೧೦ ದಿನಗಳಲ್ಲಿ ೧೬೪ ಕೋಟಿ ರೂಪಾಯಿಗಳನ್ನು ತುಂಬಿಸಲು ‘ಆಪ್’ ಪಕ್ಷಕ್ಕೆ ನೋಟಿಸ್

  • ಹಣ ತುಂಬಿಸದಿದ್ದರೆ ಆಸ್ತಿ ಜಪ್ತಿ

  • ರಾಜಕೀಯ ಜಾಹೀರಾತಿಗಾಗಿ ಸರಕಾರದ ೯೯ ಕೋಟಿ ರೂಪಾಯಿ ಖರ್ಚು !

ನವದೆಹಲಿ : ದೆಹಲಿ ಸರಕಾರದ ಮಾಹಿತಿ ಮತ್ತು ಪ್ರಸಾರ ನಿರ್ದೇಶನಾಲಯ (‘ಡಿಐಪಿ’) ಆಮ್ ಆದ್ಮಿ ಪಕ್ಷಕ್ಕೆ ೧೬೩.೬೨ ಕೋಟಿ ರೂಪಾಯಿಗಳ ವಸೂಲಾತಿಗಾಗಿ ನೋಟಿಸ್ ಕಳುಹಿಸಿದೆ. ‘ಆಪ್’ ೧೦ ದಿನದೊಳಗೆ ಹಣವನ್ನು ಜಮಾ ಮಾಡಬೇಕಾಗಿದೆ. ಈ ಮೊತ್ತವು ೯೯ ಕೋಟಿ ೩೧ ಲಕ್ಷ ರೂಪಾಯಿಗಳ ಅಸಲು ಮತ್ತು ೬೪ ಕೋಟಿ 31 ಲಕ್ಷ ರೂಪಾಯಿಗಳ ದಂಡದ ಬಡ್ಡಿಯನ್ನು ಒಳಗೊಂಡಿದೆ. ಪಕ್ಷಕ್ಕೆ ಹಣ ಜಮಾ ಮಾಡಲು ಸಾಧ್ಯವಾಗದಿದ್ದರೆ, ಪಕ್ಷದ ಆಸ್ತಿಗಳನ್ನು ಜಪ್ತಿ ಮಾಡಲಾಗುವುದು. ಆಮ್ ಆದ್ಮಿ ಪಕ್ಷ ೨೦೧೫-೨೦೧೬ರಲ್ಲಿ ರಾಜಕೀಯ ಜಾಹೀರಾತುಗಳನ್ನು ನೀಡಿತ್ತು. ಇದಕ್ಕಾಗಿ ಸರಕಾರದ ಹಣವನ್ನು ಬಳಸಲಾಯಿತು. ಆಮ್ ಆದ್ಮಿ ಪಕ್ಷದಿಂದ ೯೭ ಕೋಟಿ ರೂಪಾಯಿಗಳನ್ನು ವಸೂಲು ಮಾಡುವಂತೆ ಮುಖ್ಯ ಕಾರ್ಯದರ್ಶಿಗೆ ಆದೇಶ ನೀಡಿತ್ತು.

ಸಂಪಾದಕೀಯ ನಿಲುವು

ಇದರಿಂದ ‘ನಾವು ಜನರ ಸೇವಕರು’ ಎಂದು ಹೇಳುವ ಆಪ್, ನ ಜನತಾದ್ರೋಹದ ರೂಪವು ಎದ್ದು ಕಾಣಿಸುತ್ತದೆ. ಜನರ ಹಣದ ಮೇಲೆ ಚೆಲ್ಲಾಟವಾಡುವ ‘ಆಪ್’ ಜನ ಹಿತಕಾರಿ ಕಾರ್ಯವನ್ನು ಏನು ಮಾಡಲಿದೆ ?