ಬಾಲಿವುಡ್ ನವರು ಎಲ್ಲಿಯ ವರೆಗೆ ಕ್ಷಮೆ ಕೇಳುವುದಿಲ್ಲವೋ ಅಲ್ಲಿವರೆಗೆ ಮುಸ್ಲಿಂ ಓಲೈಕೆಯ ಚಲನಚಿತ್ರಗಳ ಮೇಲಿನ ಬಹಿಷ್ಕಾರ ಮುಂದುವರಿಸಿ ! – ತಾನ್ಯಾ, ಸಂಪಾದಕಿ, ಸಂಗಮ್ ಟಾಕ್ಸ್

‘ಲವ್ ಜಿಹಾದ್‌ಗೆ ಬಾಲಿವುಡ್‌ನ ಬೆಂಬಲ’ ಕುರಿತು ವಿಶೇಷ ಸಂವಾದ !

ತಾನ್ಯಾ, ಸಂಪಾದಕಿ, ಸಂಗಮ ಟಾಕ್ಸ್

ಕಳೆದ ಕೆಲವು ವರ್ಷಗಳಿಂದ ಇಸ್ಲಾಂಗೆ ಒತ್ತು ನೀಡುವ ಹಾಗೂ ಹಿಂದೂ ವಿರೋಧಿ ಚಲನಚಿತ್ರಗಳು ನಿರ್ಮಾಣವಾಗುತ್ತಿವೆ. ನಾಯಕನನ್ನು ಮುಸ್ಲಿಂ ಎಂದು ತೋರಿಸಿ, ಖಳನಾಯಕನನ್ನು ಹಿಂದೂ ಎಂದು ಬಿಂಬಿಸಲಾಗುತ್ತದೆ. ಚಲನಚಿತ್ರಗಳ ಮೂಲಕ ‘ಲವ್ ಜಿಹಾದ್’ಗೆ ಉತ್ತೇಜನ ನೀಡಲಾಗುತ್ತಿದೆ; ಆದರೆ ಈಗ ಹಿಂದೂಗಳು ಎಚ್ಚೆತ್ತುಕೊಂಡು ಇಂತಹ ಚಲನಚಿತ್ರಗಳನ್ನು ಬಹಿಷ್ಕರಿಸುತ್ತಿರುವುದರಿಂದ ಬಾಲಿವುಡ್ ಆರ್ಥಿಕವಾಗಿ ಸಂಕಷ್ಟಕ್ಕೆ ಸಿಲುಕಿದೆ. ಇಂತಹ ಸಮಯದಲ್ಲಿ ಸುನೀಲ್ ಶೆಟ್ಟಿಯಂತಹ ಹಿಂದೂ ನಟನನ್ನು ಮುಂದೆ ತರುವ ಪ್ರಯತ್ನ ನಡೆಯುತ್ತಿದೆ; ಆದರೆ ಇನ್ನೂ ಬಾಲಿವುಡ್ ವರು ಕ್ಷಮೆ ಕೇಳಲು ಸಿದ್ಧರಿಲ್ಲ. ಇದರಲ್ಲಿ ದೊಡ್ಡ ಪ್ರಮಾಣದಲ್ಲಿ ಹಣದಾಟ ನಡೆಯುತ್ತಿದೆ. ಅವರಿಗೆ ಹಣ ಒದಗಿಸುವ ಗ್ಯಾಂಗ್ ಆಗಿರುವ ಬಾಲಿವುಡ್ ಅವರನ್ನು ತಮ್ಮ ಪಾಲಕರೆಂದು ಪರಿಗಣಿಸುತ್ತದೆ. ವಾಸ್ತವದಲ್ಲಿ ಪ್ರೇಕ್ಷಕರೇ ಪಾಲಕರು ಎಂಬುದನ್ನು ಅವರು ಮರೆತಿದ್ದಾರೆ; ಆದ್ದರಿಂದ ಇದನ್ನು ಅರಿತು ಕ್ಷಮೆಯಾಚಿಸುವವರೆಗೂ ಮುಸ್ಲಿಂ ಓಲೈಕೆಯ ಚಲನಚಿತ್ರಗಳ ಮೇಲೆ ಬಹಿಷ್ಕಾರ ಮುಂದುವರಿಯಬೇಕು ಎಂದು `ಸಂಗಮ್ ಟಾಕ್ಸ್’ನ ಸಂಪಾದಕಿ ತಾನ್ಯಾ ಕರೆ ನೀಡಿದ್ದಾರೆ. ಅವರುಹಿಂದೂ ಜನಜಾಗೃತಿ ಸಮಿತಿ ಆಯೋಜಿಸಿದ್ದ ‘ಲವ್ ಜಿಹಾದ್’ಗೆ ಬಾಲಿವುಡ್‌ನ ಬೆಂಬಲ !’ ಕುರಿತ `ಆನ್‌ಲೈನ್’ ವಿಶೇಷ ಸಂವಾದದಲ್ಲಿ ಅವರು ಮಾತನಾಡುತ್ತಿದ್ದರು.

ಈ ಸಂದರ್ಭದಲ್ಲಿ ‘ಲೇಖಕರು, ಅಂಕಣಕಾರರು ಹಾಗೂ ಸಂಶೋಧಕರಾದ’ ಶ್ರೀಮತಿ ರತಿ ಹೆಗಡೆ ಇವರು ಮಾತನಾಡಿ, ಬಾಲಿವುಡ್ ಸಿನಿಮಾಗಳು ಮತ್ತು ವೆಬ್ ಸಿರೀಸ್ ಗಳಲ್ಲಿ ವಿವಾಹಪೂರ್ವ ಮತ್ತು ವಿವಾಹಬಾಹ್ಯ ಲೈಂಗಿಕ ಸಂಬಂಧಗಳು ಸಾಮಾನ್ಯ ಎಂಬುದನ್ನು ತೋರಿಸುತ್ತಿವೆ. ಹಿಂದೂ ಧರ್ಮದ ಪಂಡಿತರು, ಸಂಸ್ಕಾರಗಳು ಮತ್ತು ಆಚರಣೆಗಳು ಹಳೆಯವು ಮತ್ತು ತುಕ್ಕು ಹಿಡಿದಿವೆ ಎಂದೂ ಹಾಗೂ ಇತರ ಪಂಥಗಳ ಧಾರ್ಮಿಕ ಆಚರಣೆಗಳು ಪವಿತ್ರವಾಗಿವೆ ಮತ್ತು ಅವರ ಧಾರ್ಮಿಕ ಗುರುಗಳೇ ಉದಾತ್ತ ವಿಚಾರಗಳನ್ನು ಹೊಂದಿದ್ದಾರೆ ಎಂದು ತೋರಿಸಲಾಗುತ್ತಿದೆ. ಅಲ್ಲದೆ, ಹಿಂದೂ ಹುಡುಗಿ ಮುಸ್ಲಿಂ ಹುಡುಗನೊಂದಿಗಿನ ಸಂಬಂಧವೇ ನಿಜವಾದ ಪ್ರೀತಿಯಾಗಿದೆ ಹಾಗೂ ಈ ಹುಡುಗರು ಮಾತ್ರ ನಮ್ಮನ್ನು ಗೌರವಿಸುತ್ತಾರೆ ಮತ್ತು ನಮಗೆ ಸ್ವಾತಂತ್ರ್ಯವನ್ನು ನೀಡುತ್ತಾರೆ ಎಂದು ತೋರಿಸಲಾಗಿದೆ. ಆದರೆ ವಾಸ್ತವದಲ್ಲಿ ಇದು ಮತಾಂತರದ ದೊಡ್ಡ ಪಿತೂರಿಯಾಗಿದೆ, ಇದು ಹಿಂದೂ ಯುವತಿಯರಿಗೆ ಅರ್ಥವಾಗುವುದಿಲ್ಲ. ಹಾಗಾಗಿ ‘ಲವ್ ಜಿಹಾದ್’ನ ಬಲೆಯಲ್ಲಿ ಸಿಲುಕುತ್ತಾರೆ ಎಂದು ಹೇಳಿದರು.

ಈ ವೇಳೆ ಹಿಂದೂ ಜನಜಾಗೃತಿ ಸಮಿತಿಯ ಮಧ್ಯಪ್ರದೇಶ ಮತ್ತು ರಾಜಸ್ಥಾನ ರಾಜ್ಯಗಳ ಸಮನ್ವಯಕ ಶ್ರೀ. ಆನಂದ ಜಾಖೋಟಿಯಾ ಇವರು ಮಾತನಾಡುತ್ತಾ, ಚಲನಚಿತ್ರಗಳು ಮಾತ್ರವಲ್ಲದೆ ಯಾವುದೆಲ್ಲಾ ಜಾಹೀರಾತುಗಳು ತೋರಿಸಲಾಗುತ್ತದೆಯೋ ಅದರಲ್ಲಿ ಅನೇಕ ಹಿಂದೂಗಳ ರೂಢಿ-ಸಂಪ್ರದಾಯಗಳ ಮೇಲೆ ಆಘಾತ ಮಾಡಲಾಗುತ್ತವೆ ಮತ್ತು ಹಳೆಯ ಸಂಪ್ರದಾಯಗಳ ಬಗ್ಗೆ ಕೀಳರಿಮೆಯನ್ನು ಹುಟ್ಟುಹಾಕುತ್ತವೆ ಮತ್ತು ಅವುಗಳನ್ನು ಬದಲಾಯಿಸುವ ಸಮಯ ಬಂದಿದೆ ಎಂಬ ಸಂದೇಶವನ್ನು ನೀಡುತ್ತವೆ. ಸುನಿಲ ಶೆಟ್ಟಿಯವರು ‘ಎಲ್ಲಾ ಬಾಲಿವುಡ್‌ಗಳು ಕೆಟ್ಟವರಲ್ಲ’ ಎಂದು ಹೇಳುತ್ತಾರೆ; ಆದರೆ ‘ಲವ್ ಜಿಹಾದ್’ಗೆ ಸೊಪ್ಪು ಹಾಕುವ ಚಲನಚಿತ್ರಗಳು ಅಥವಾ ಜಾಹೀರಾತುಗಳ ವಿರುದ್ಧ ಅವರು ಏಕೆ ಧ್ವನಿ ಎತ್ತಲಿಲ್ಲ ? ಇಂದು ಬಾಲಿವುಡ್ ಟ್ರೋಲ್ ಆಗುತ್ತಿರುವಾಗ ಹಿಂದೂಗಳ ಧ್ವನಿಯನ್ನು ಹತ್ತಿಕ್ಕಲು ಮುಂದಾಗುವುದೇಕೆ ? ವ್ಯಾಪಾರ ಮತ್ತು ಹಣ ಇವುಗಳ ಮುಂದೆ ಇಂಥವರಿಗೆ ದೇಶ ಮತ್ತು ಧರ್ಮದ ಬಗ್ಗೆ ಏನೂ ಅನಿಸುವುದಿಲ್ಲ ಎಂದು ಹೇಳಿದರು.