ದ್ರಮುಕ ಪಕ್ಷದ ಮುಖಂಡರ ವಿರುದ್ಧ ರಾಜ್ಯಪಾಲರಿಂದ ಮಾನನಷ್ಟ ಮೊಕದ್ದಮೆ ದಾಖಲು !

ರಾಜ್ಯಪಾಲರ ವಿಷಯದಲ್ಲಿ ಆಕ್ಷೇಪಾರ್ಹ ಹೇಳಿಕೆ ನೀಡಿದ ಪ್ರಕರಣ

ದ್ರಮುಕ ಮುಖಂಡ ಶಿವಾಜಿ ಕೃಷ್ಣಮೂರ್ತಿ ಮತ್ತು ರಾಜ್ಯಪಾಲ ಆರ್.ಎನ್. ರವಿ

ಚೆನ್ನೈ- ತಮಿಳುನಾಡಿನ ರಾಜ್ಯಪಾಲ ಆರ್.ಎನ್. ರವಿಯವರ ವಿರುದ್ಧ ಅಸಭ್ಯ ಹೇಳಿಕೆ ನೀಡಿರುವ ಪ್ರಕರಣದಲ್ಲಿ ರವಿಯವರು ದ್ರಮುಕ ಮುಖಂಡ ಶಿವಾಜಿ ಕೃಷ್ಣಮೂರ್ತಿಯವರ ವಿರುದ್ಧ ಚೆನ್ನೈ ನ್ಯಾಯಾಲಯದಲ್ಲಿ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದಾರೆ. ಈ ಹೇಳಿಕೆಯಿಂದ ಶಿವಾಜಿ ಕೃಷ್ಣಮೂರ್ತಿಯವರನ್ನು ದ್ರಮುಕ ಪಕ್ಷದ ಮುಖಂಡರು ಹಾಗೂ ರಾಜ್ಯದ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ ಪಕ್ಷದಿಂದ ಅಮಾನತ್ತುಗೊಳಿಸಿದ್ದಾರೆ. ಭಾಜಪ ಮುಖಂಡರೂ ಶಿವಾಜಿ ಕೃಷ್ಣಮೂರ್ತಿಯವರ ಮೇಲೆ ಕ್ರಮ ಕೈಕೊಳ್ಳುವಂತೆ ಕೋರಿದ್ದರು.

ಕೃಷ್ಣಮೂರ್ತಿಯವರು, “ತಮಿಳುನಾಡಿನ ರಾಜ್ಯಪಾಲ ಆರ್.ಎನ್. ರವಿಯವರು ಅವರ ವಿಧಾನಸಭೆಯ ಭಾಷಣದಲ್ಲಿ ಆಂಬೇಡಕರರ ಹೆಸರು ಹೇಳಲು ನಿರಾಕರಿಸಿದರೆ, ನನಗೆ ಅವರ ಮೇಲೆ ಆಕ್ರಮಣ ನಡೆಸಲು ಅಧಿಕಾರವಿಲ್ಲವೇ? ಸರಕಾರ ನೀಡಿರುವ ಭಾಷಣವನ್ನು ನೀವು ಓದದಿದ್ದರೆ, ಕಾಶ್ಮೀರಕ್ಕೆ ಹೋಗಿರಿ. ಅಲ್ಲಿ ನಾವು ಭಯೋತ್ಪಾದಕರನ್ನು ಕಳುಹಿಸುತ್ತೇವೆ. ಅವರು ನಿಮ್ಮನ್ನು ಕೊಲ್ಲುತ್ತಾರೆ’’. ಎಂದು ಹೇಳಿದ್ದರು.