ಎರಡು ಪ್ರತ್ಯೇಕ ಘಟನೆಗಳಲ್ಲಿ ವಾಯು ಸೇನೆಯ 3 ವಿಮಾನಗಳ ಅಪಘಾತ

ಇಬ್ಬರು ವೈಮಾನಿಕರು ಗಾಯಾಳು, ಇಬ್ಬರು ವೈಮಾನಿಕರು ನಾಪತ್ತೆ !

ಮುರೈನಾ (ಮಧ್ಯಪ್ರದೇಶ) – 2 ಪ್ರತ್ಯೇಕ ಘಟನೆಯಲ್ಲಿ ಭಾರತೀಯ ವಾಯುದಳದ 3 ವಿಮಾನಗಳ ಅಪಘಾತವಾಯಿತು. ಮುರೈನಾದಲ್ಲಿ ಯುದ್ಧವಿಮಾನ ಸುಖೋಯಿ – 30 ಮತ್ತು ಮಿರಾಜ 2000 ನಡುವೆ ಡಿಕ್ಕಿಯಾಗಿ ಎರಡೂ ವಿಮಾನಗಳು ಪತನಗೊಂಡವು. ಈ ಎರಡೂ ವಿಮಾನಗಳು ಗ್ವಾಲಿಯರನ ವಾಯುದಳದ ನೆಲೆಯಿಂದ ತರಬೇತಿ ಹಾರಾಟ ನಡೆಸಿದ್ದವು. ಈ ವಿಮಾನದಲ್ಲಿದ್ದ ಮೂವರು ವೈಮಾನಿಕರಲ್ಲಿ 2 ವೈಮಾನಿಕರು ಗಾಯಗೊಂಡಿದ್ದಾರೆ, ಅವರನ್ನು ಆಸ್ಪತ್ರೆಗೆ ಧಾಖಲಿಸಲಾಗಿದೆ. ಮೂರನೇ ವೈಮಾನಿಕನ ಮಾಹಿತಿ ಇದುವರೆಗೂ ಸಿಕ್ಕಿಲ್ಲ. ಇನ್ನೊಂದು ಘಟನೆಯಲ್ಲಿ ರಾಜಸ್ಥಾನದ ಭರತಪುರ ಜಿಲ್ಲೆಯ ಉಚೈನ ಪಿಂಗೋರಾದಲ್ಲಿ ಸೈನ್ಯದ ವಿಮಾನ ಪತನಗೊಂಡಿದೆ. ಈ ಎಲ್ಲ ವಿಮಾನಗಳು ಪತನಗೊಂಡ ಬಳಿಕ ಬೆಂಕಿ ಹೊತ್ತಿಕೊಂಡಿದೆ. ಆಡಳಿತಕ್ಕೆ ಈ ಮಾಹಿತಿ ಸಿಗುತ್ತಲೇ ಸಹಾಯ ಕಾರ್ಯವನ್ನು ಕೈಗೆತ್ತಿಕೊಳ್ಳಲಾಗಿದೆ. ಭರತಪುರದಲ್ಲಿ ಪತನಗೊಂಡಿರುವ ವಿಮಾನ ಮತ್ತು ವೈಮಾನಿಕನ ಮಾಹಿತಿ ಇದುವರೆಗೂ ದೊರಕಿಲ್ಲ.