ಜೋಶಿಮಠದ ವಿಪತ್ತಿನ ಬಗ್ಗೆ ಜಗದ್ಗುರು ಶಂಕರಾಚಾರ್ಯ ಸ್ವಾಮಿ ನಿಶ್ಚಲಾನಂದ ಸರಸ್ವತಿಜೀಯವರ ಪ್ರತಿಕ್ರಿಯೆ

ಗುಡ್ಡ ಮತ್ತು ಅರಣ್ಯಗಳನ್ನು ನಾಶ ಮಾಡಿರುವುದರಿಂದಲೇ ಜೋಶಿಮಠದಲ್ಲಿ ಇಂತಹ ಕಠಿಣ ಪರಿಸ್ಥಿತಿ ಉದ್ಭವಿಸಿದೆ !

ಜಗದ್ಗುರು ಶಂಕರಾಚಾರ್ಯ ಸ್ವಾಮಿ ನಿಶ್ಚಲಾನಂದ ಸರಸ್ವತಿಜೀ

ಜೋಶಿಮಠ (ಉತ್ತರಾಖಂಡ) – ನಿಸರ್ಗದೊಂದಿಗೆ ಚೆಲ್ಲಾಟವಾಡಬಾರದು. ಗುಡ್ಡ, ಕಾಡು ಮತ್ತು ನದಿಗಳು ಪೃಥ್ವಿಯ ಸಮತೋಲನವನ್ನು ಕಾಪಾಡುತ್ತವೆ, ಆದರೆ ಅಭಿವೃದ್ಧಿಯ ಹೆಸರಿನಡಿಯಲ್ಲಿ ಗುಡ್ಡ ಮತ್ತು ಅರಣ್ಯಗಳನ್ನು ನಾಶಪಡಿಸಿರುವುದರಿಂದ ಈ ಪರಿಸ್ಥಿತಿ ಉದ್ಭವಿಸಿದೆಯೆಂದು ಪುರಿ ಪೀಠಾಧೀಶ್ವರ ಜಗದ್ಗುರು ಶಂಕರಾಚಾರ್ಯ ಸ್ವಾಮಿ ನಿಶ್ಚಲಾನಂದ ಸರಸ್ವತಿಜೀಯವರು ಜೋಶಿಮಠದ ವಿಪತ್ತಿನ ವಿಷಯದಲ್ಲಿ ಪ್ರತಿಕ್ರಿಯೆ ವ್ಯಕ್ತಪಡಿಸಿದರು.

ಜೋಶಿಮಠದ ವಿಪತ್ತಿನ ಕುರಿತು ಕೇಂದ್ರದ ಮೋದಿ ಸರಕಾರ ಮತ್ತು ಉತ್ತರಾಖಂಡದ ಧಾಮಿ ಸರಕಾರ ಜಾಗೃತಗೊಂಡಿದೆ. ಕೇಂದ್ರ ಸರಕಾರವು ಜೋಶಿಮಠದ ಪರಿಸ್ಥಿತಿಯ ಮೇಲೆ ನಿಗಾವಹಿಸಲು ತಂಡವನ್ನು ರಚಿಸಿದೆ. ಇದರೊಂದಿಗೆ ಅಲ್ಲಿ ನಡೆಯುತ್ತಿದ್ದ ಎಲ್ಲ ರೀತಿಯ ಕಟ್ಟಡ ಕಾಮಗಾರಿಗಳನ್ನು ರಾಜ್ಯ ಸರಕಾರವು ಸ್ಥಗಿತಗೊಳಿಸಿದೆ.

( ಸೌಜನ್ಯ: ABP NEWS)

ಅನೇಕ ಕುಟುಂಬಗಳನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸುವ ಕಾರ್ಯ ಪ್ರಾರಂಭ !

ಉತ್ತರಾಖಂಡ ರಾಜ್ಯದ ಜೋಶಿಮಠದಲ್ಲಿ ಮನೆಗಳು ಮತ್ತು ಕಟ್ಟಡಗಳಿಗೆ ಬಿರುಕು ಬಡುವುದು ನಿರಂತರವಾಗಿ ಮುಂದುವರಿದಿದೆ. ಅಲ್ಲಿಯ ಭೂಮಿ ಕುಸಿದಿದ್ದು ಸ್ಥಳೀಯರು ಭಯದ ವಾತಾವರಣದಲ್ಲಿ ಜೀವಿಸುತ್ತಿದ್ದಾರೆ. ಇಲ್ಲಿಯ ಅನೇಕ ಕುಟುಂಬಗಳನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸುವ ಕಾರ್ಯ ಮುಂದುವರಿದಿದೆ.