ಇಸ್ರೋದ ಉಪಗ್ರಹದ ಸಯಾಹದಿಂದ ತೆಗೆದ ಚಿತ್ರದಿಂದ ಬಹಿರಂಗ !
ಜೋಶಿಮಠ (ಉತ್ತರಪ್ರದೇಶ) – ಜೋಶಿಮಠ ಗ್ರಾಮ ಕಳೆದ ೧೨ ದಿನಗಳಲ್ಲಿ ೫.೪ ಸೆಂಟಿಮೀಟರ್ ಕುಸದಿದೆ, ಎಂದು `ಇಸ್ರೋ’ದ ಉಪಗ್ರಹದ ಮೂಲಕ ತೆಗೆದ ಛಾಯಾಚಿತ್ರದಿಂದ ಬೆಳಕಿಗೆ ಬಂದಿದೆ.
ಇಡೀ ಜೋಶಿಮಠ ಮುಳುಗುವ ಎಚ್ಚರಿಕೆ ನೀಡಿದ ಇಸ್ರೋ – ಆತಂಕ ಮೂಡಿಸುತ್ತಿದೆ ಉಪಗ್ರಹ ಚಿತ್ರ https://t.co/MENbZj4BEN#SatelliteImages #Joshimath #ISRO
— PublicTV (@publictvnews) January 13, 2023
`ಇಸ್ರೋ’ದ ಸಂಸ್ಥೆ `ನ್ಯಾಷನಲ್ ರಿಮೋಟ್ ಸೆನ್ಸಿಂಗ್ ಸೆಂಟರ್’ ನಲ್ಲಿ, ಡಿಸೆಂಬರ ೨೭, ೨೦೨೨ ರಿಂದ ಜನವರಿ ೮, ೨೦೨೩ ಈ ಕಾಲಾವಧಿಯಲ್ಲಿ ಜೋಶಿಮಠ ೫.೪ ಸೆಂಟಿಮೀಟರ್ ಕುಸಿದಿದೆ. ಈ ಹಿಂದೆಯೂ ಕೂಡ ಏಪ್ರಿಲ್ ೨೦೨೨ ರಿಂದ ನವಂಬರ್ ೨೦೨೨ ರ ಕಾಲಾವಧಿಯಲ್ಲಿ ಜೋಶಿಮಠ ೯ ಸೆಂಟಿಮೀಟರ್ ಕುಸಿದಿತ್ತು. ಡಿಸೆಂಬರ್ ೨೦೨೨ ರ ಕೊನೆಯ ವಾರದಿಂದ ಜನವರಿ ಮೊದಲ ವಾರದಲ್ಲಿ ಜೋಶಿಮಠ ವೇಗವಾಗಿ ಕುಸಿಯಲಾರಂಭಿಸಿದೆ.