ಕಟಿಹಾರ (ಬಿಹಾರ)ನಲ್ಲಿ ‘ವಂದೇ ಭಾರತ’ ಎಕ್ಸಪ್ರೆಸ್ ಮೇಲೆ ಕಲ್ಲೆಸೆತ !

ಕಲ್ಲೆಸೆಯುತ್ತಿರುವ ನಾಲ್ಕನೇ ಘಟನೆ

ಕಟಿಹಾರ (ಬಿಹಾರ) – ಇಲ್ಲಿ ‘ವಂದೇ ಭಾರತ’ ಎಕ್ಸಪ್ರೆಸ್ ರೈಲುಗಾಡಿಯ ಮೇಲೆ ಕಲ್ಲು ಎಸೆಯಲಾಯಿತು. ಇದರಿಂದ ವಾಹನದ ಒಂದು ಡಬ್ಬಿಯ ಗಾಜು ಒಡೆಯಿತು. ಈ ಗಾಡಿ ನ್ಯೂ ಜಲಪಾಯಗುಡಿಯಿಂದ ಹೌರಾಗೆ ಹೋಗುತ್ತಿತ್ತು. ಈ ಘಟನೆಯಲ್ಲಿ ಯಾವುದೇ ಜೀವಹಾನಿಯಾಗಿಲ್ಲ; ಆದರೆ ಇದರಿಂದ ರೈಲುಪ್ರಯಾಣದ ಮೇಲೆ ಪರಿಣಾಮವಾಯಿತು. ಈ ಮಾರ್ಗದಲ್ಲಿ ಈ ಗಾಡಿ ಪ್ರಾರಂಭವಾಗಿ ಕೇವಲ 21 ದಿನಗಳು ಆಗಿವೆ; ಆದರೆ ಇಲ್ಲಿಯವರೆಗೆ 4 ಬಾರಿ ಕಲ್ಲೆಸೆಯಲಾಗಿದೆ.

ಸಂಪಾದಕೀಯ ನಿಲುವು

ಸರಕಾರಿ ಸಂಪತ್ತನ್ನು ಈ ರೀತಿ ಹಾನಿ ಮಾಡುವವರ ಎಲ್ಲ ಸಂಪತ್ತನ್ನು ಜಪ್ತಿ ಮಾಡಿಕೊಂಡು, ಅವರಿಗೆ ಜೀವಾವಧಿ ಶಿಕ್ಷೆಯಾಗಲು ಕಾನೂನಿನಲ್ಲಿ ನಿಯಮಾವಳಿಗಳನ್ನು ರೂಪಿಸುವ ಆವಶ್ಯಕತೆಯಿದೆ !