ಇಂದೂರ (ಮಧ್ಯಪ್ರದೇಶ)ನ ಸಿಂಧಿ ದೇವಸ್ಥಾನದ `ಶ್ರೀ ಗುರುಗ್ರಂಥ ಸಾಹಿಬ’ ಪ್ರತಿಗಳು ಗುರುದ್ವಾರದಲ್ಲಿ ಜಮೆ !

ನಿಹಂಗ ಸಿಖ್ಕರು ದೇವಸ್ಥಾನದಲ್ಲಿ ದೇವತೆಯ ಮೂರ್ತಿಗಳ ಜೊತೆಗೆ `ಶ್ರೀ ಗುರುಗ್ರಂಥ ಸಾಹಿಬ’ ಇಟ್ಟಿದ್ದರಿಂದ ಆಕ್ಷೇಪ !

(ನಿಹಂಗ ಸಿಖ್ಕರೆಂದರ ನೀಲಿ ಬಣ್ಣದ ಬಟ್ಟೆ ಮತ್ತು ದೊಡ್ಡ ಪಗಡಿ ಧರಿಸುವ ಮತ್ತು ಶಸ್ತ್ರಗಳನ್ನು ಹೊಂದಿರುವ ಸಿಖ್ಕರು)

ಇಂದೂರ (ಮಧ್ಯಪ್ರದೇಶ) – ಇಲ್ಲಿಯ ಸಿಂಧಿ ಸಮಾಜವು ಅವರ ದೇವಸ್ಥಾನದಲ್ಲಿ ಅನೇಕ ದಶಕಗಳಿಂದ ಇಡಲಾಗಿದ್ದ 80 ಕ್ಕೂ ಹೆಚ್ಚು `ಶ್ರೀ ಗುರುಗ್ರಂಥ ಸಾಹಿಬ’ ಗ್ರಂಥವನ್ನು ಇಮಲಿ ಸಾಹಿಬ ಗುರುದ್ವಾರದಲ್ಲಿ ಜಮೆ ಮಾಡಿದರು. ನಿಹಂಗ ಸಿಖ್ಕರ ಮತ್ತು ಸಿಂಧಿ ಸಮಾಜದವರ ನಡುವೆ ನಡೆದ ವಿವಾದದ ಬಳಿಕ ಸಿಂಧಿ ಸಮಾಜವು ಗ್ರಂಥವನ್ನು ಜಮೆ ಮಾಡುವ ನಿರ್ಧಾರವನ್ನು ತೆಗೆದುಕೊಂಡಿತ್ತು.

1. ನಿಹಂಗ ಸಿಖ್ಕರ ಒಂದು ಸಮೂಹವು ಯಾವ ಸಿಂಧಿ ದೇವಸ್ಥಾನದಲ್ಲಿ ಶ್ರೀ ಗುರುಗ್ರಂಥ ಸಾಹಿಬ ಇಡಲಾಗಿತ್ತೋ ಅಲ್ಲಿಯ ಎಲ್ಲ ಮೂರ್ತಿಗಳನ್ನು ತೆಗೆದುಹಾಕುವಂತೆ ಕೋರಿದ್ದರು. ಸಿಂಧಿ ಸಮಾಜವು ಇದನ್ನು ಒಪ್ಪಿಕೊಳ್ಳದೇ ದೇವಸ್ಥಾನದಲ್ಲಿರುವ `ಶ್ರೀ ಗುರುಗ್ರಂಥ ಸಾಹಿಬ’ ಗ್ರಂಥಗಳನ್ನು ಗುರುದ್ವಾರಕ್ಕೆ ಜಮೆ ಮಾಡುವ ನಿರ್ಧಾರವನ್ನು ತೆಗೆದುಕೊಂಡರು ಮತ್ತು ಅದರಂತೆ ಅದನ್ನು ಜಮೆ ಮಾಡಿದರು.

2. ಅಮೃತಸರದ ನಿಹಂಗ ಸಿಖ್ಕರ ಒಂದು ಸಮೂಹವು ಇಂದೂರಿನ ಅನ್ನಪೂರ್ಣಾ ಮಾರ್ಗದಲ್ಲಿರುವ ಸಿಂಧಿ ಸಮಾಜದ ದೇವಸ್ಥಾನಕ್ಕೆ ತೆರಳಿದರು. ಈ ದೇವಸ್ಥಾನದಲ್ಲಿ ಶ್ರೀ ಗುರುಗ್ರಂಥ ಸಾಹಿಬ ಇಡಲಾಗಿತ್ತು ಮತ್ತು ಅಲ್ಲಿ ಅದರ ಪೂಜೆಯನ್ನು ಮಾಡಲಾಗುತ್ತಿತ್ತು. ಈ ಸಮೂಹವು `ಎಲ್ಲಿ ದೇವತೆಗಳ ಮೂರ್ತಿಯ ಪೂಜೆ ಮಾಡಲಾಗುತ್ತಿದೆಯೋ, ಅಲ್ಲಿ ಶ್ರೀ ಗುರುಗ್ರಂಥ ಸಾಹಿಬ ಇಟ್ಟಿದ್ದರಿಂದ ಆಕ್ಷೇಪ ವ್ಯಕ್ತಪಡಿಸಿದರು, ಅವರು ಗ್ರಂಥದ ಅಪಮಾನವಾಗುತ್ತಿದೆಯೆಂದು ಹೇಳಿದರು. ಹಾಗೂ ಈ ಸಮೂಹವು ಪೊಲೀಸ ಠಾಣೆಯಲ್ಲಿಯೂ ಈ ಕುರಿತು ದೂರು ದಾಖಲಿಸಲು ಪ್ರಯತ್ನಿಸಿತು. ಎಲ್ಲಿ ಶ್ರೀ ಗುರುಗ್ರಂಥ ಸಾಹಿಬ ಪೂಜೆಯಾಗುತ್ತದೆಯೋ, ಆ ಸ್ಥಾನ ಗುರುದ್ವಾರವಾಗುತ್ತದೆ. ಮತ್ತು ಅಲ್ಲಿ ಗುರುದ್ವಾರದ ಸಂದರ್ಭದ ನಿಯಮಗಳನ್ನು ಪಾಲಿಸುವುದು ಆವಶ್ಯಕವಾಗಿದೆ. ಯಾವ ಸಿಂಧಿ ದೇವಸ್ಥಾನದಲ್ಲಿ ಶ್ರೀ ಗುರುಗ್ರಂಥ ಸಾಹಿಬ ಇಡಲಾಗಿದೆಯೋ, ಅದನ್ನು `ಗುರುದ್ವಾರ’ ಎಂದು ಘೋಷಿಸಬೇಕು. ಹಾಗೆಯೇ ಅಲ್ಲಿಂದ ಮೂರ್ತಿಗಳನ್ನು ತೆಗೆಯಬೇಕು. ಒಂದು ವೇಳೆ ಒಪ್ಪಿಗೆಯಿಲ್ಲದಿದ್ದರೆ, ದೇವಸ್ಥಾನದಲ್ಲಿ ಶ್ರೀ ಗುರುಗ್ರಂಥ ಸಾಹಿಬ ಇಡಬಾರದು ಎಂದು ಈ ಸಮೂಹದ ಅಭಿಪ್ರಾಯವಾಗಿದೆ. ಹಾಗೆಯೇ ಈ ಸಮೂಹವು ಜನವರಿ 12 ರ ವರೆಗೆ ಗ್ರಂಥವನ್ನು ಜಮೆ ಮಾಡುವಂತೆ ಕರೆ ನೀಡಿದರು. ಆ ಸಮಯದಲ್ಲಿ ಈ ಸಮೂಹವು `ಹಿಂದೂ ಜಾಗರಣ ಮಂಚ’ದ ಸದಸ್ಯರೊಂದಿಗೆ ವಾದವಾಯಿತು.

3. ತದನಂತರ ಸಿಂಧಿ ಸಮಾಜವು ಸಂತರೊಂದಿಗೆ ಸಭೆಯನ್ನು ನಡೆಸಿ 5 ಸದಸ್ಯರ ಸಮಿತಿಯನ್ನು ರಚಿಸಿತು ಮತ್ತು ಈ ಸಮಿತಿಯು ಚರ್ಚೆ ನಡೆಸಿ ಗುರುದ್ವಾರದಲ್ಲಿ ಶ್ರೀ ಗುರುಗ್ರಂಥ ಸಾಹಿಬ ಜಮೆ ಮಾಡುವ ನಿರ್ಣಯವನ್ನು ತೆಗೆದುಕೊಂಡಿತು. ಅದರಂತೆ ಜನವರಿ 11 ರಂದು ಅದನ್ನು ಜಮೆ ಕೂಡ ಮಾಡಿದರು.

ಸಂಪಾದಕೀಯ ನಿಲುವು

ನಿಹಂಗ ಸಿಖ್ಕರಿಗೆ ಇಷ್ಟು ದಶಕಗಳಿಂದ ದೇವಸ್ಥಾನದಲ್ಲಿ ಮೂರ್ತಿಯ ಜೊತೆಗೆ ಈ ಗ್ರಂಥ ಇಟ್ಟಿರುವ ಮಾಹಿತಿ ಇರಲಿಲ್ಲವೇ? ಅಥವಾ ಸಿಖ್ಕ ಮತ್ತು ಹಿಂದೂಗಳು ಹೀಗೆ ದ್ವೇಷ ನಿರ್ಮಾಣ ಮಾಡುವ ಅವರ ಖಲಿಸ್ತಾನಿ ಮಾನಸಿಕತೆಯನ್ನು ತೋರಿಸುತ್ತಿದ್ದಾರೆಯೇ ?, ಎನ್ನುವುದನ್ನು ಕಂಡು ಹಿಡಿಯುವ ಆವಶ್ಯಕತೆಯಿದೆ !