|
ಲಕ್ಷ್ಮಣಪುರಿ ( ಉತ್ತರಪ್ರದೇಶ) – ಮದರಸಾಗಳಲ್ಲಿ ಕಲಿಯುವ ಮುಸಲ್ಮಾನೆತರ ವಿದ್ಯಾರ್ಥಿಗಳ ಸಮೀಕ್ಷೆ ನಡೆಸಿ ಅವರಿಗೆ ಬೇರೆ ಶಾಲೆಗಳಲ್ಲಿ ಕಲಿಯಲು ಸಾಧ್ಯವಾಗಬೇಕೆಂದು ಆಗ್ರಹಿಸಿ ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣೆ ಆಯೋಗದಿಂದ (ಎನ್.ಸಿ.ಪಿ.ಸಿ.ಆರ್ ) ಉತ್ತರ ಪ್ರದೇಶ ಸರಕಾರಕ್ಕೆ ಪತ್ರ ಬರೆದಿತ್ತು. ಈ ಬೇಡಿಕೆ ಉತ್ತರಪ್ರದೇಶ ರಾಜ್ಯ ಮದರಸಾ ಶಿಕ್ಷಣ ಮಂಡಳಿ ತಿರಸ್ಕರಿಸಿದೆ. ಇದರ ನಂತರ ಆಯೋಗದಿಂದ ರಾಜ್ಯದ ಅಲ್ಪಸಂಖ್ಯಾತ ಕಲ್ಯಾಣ ಮತ್ತು ವಕ್ಫ್ ಇಲಾಖೆಯು ತನ್ನ ವಿಶೇಷ ಸಚಿವರಿಗೆ ನೋಟಿಸ್ ಜಾರಿ ಮಾಡಿ ಮದರಸಾಗಳ ಮೇಲೆ ಕ್ರಮ ಕೈಗೊಳ್ಳಲು ಒತ್ತಾಯಿಸಿದೆ. ಇದರಲ್ಲಿ ಆಯೋಗದ ಅಧ್ಯಕ್ಷ ಶ್ರೀ. ಪ್ರಿಯಾಂಕ ಕಾನೂನಗೋ ಇವರು, ಡಿಸೆಂಬರ್ ೮, ೨೦೨೨ ರಂದು ಕಳಿಹಿಸಿದ್ದ ಪತ್ರದ ಆಧಾರದಲ್ಲಿ ಅಲ್ಪಸಂಖ್ಯಾತ ಕಲ್ಯಾಣ ಮತ್ತು ವಕ್ಫ್ ಇಲಾಖೆಯಿಂದ ಯಾವುದೇ ಕ್ರಮ ಕೈಗೊಳ್ಳಲಾಗಿಲ್ಲ, ಎಂದು ಹೇಳಿದರು.
UP Madarsa Board refuses to identify non-Muslim students from Madarsas as directed by NCPCR, says ‘it may foster divide between communities’https://t.co/68ppQ4IpIg
— OpIndia.com (@OpIndia_com) January 19, 2023
೧. ‘ಉತ್ತರಪ್ರದೇಶ ರಾಜ್ಯ ಮದರಸಾ ಶಿಕ್ಷಣ ಬೋರ್ಡ’ನ ಅಧ್ಯಕ್ಷ ಡಾ. ಇಫ್ತಿಖಾರ ಅಹಮದ್ ಜಾವೇದ ಇವರು, ಆಯೋಗದ ಪತ್ರದ ಬಗ್ಗೆ ನಾವು ನಿರ್ಣಯ ತೆಗೆದುಕೊಂಡಿದ್ದೇವೆ, ಮದರಸದಲ್ಲಿ ಕಲಿಯುವ ಮುಸಲ್ಮಾನನೇತರ ವಿದ್ಯಾರ್ಥಿಗಳಿಗೆ ಇಲ್ಲಿಂದ ತೆಗೆದು ಬೇರೆ ಶಾಲೆಗಳಲ್ಲಿ ಪ್ರವೇಶ ನೀಡುವ ವ್ಯವಸ್ಥೆ ಮಾಡಲಾರೆವು. ಬೋರ್ಡ್ ನಿಂದ ಈ ರೀತಿ ಯಾವುದೇ ಕ್ರಮ ಕೈಗೊಳ್ಳುವುದಿಲ್ಲ.
೨. ಜಾವೆದ್ ಇವರ ಹೇಳಿಕೆಯ ಕುರಿತು ಆಯೋಗವು, ನಾವು ಅವರ ಹೇಳಿಕೆಗೆ ಸಹಮತವಿಲ್ಲ. ಮದರಸಾದಲ್ಲಿನ ಮುಸಲ್ಮಾನೆತರರಿಗೆ ಕಲಿಸುವುದು, ಇದು ಸಂವಿಧಾನದಲ್ಲಿ ನೀಡಿರುವ ಹಕ್ಕಿನ ಉಲ್ಲಂಘನೆಯಾಗಿದೆ ಅಷ್ಟೇ ಅಲ್ಲದೆ ಸರಕಾರದ ಆದೇಶದ ಅವಮಾನ ಕೂಡ ಆಗಿದೆ ಎಂದು ಹೇಳಿತು.
ಮುಸಲ್ಮಾನೆತರ ವಿದ್ಯಾರ್ಥಿಗಳಿಗೆ ಇಸ್ಲಾಮಿ ಶಿಕ್ಷಣ ನೀಡುವುದು ಇದು ಸಂವಿಧಾನದ ಕಲಂ ೨೮(೩) ರ ಉಲ್ಲಂಘನೆ !ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷ ಶ್ರೀ. ಪ್ರಿಯಾಂಕ ಕಾನೂನಗೋ ಇವರು, ಉತ್ತರ ಪ್ರದೇಶ ಮದರಸಾ ಬೋರ್ಡ್ ಮದರಸಾದಲ್ಲಿ ಮುಸಲ್ಮಾನೆತರ ವಿದ್ಯಾರ್ಥಿಗಳಿಗೆ ಪ್ರವೇಶ ನೀಡುವುದು ಮುಂದುವರಿಸುವುದರ ಬಗ್ಗೆ ನೀಡಿರುವ ಹೇಳಿಕೆ ಆಕ್ಷೇಪಾರ್ಯ ಮತ್ತು ಮೂರ್ಖತನವಾಗಿದೆ. ನಾವು ಈ ವಿಷಯದ ಬಗ್ಗೆ ಅಲ್ಪಸಂಖ್ಯಾತ ಇಲಾಖೆಯ ವಿಶೇಷ ಸಚಿವರಿಗೆ ಪತ್ರ ಕಳುಹಿಸಿದ್ದೇವೆ. ಮುಸಲ್ಮಾನೆತರ ವಿದ್ಯಾರ್ಥಿಗಳಿಗೆ ಇಸ್ಲಾಂನ ಶಿಕ್ಷಣ ನೀಡುವುದು ಇದು ಸಂವಿಧಾನದ ಕಲಂ ೨೮(೩)ರ ಉಲ್ಲಂಘನೆಯಾಗಿದೆ. ಇದರ ಹಿನ್ನೆಲೆಯಲ್ಲಿ ಅವರು 3 ದಿನಗಳಲ್ಲಿ ಉತ್ತರ ನೀಡಬೇಕೆಂದು ಹೇಳಿದೆ, ಎಂದು ಹೇಳಿದರು. |
ಸಂಪಾದಕೀಯ ನಿಲುವು
|