘ನಲ್ಲಿ ಭಾಗಿಗಳಾಗಿದ್ದಾರೆ ಎಂದು ತಿಳಿಸಿದ್ದಾರೆ. ಈ ಸಂದರ್ಭದಲ್ಲಿ ನಡೆದ ಸಮೀಕ್ಷೆಯಲ್ಲಿ 1 ಲಕ್ಷ 40 ಸಾವಿರ ಜನರ ಅಭಿಪ್ರಾಯವನ್ನು ಪಡೆಯಲಾಗಿದೆ. ‘ಇಂಡಿಯಾ ಟುಡೆ’ ಮತ್ತು `ಸೀ ವೋಟರ’ ಇವರು ‘ಮೂಡ್ ಆಫ್ ದಿ ನೇಶನ್’ ಅಡಿಯಲ್ಲಿ ಈ ಸಮೀಕ್ಷೆ ನಡೆಸಿದ್ದರು. ಇದರಲ್ಲಿ ಇಂಡಿಯಾ ಟುಡೆ 1ಲಕ್ಷ 40 ಸಾವಿರ 917 ಜನರಿಗೆ ಪ್ರಶ್ನೆ ಕೇಳಿದರೆ, ಸೀ ವೋಟರ 1 ಲಕ್ಷ 5 ಸಾವಿರ ಜನರ ಸಂದರ್ಶನದ ವಿಶ್ಲೇಷಣೆ ನಡೆಸಿದೆ. ತದನಂತರ ಅವರು ನಿಷ್ಕರ್ಷವನ್ನು ತೆಗೆದರು.

ಸಂಪಾದಕರ ನಿಲುವು

ಇಂಡಿಯಾ ಟುಡೆದಂತಹ ಪ್ರಸಾರ ಮಾಧ್ಯಮ ನಡೆಸಿದ ಸಮೀಕ್ಷೆಯ ಬಗ್ಗೆ ಈಗ ತಥಾಕಥಿತ ಜಾತ್ಯತೀತವಾದಿ, ಪುರೋ(ಅಧೋ)ಪರರ ಬಾಯಿ ತೆರೆದು, ‘ಲವ್ ಜಿಹಾದ್’ ಅಸ್ತಿತ್ವದಲ್ಲಿ ಇದೆಯೆಂದು ಒಪ್ಪಿಕೊಳ್ಳುವರು ಎಂದು ಅಪೇಕ್ಷೆ !