ಭಾರತೀಯ ಸೈನ್ಯ ಭವಿಷ್ಯದ ಯುದ್ಧಕ್ಕಾಗಿ ಸಿದ್ಧ ! – ಸೇನಾ ಮುಖ್ಯಸ್ಥ ಮನೋಜ ಪಾಂಡೆ

ಸೇನಾ ಮುಖ್ಯಸ್ಥ ಮನೋಜ ಪಾಂಡೆ

ಬೆಂಗಳೂರು – ಚೀನಾದೊಂದಿಗಿರುವ ಪ್ರತ್ಯಕ್ಷ ಗಡಿರೇಖೆಯ ಮೇಲಿನ ಯಾವುದೇ ಕೃತ್ಯವನ್ನು ಎದುರಿಸಲು ನಾವು ಸಂಪೂರ್ಣವಾಗಿ ಸಿದ್ಧರಾಗಿದ್ದೇವೆ. ಕಳೆದ ವರ್ಷದಲ್ಲಿ ಸೈನ್ಯವು ಸುರಕ್ಷತೆಗೆ ಎದುರಾಗಿದ್ದ ಅಪಾಯವನ್ನು ಧೈರ್ಯವಾಗಿ ಎದುರಿಸಿದೆ. ಸೈನ್ಯವು ತನ್ನ ಕ್ಷಮತೆಯನ್ನು ಅಭಿವೃದ್ಧಿಗೊಳಿಸಲು ಹಾಗೆಯೇ ಸೈನ್ಯದ ಪುನರ್ ರಚನೆ ಮತ್ತು ಪ್ರಶಿಕ್ಷಣದ ದರ್ಜೆಯನ್ನು ಸುಧಾರಿಸಲು ಮಂದಡಿಯಿಟ್ಟಿದೆ. ಭವಿಷ್ಯದ ಯುದ್ಧಕ್ಕಾಗಿ ನಾವು ಸಿದ್ಧರಾಗಿದ್ದೇವೆ ಎಂದು ಭಾರತದ ಸೇನಾ ಮುಖ್ಯಸ್ಥ ಜನರಲ್ ಮನೋಜ ಪಾಂಡೆಯವರು ಇಲ್ಲಿ ಆಯೋಜಿಸಲಾಗಿದ್ದ 75ನೇ ಸೇನಾದಿನಾಚರಣೆಯ ಸಂದರ್ಭದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಪ್ರತಿಪಾದಿಸಿದರು. ಈ ಸಂದರ್ಭದಲ್ಲಿ ಸಂರಕ್ಷಣಾಮಂತ್ರಿ ರಾಜನಾಥ ಸಿಂಹ ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದರು.

೧. ಸೇನಾ ಮುಖ್ಯಸ್ಥ ಪಾಂಡೆಯವರು ಮಾತನಾಡುತ್ತಾ, ಉತ್ತರ ಗಡಿ ಭಾಗದ ಪರಿಸ್ಥಿತಿ ಸಾಮಾನ್ಯವಾಗಿದೆ. ವ್ಯವಸ್ಥೆಯ ಮೂಲಕ ಶಾಂತಿಯನ್ನು ಕಾಪಾಡಲು ಆವಶ್ಯಕವಿರುವ ಕ್ರಮಗಳನ್ನು ಕೈಕೊಳ್ಳಲಾಗಿದೆ. ಪ್ರತ್ಯಕ್ಷ ಗಡಿರೇಖೆಯಲ್ಲಿ ಗಟ್ಟಿಮುಟ್ಟಾದ ಸ್ಥಾನವನ್ನು ಕಾಯುವಾಗ ನಾವು ಯಾವುದೇ ಆಪತ್ಕಾಲೀನ ಪರಿಸ್ಥಿತಿಯನ್ನು ಎದುರಿಸಲು ಸಿದ್ಧರಾಗಿದ್ದೇವೆ. ಹಾಗೆಯೇ ಕಠಿಣ ಪ್ರದೇಶ ಮತ್ತು ಕೆಟ್ಟ ಹವಾಮಾನವಿದ್ದರೂ ನಮ್ಮ ಶೂರ ಸೈನಿಕರು ಅಲ್ಲಿ ಕಾಯುತ್ತಿದ್ದಾರೆ. ಅವರಿಗೆ ಎಲ್ಲ ರೀತಿಯ ಶಸ್ತ್ರಾಸ್ತ್ರ ಮತ್ತು ಉಪಕರಣಗಳನ್ನು ಸಾಕಾಗುವಷ್ಟು ಪ್ರಮಾಣದಲ್ಲಿ ಪೂರೈಸಲಾಗುತ್ತಿದೆ. ಸ್ಥಳೀಯ ಆಡಳಿತ, ಇತರೆ ವಿಭಾಗಗಳು ಮತ್ತು ಸೈನ್ಯಗಳ ಸಂಯುಕ್ತ ಪ್ರಯತ್ನದಿಂದ ಮೂಲಭೂತ ಸೌಕರ್ಯಗಳ ಅಭಿವೃದ್ಧಿಯಲ್ಲಿ ಸುಧಾರಣೆಯಾಗಿದೆ.

೨. ಪಾಕಿಸ್ತಾನಕ್ಕೆ ತಾಗಿರುವ ಗಡಿಯ ವಿಷಯದಲ್ಲಿ ಜನರಲ್ ಪಾಂಡೆಯವರು, ಈ ಗಡಿಯ ಭಾಗದಲ್ಲಿ ಯುದ್ಧ ವಿರಾಮವಿದೆ; ಆದರೆ ಗಡಿಯಾಚೆಗಿನ ಭಯೋತ್ಪಾದಕರ ನಿರ್ಮಾಣಕ್ಕಾಗಿ ಮಾಡಲಾಗಿರುವ ಮೂಲಭೂತ ಸೌಕರ್ಯಗಳು ಇಂದಿಗೂ ಇದೆ ಎಂದು ಹೇಳಿದರು.