ದೇಶಾದ್ಯಂತ ಗಣರಾಜ್ಯೋತ್ಸವದ ಉತ್ಸಾಹದಲ್ಲಿ ಆಚರಣೆ

ನವದೆಹಲಿ – ಭಾರತದ ೭೪ ನೇ ಗಣರಾಜ್ಯೋತ್ಸವ ಪ್ರತಿ ವರ್ಷದಂತೆ ದೇಶಾದ್ಯಂತ ಸಂಭ್ರಮದಲ್ಲಿ ಆಚರಿಸಿದೆ. ರಾಜಧಾನಿ ದೆಹಲಿಯಲ್ಲಿನ ಕರ್ತವ್ಯ ಪಥ (ಮೊದಲಿನ ಹೆಸರು ರಾಜಪಥ) ಇಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮೂ ಇವರು ರಾಷ್ಟ್ರಧ್ವಜ ಹಾರಿಸಿದರು. ಅದರ ನಂತರ ಮೂರು ಸೈನ್ಯದಳ, ಅರೆ ಸೇನಾ ಪಡೆ, ಪೊಲೀಸ ಪಡೆ ಮುಂತಾದವರು ಸಂಚಲನ ಮಾಡಿದರು. ಹಾಗೂ ವಿವಿಧ ರಾಜ್ಯಗಳ ಚಿತ್ರರಥಗಳ ಪ್ರದರ್ಶನ ನಡೆಯಿತು. ಈ ಕಾರ್ಯಕ್ರಮದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಇವರ ಜೊತೆಗೆ ಕೇಂದ್ರ ಸಚಿವರು, ವಿವಿಧ ದೇಶಗಳ ರಾಜಧೂತರು, ಹಾಗೂ ಮುಖ್ಯ ಅತಿಥಿಯಾಗಿ ಈಜಿಪ್ಟ್ ನ ರಾಷ್ಟ್ರಪತಿ ಅಬ್ದುಲ್ ಫತೆಹ ಅಲ್ ಸಿಸಿ ಇವರು ಉಪಸ್ಥಿತರಿದ್ದರು.