ನಾಗಪುರ- ‘ಜಿ-20’ಯ ಉಪಕ್ರಮ ಇರುವ ‘ಸಿ-20’ ಅಧ್ಯಕ್ಷ ಸ್ಥಾನಕ್ಕೆ ಭಾರತ ಸರಕಾರವು ಮಾತಾ ಅಮೃತಾನಂದಮಯಿ ಅವರನ್ನು ನೇಮಕ ಮಾಡಿದ್ದಾರೆ. ನಾಗಪುರದಲ್ಲಿ ಮಾರ್ಚ 22 ಮತ್ತು 23 ರಂದು ಆಯೋಜಿಸಿರುವ ‘ಜಿ-20’ ಪರಿಷತ್ತಿನಲ್ಲಿ 29 ದೇಶಗಳ ಪ್ರತಿನಿಧಿಗಳು ಭಾಗವಹಿಸಲಿದ್ದಾರೆ.
ವಿಭಾಗೀಯ ಆಯುಕ್ತೆ ವಿಜಯಲಕ್ಷ್ಮಿ ಬಿದರಿ ಇವರು, ಈ ವರ್ಷ ಅಂತರರಾಷ್ಟ್ರೀಯ ಧಾನ್ಯಗಳ ವರ್ಷ ಆಗಿರುವುದರಿಂದ ಅತಿಥಿಗಳಿಗೆ ಜೋಳ ಮತ್ತು ಸಜ್ಜೆ ಅಲ್ಲದೆ ರಾಗಿ ರೊಟ್ಟಿ ಸಹಿತ ವಿವಿಧ ಪದಾರ್ಥಗಳ ಔತಣ ಇರಲಿದೆ. ಪರಿಷತ್ತಿನ ವಿಷಯ ‘ಸಮಾಜದ ಹಿತಕ್ಕಾಗಿ ಹೋರಾಡುವ ನಾಗರಿಕರ ಸಮಾಜದ ಪಾತ್ರ’ ಆಗಿದೆ. ಪರಿಷತ್ತಿನ ದೃಷ್ಟಿಯಿಂದ ನಗರದ ರಸ್ತೆಗಳ ಗುಂಡಿಗಳನ್ನು ಮುಚ್ಚಲಾಗಿದೆ. (ಗುಂಡಿಗಳಿಂದ ಮುಕ್ತಗೊಳಿಸುವ ಸೌಲಭ್ಯ ಇನ್ನಿತರೆ ಸಂದರ್ಭಗಳಲ್ಲಿ ಏಕೆ ಮಾಡಲಾಗುವುದಿಲ್ಲ – ಸಂಪಾದಕರು)