ರಾಷ್ಟ್ರವಾದಿ ಕಾಂಗ್ರೆಸ್ ಪಕ್ಷದ ಲಕ್ಷದ್ವೀಪದ ಸಂಸದ ಮಹಮ್ಮದ ಫೈಜಲಗೆ ೧೦ ವರ್ಷಗಳ ಜೈಲು ಶಿಕ್ಷೆ !

ಲಕ್ಷದ್ವೀಪ – ಇಲ್ಲಿನ ರಾಷ್ಟ್ರವಾದಿ ಕಾಂಗ್ರೆಸ್ ಪಕ್ಷದ ಸಂಸದ ಮಹಮ್ಮದ ಫೈಜಲ ಇವರಿಗೆ ೨೦೦೯ ರಲ್ಲಿ ಕೊಲೆಗೆ ಪ್ರಯತ್ನಿಸಿದ ಪ್ರಕರಣದಲ್ಲಿ ೧೦ ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿದೆ. ಲಕ್ಷದ್ವೀಪದ ಕರವತ್ತೀ ಜಿಲ್ಲಾ ಮತ್ತು ಸೆಷನ್ಸ್ರ್ ನ್ಯಾಯಾಲಯವು ಈ ನಿರ್ಣಯವನ್ನು ನೀಡಿದೆ. ಫೈಜಲ ೨೦೧೪ ರಿಂದ ಸಂಸತ್ತಿನಲ್ಲಿ ಈ ಕೇಂದ್ರಾಡಳಿತ ಪ್ರದೇಶದ ಪ್ರತಿನಿಧಿತ್ವವನ್ನು ಮಾಡುತ್ತಿದ್ದಾರೆ.

೧. ಪ್ರಕರಣದಲ್ಲಿ ಒಟ್ಟು ೨೩ ಆರೋಪಿಗಳಿದ್ದರು. ಇವರಲ್ಲಿ ೪ ಆರೋಪಿಗಳಿಗೆ ಶಿಕ್ಷೆಯಾಯಿತು. ಫೈಜಲನಿಗೆ ಆತನ ಸಂಬಂಧಿಕ ಮಹಮ್ಮದ ಸಲೀಹ ಇವರ ಮೇಲೆ ಮಾರಣಾಂತಿಕ ದಾಳಿ ಮಾಡಿದ ಪ್ರಕರಣದಲ್ಲಿ ದೋಷಿಯೆಂದು ನಿರ್ಧರಿಸಲಾಗಿತ್ತು. ಅಪರಾಧಿಗಳಿಗೆ ತಲಾ ೧ ಲಕ್ಷ ರೂಪಾಯಿಗಳ ದಂಡವನ್ನೂ ವಿಧಿಸಲಾಗಿದೆ. ಇದು ರಾಜಕೀಯದೃಷ್ಟಿಯಿಂದ ಮಾಡಲಾಗಿರುವ ಪ್ರಕರಣವಾಗಿದೆ ಹಾಗೂ ಅದಕ್ಕೆ ಶೀಘ್ರದಲ್ಲಿಯೆ ಉಚ್ಚ ನ್ಯಾಯಾಲಯದಲ್ಲಿ ಪ್ರಶ್ನಿಸಲಾಗುವುದೆಂದು ಫೈಜಲ ಹೇಳಿದ್ದಾನೆ.

೨. ಸಲೀಹನ ಮೇಲೆ ದಾಳಿ ಮಾಡಿದವರಿಗೆ ಫೈಜಲನು ನೇತೃತ್ವವನ್ನು ಮಾಡಿದ್ದನು. ಒಂದು ಶೆಡ್‌ನ ನಿರ್ಮಾಣ ಮಾಡುವ ವಿಷಯದಲ್ಲಿನ ವಿವಾದದ ನಂತರ ಈ ದಾಳಿ ಮಾಡಲಾಗಿತ್ತು. ಇದರಲ್ಲಿ ಸಲೀಹ ಇವರು ಗಂಭೀರವಾಗಿ ಗಾಯಗೊಂಡಿದ್ದರಿಂದ ಅವರನ್ನು ಕೇರಳಕ್ಕೆ ಒಯ್ಯಲಾಯಿತು, ಅವರಿಗೆ ಅನೇಕ ತಿಂಗಳ ವರೆಗೆ ಆಸ್ಪತ್ರೆಯಲ್ಲಿ ಉಪಚಾರ ಮಾಡಲಾಯಿತು.

ಸಂಪಾದಕೀಯ ನಿಲುವು

ಇಂತಹ ಅಪರಾಧಿ ವೃತ್ತಿಯ ಜನಪ್ರತಿನಿಧಿಗಳಿರುವ ರಾಷ್ಟ್ರವಾದಿ ಕಾಂಗ್ರೆಸ್ ಮೇಲೆ ನಿಷೇಧವನ್ನೆ ಹೇರಬೇಕು !