‘ರಾಮಾಚರಿತ ಮಾನಸ’ದ ಮೇಲೆ ನಿಷೇಧ ಹೇರಿ ! (ಅಂತೆ) – ಸಮಾಜವಾದಿ ಪಕ್ಷದ ನಾಯಕ ಸ್ವಾಮಿ ಪ್ರಸಾದ ಮೌರ್ಯ

ಸಮಾಜವಾದಿ ಪಕ್ಷದ ನಾಯಕ ಸ್ವಾಮಿ ಪ್ರಸಾದ ಮೌರ್ಯ ಇವರ ಹಿಂದೂ ದ್ವೇಷಿ ಬೇಡಿಕೆ !

(ಎಡದಲ್ಲಿ) ಸಮಾಜವಾದಿ ಪಕ್ಷದ ನಾಯಕ ಸ್ವಾಮಿ ಪ್ರಸಾದ ಮೌರ್ಯ

ಲಕ್ಷ್ಮಣಪುರಿ (ಉತ್ತರಪ್ರದೇಶ) – ರಾಮಾಚರಿತ ಮಾನಸದಲ್ಲಿ ಇರುವುದು ಕಸಗಳಿವೆ. ಇದೇ ಧರ್ಮವೇನು ? ರಾಮಾಚಾರಿತ ಮಾನಸದಲ್ಲಿ ಕೆಲವು ಭಾಗದ ಬಗ್ಗೆ ನನ್ನ ಆಕ್ಷೇಪ ಇದೆ. ಇದರಲ್ಲಿ ಸ್ವಾಮಿ ತುಳಸಿದಾಸರು ಶೂದ್ರರಿಗೆ ‘ಅಧಮ’ ಜಾತಿಯವರು ಎಂದಿದ್ದಾರೆ. ಧರ್ಮದ ಹೆಸರಿನಲ್ಲಿ ವಿಶೇಷ ಜಾತಿಯನ್ನು ಅವಮಾನಿಸಿದೆ. ಆದ್ದರಿಂದ ರಾಮಚರಿತಮಾನಸ ನಿಷೇಧಿಸಬೇಕೆಂದು, ಸಮಾಜವಾದಿ ಪಕ್ಷದ ಮುಖಂಡ ಸ್ವಾಮಿ ಪ್ರಸಾದ ಮೌರ್ಯ ಇವರು ಅತಿರೇಕದ ಬೇಡಿಕೆಯನ್ನು ಮಾಡಿದ್ದಾರೆ.

ಸ್ವಾಮಿ ಪ್ರಸಾದ ಮೌರ್ಯ ಮಾತು ಮುಂದುವರೆಸಿ, ಬ್ರಾಹ್ಮಣ ಎಷ್ಟೇ ಕಾಮುಕ, ದುರಾಚಾರಿ, ಆಶಿಕ್ಷಿತ ಮತ್ತು ಹಳ್ಳಿಗನಾಗಿದ್ದರೂ ಅವನನ್ನು ಪೂಜನಿಯ ಎನ್ನುತ್ತಾರೆ ಹಾಗೂ ‘ಶೂದ್ರ ಎಷ್ಟೇ ಜ್ಞಾನಿ, ವಿದ್ವಾನ, ತಿಳಿದವನು ಆಗಿದ್ದರೂ ಅವನಿಗೆ ಗೌರವ ನೀಡಬಾರದೆಂದು ಹೇಳಿದೆ.’ ಇದು ಏನು ಧರ್ಮವೇ ? ಹಾಗಾದರೆ ಇದೇ ಧರ್ಮ ಇದ್ದರೆ ನಾನು ಇದಕ್ಕೆ ನಮಸ್ಕಾರ ಮಾಡುತ್ತೇನೆ. (ಹೀಗೆ ಎಲ್ಲಾದರೂ ಘಟಿಸುತ್ತಿದೆಯೆ ? ‘ನಂಬುವಂತೆ ಸುಳ್ಳು ಹೇಳುವ ಮಾನಸಿಕತೆಯನ್ನು ಮೌರ್ಯ ಹೊಂದಿದ್ದಾರೆ ! – ಸಂಪಾದಕರು)

ನಮ್ಮ ನಾಶ ಇಚ್ಚಿಸುವ ಇಂತಹ ಧರ್ಮದ ನಾಶವಾಗಲಿ. (ಕಳೆದ ಅನೇಕ ದಶಕಗಳಿಂದ ಭಯೋತ್ಪಾದನೆ ನಡೆಸಿ ಲಕ್ಷಾಂತರ ಜನರನ್ನು ನಾಶಗೊಳಿಸಿದ್ದಾರೆ ಮತ್ತು ಗೊಳಿಸುತ್ತಿದ್ದಾರೆ ಅವರ ಧರ್ಮದ ಬಗ್ಗೆ ಮೌರ್ಯ ಹೇಗೆ ಎಂದು ಹೇಳುವುದಿಲ್ಲ ಇದನ್ನು ಗಮನದಲ್ಲಿಡಿ ! – ಸಂಪಾದಕರು) ಈ ರೀತಿಯ ಹೇಳಿಕೆ ಯಾರಾದರೂ ನೀಡಿದರೆ ಆಗ ಕೆಲವು ಮುಷ್ಟಿಯಷ್ಟು ಧರ್ಮದ ರಕ್ಷಕರು ಅವರ ಉದರ ನಿರ್ವಾಹ ಇದರ ಮೇಲೆ ನಡೆಯುತ್ತದೆ ಅವರು, ಹಿಂದುಗಳ ಧಾರ್ಮಿಕ ಭಾವನೆಗೆ ಧಕ್ಕೆ ತಂದಿದೆ. (‘ಸರ್ ತನ್ ಸೆ ಜುದಾ’ (ಶಿರಚ್ಛೇದ ಮಾಡುವುದು) ಯಾರು ಮತ್ತು ಯಾರಿಂದ ಹೇಳುತ್ತಾರೆ, ಇದು ಮೌರ್ಯ ಇವರು ಹೇಳುವರೇ ? -ಸಂಪಾದಕರು)

ಸಂಪಾದಕರು ನಿಲುವು

ಭಾರತದಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯ ಇರುವುದರಿಂದ ಯಾರು ಏನು ಬೇಕಾದರೂ ಹೇಳಬಹುದು. ಮೌರ್ಯ ಇವರು ಅದರದೇ ಒಂದು ಉದಾಹರಣೆಯಾಗಿದ್ದಾರೆ ! ಇಂತಹ ಹೇಳಿಕೆ ನೀಡುವುದರಿಂದ ಹಿಂದೂಳಿದವರ ಮತ ಸಿಗಬಹುದು ಮತ್ತು ಅಧಿಕಾರದ ರುಚಿ ಸವಿಯಬಹುದು, ಇಂತಹ ಸ್ವಾರ್ಥದ ಮಾನಸಿಕತೆ ಇರುತ್ತದೆ ! ಇಂತಹವತಿಗೆ ಧರ್ಮಾಭಿಮಾನಿ ಹಿಂದೂಗಳು ರಾಜಕೀಯದಲ್ಲಿ ಪಾಠ ಕಲಿಸಿ ಅವರ ಸ್ಥಾನ ಅವರಿಗೆ ತೋರಿಸಿಕೊಟ್ಟರು ಕೂಡ ಅವರು ಸಮಾಜದಲ್ಲಿ ದ್ವೇಷ ಹರಡಲು ಪ್ರಯತ್ನಿಸುತ್ತಾರೆ. ಆದ್ದರಿಂದ ಇಂತಹವರನ್ನು ಸೆರೆಮನೆಗಟ್ಟಬೇಕು !

ಈ ಗ್ರಂಥ ಸಂಪೂರ್ಣ ಜಗತ್ತಿನಾದ್ಯಂತ ಕಳೆದ ೫೦೦ ವರ್ಷದಿಂದ ಪೂಜನೀಯವಾಗಿದೆ ಮತ್ತು ಇದರಿಂದ ಎಂದಿಗೂ ಎಲ್ಲಿಯೂ ಯಾವುದೇ ಹಿಂಸಾಚಾರ ನಡಿಯದಿದ್ದರೂ, ಈ ರೀತಿಯ ಹೇಳಿಕೆ ನೀಡಿ ಜನಪ್ರಿಯತೆ ಗಳಿಸುವ ಪ್ರಯತ್ನವೆ ಇದಾಗಿದೆ !

ಜಗತ್ತಿನಲ್ಲಿ ಯಾವ ಪುಸ್ತಕಗಳಿಂದ ಹಿಂಸಾಚಾರ ನಡೆಯುತ್ತಿದೆ, ಅದನ್ನು ನಿಷೇಧಿಸುವಂತೆ ಆಗ್ರಹಿಸುವ ಮೌರ್ಯ ಇವರು ಧೈರ್ಯ ತೋರಿಸುವುದಿಲ್ಲ; ಕಾರಣ ಅದರ ಪರಿಣಾಮ ಅವರಿಗೆ ತಿಳಿದಿದೆ !