ದರ್ಭಾಂಗದಲ್ಲಿ ದೇವಸ್ಥಾನಕ್ಕೆ ನುಗ್ಗಿ ದೇವತೆಗಳ ಮೂರ್ತಿಗಳನ್ನು ಧ್ವಂಸಗೊಳಿದ ಮಹಮ್ಮದ ಚಾಂದನ ಬಂಧನ !

ಈ ಮೇಲಿನ ಚಿತ್ರ ಪ್ರಕಟಿಸುವುದರ ಉದ್ದೇಶ ಯಾರ ಭಾವನೆಗಳಿಗೆ ನೋವನ್ನುಂಟುಮಾಡುವುದಾಗಿರದೆ ನಿಜ ಸ್ಥಿತಿ ತಿಳಿಸುವುದಾಗಿದೆ. – ಸಂಪಾದಕರು

ದರ್ಭಾಂಗ (ಬಿಹಾರ) – ಇಲ್ಲಿಯ ಒಂದು ಆಜಮನಗರ ಪರಿಸರದಲ್ಲಿ ಇರುವ ಬ್ರಹ್ಮಸ್ಥಾನ ದೇವಸ್ಥಾನಕ್ಕೆ ನುಗ್ಗಿ ಮಹಮ್ಮದ ಚಾಂದ ಎಂಬ ಮುಸಲ್ಮಾನ ಆರೋಪಿಯು ಅಲ್ಲಿಯ ಹಿಂದೂ ದೇವತೆಗಳ ಮೂರ್ತಿಗಳನ್ನು ಧ್ವಂಸಗೊಳಿಸಿದನು. ನಂತರ ಅವನು ಆ ಮೂರ್ತಿಗಳನ್ನು ಹತ್ತಿರದ ಸರೋವರಕ್ಕೆ ಎಸೆದನು. ಈ ಘಟನೆಯ ನಂತರ ಸ್ಥಳೀಯ ಹಿಂದೂಗಳಿಂದ ಪ್ರತಿಭಟನೆ ನಡೆಸಲಾಯಿತು ಮತ್ತು ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಒತ್ತಾಯಿಸಲಾಯಿತು. ಪೊಲೀಸರು ಘಟನಾ ಸ್ಥಳಕ್ಕೆ ಧಾವಿಸಿ ಆಕ್ರೋಶಿತ ಹಿಂದೂಗಳನ್ನು ಶಾಂತಗೊಳಿಸಲು ಪ್ರಯತ್ನಿಸಿದರು. ಹಾಗೂ ಆರೋಪಿಯನ್ನು ಬಂಧಿಸಿದ್ದಾರೆ.

ಇದರ ಜೊತೆಗೆ ಪೊಲೀಸರು ಸರೋವರದಲ್ಲಿನ ಮ್ಮೂರ್ತಿಗಳನ್ನು ತೆಗೆದು ದೇವಸ್ಥಾನದ ಪರಿಸರದಲ್ಲಿ ಇಟ್ಟರು. ಕೆಲವು ವರ್ಷಗಳ ಹಿಂದೆ ಆಝಮನಗರದಲ್ಲಿನ ದುರ್ಗಾದೇವಿಯ ದೇವಸ್ಥಾನದ ಹತ್ತಿರ ಭಯಾನಕ ಸ್ಫೋಟ ನಡೆದಿತ್ತು.

ಸಂಪಾದಕರ ನಿಲುವು

ಬಿಹಾರದಲ್ಲಿನ ಹಿಂದೂಗಳ ದೇವಸ್ಥಾನಗಳು ಅಸುರಕ್ಷಿತ ! ಈ ರೀತಿಯ ಘಟನೆ ಎಂದಾದರೂ ಮಸೀದಿ ಅಥವಾ ಚರ್ಚನಲ್ಲಿ ನಡೆಯುತ್ತದೆಯೇ ? ಹಿಂದೂಗಳು ಒಗ್ಗಟ್ಟಿನಿಂದ ಇಲ್ಲದ್ದರಿಂದ ಯಾರೋ ಒಬ್ಬ ಬಂದು ಹಿಂದೂಗಳ ಶ್ರದ್ಧಾಸ್ಥಾನಗಳನ್ನು ಬಗ್ನಗೊಳಿಸುತ್ತಾನೆ, ಇದು ಹಿಂದೂಗಳಿಗೆ ನಾಚಿಗೇಡು !