ಮುಸಲ್ಮಾನನೊಂದಿಗೆ ವಿವಾಹವಾಗಿದ್ದರಿಂದ ರಾಖೀ ಸಾವಂತ ಇಸ್ಲಾಂ ಸ್ವೀಕರಿಸಬೇಕಾಯಿತು ! – ತಸ್ಲೀಮಾ ನಸರೀನ್

ನವದೆಹಲಿ- ನಟಿ ರಾಖೀ ಸಾವಂತಳು ಆದಿಲ್ ದುರ್ರಾನಿ ಎಂಬ ಮುಸಲ್ಮಾನನನ್ನು ವಿವಾಹವಾಗಿರುವುದಾಗಿ ಸ್ವತಃ ಬಹಿರಂಗಪಡಿಸಿದ ಬಗ್ಗೆ ಅನೇಕರು ಪ್ರತಿಕ್ರಿಯೆ ವ್ಯಕ್ತಪಡಿಸುತ್ತಿದ್ದಾರೆ. ಈ ವಿಷಯದಲ್ಲಿ ಪ್ರಸಿದ್ಧ ಬಾಂಗ್ಲಾದೇಶಿ ಲೇಖಕಿ ತಸ್ಲಿಮಾ ನಸರೀನರೂ ಟ್ವೀಟ್ ಮಾಡಿದ್ದಾರೆ. ಇದರಲ್ಲಿ ಅವರು ‘ರಾಖೀ ಸಾವಂತಗೂ ಇಸ್ಲಾಂ ಧರ್ಮವನ್ನು ಸ್ವೀಕರಿಸಬೇಕಾಯಿತು; ಏಕೆಂದರೆ ಅವಳು ಮುಸಲ್ಮಾನ ವ್ಯಕ್ತಿಯೊಂದಿಗೆ ನಿಕಾಹ ಮಾಡಿಕೊಂಡಿದ್ದಾಳೆ. ಇಸ್ಲಾಂ ಇತರ ಧರ್ಮಗಳಂತೆಯೇ ವಿಕಾಸ ಹೊಂದಬೇಕು. ಮುಸಲ್ಮಾನರು ಹಾಗೂ ಮುಸಲ್ಮಾನೇತರರೂ ವಿವಾಹವನ್ನು ಸ್ವೀಕರಿಸಬೇಕು, ಎಂದು ಹೇಳಿದರು.