ರಾಜ್ಯದ ಶಾಲೆಗಳಲ್ಲಿ ಇನ್ನುಮುಂದೆ ಮಕ್ಕಳಿಗೆ ಧಾರ್ಮಿಕ ಶಿಕ್ಷಣ ಮತ್ತು ಸಾತ್ವಿಕ ಆಹಾರ

ಬೆಂಗಳೂರು – ರಾಜ್ಯದ ಶಾಲೆಗಳಲ್ಲಿ ಮಕ್ಕಳಿಗೆ ಧಾರ್ಮಿಕ ಶಿಕ್ಷಣ ಮತ್ತು ಸಾತ್ವಿಕ ಆಹಾರ ನೀಡುವ ಪ್ರಕ್ರಿಯೆ ಪ್ರಾರಂಭವಾಗಿದೆ. ಅದಕ್ಕಾಗಿ ರಾಜ್ಯದ ಎಲ್ಲ ಶಾಲೆಗಳಲ್ಲಿ ನೈತಿಕ ಶಿಕ್ಷಣದ ವರ್ಗದಲ್ಲಿ ಧಾರ್ಮಿಕ ಗ್ರಂಥಗಳ ಮಾಹಿತಿಯನ್ನು ನೀಡುವ ವಿಷಯದಲ್ಲಿ ಚರ್ಚೆ ಪ್ರಾರಂಭವಾಗಿದೆ. ಮುಂದಿನ ಶೈಕ್ಷಣಿಕ ವರ್ಷದಿಂದ ಅದನ್ನು ಪ್ರಾರಂಭಿಸುವ ವಿಷಯದಲ್ಲಿ ಪ್ರಯತ್ನಿಸಲಾಗುತ್ತಿದೆಯೆಂದು ಶಿಕ್ಷಣ ಸಚಿವರಾದ ಬಿ.ಸಿ. ನಾಗೇಶ ಇವರು ಹೇಳಿದ್ದಾರೆ.

1. ಅಧ್ಯಯನಕಾರರು ಶಿಕ್ಷಣದಲ್ಲಿ ನೈತಿಕ ಶಿಕ್ಷಣವನ್ನು ಸೇರ್ಪಡೆಗೊಳಿಸಲು ಜನೇವರಿ 9, 2023 ರಂದು ಬೆಂಗಳೂರಿನಲ್ಲಿ ಒಂದು ಸಭೆಯನ್ನು ಏರ್ಪಡಿಸಿದ್ದರು. ಈ ಸಭೆಯಲ್ಲಿ ಶಿಕ್ಷಣ ಮತ್ತು ಸಾಕ್ಷರಣಾ ಸಚಿವ ಬಿ.ಸಿ. ನಾಗೇಶ ಮತ್ತು ಶ್ರೀ ಶ್ರೀ ರವಿಶಂಕರ ಇವರಲ್ಲದೇ ಅನೇಕ ಧಾರ್ಮಿಕ ಮತ್ತು ಸಾಮಾಜಿಕ ಸಂಸ್ಥೆಗಳ ಪ್ರತಿನಿಧಿಗಳು ಉಪಸ್ಥಿತರಿದ್ದರು.

2. ಈ ಸಭೆಯಲ್ಲಿ ಬಿ.ಸಿ. ನಾಗೇಶ ಇವರು ಅಭ್ಯಾಸಕ್ರಮದಲ್ಲಿ ಬದಲಾವಣೆ ತರಲು ಸಾಧ್ಯವಾದಷ್ಟು ಬೇಗನೆ ಸಮಿತಿಯನ್ನು ಸ್ಥಾಪಿಸಲಾಗುವುದೆಂದು ಹೇಳಿದರು. ಸಭೆಯಲ್ಲಿ ಚರ್ಚಿಸಲಾಗಿರುವ ವಿಷಯಗಳ ಆಧಾರದಲ್ಲಿ ಮೌಲ್ಯಾಧಾರಿತ ಶಿಕ್ಷಣವನ್ನು ನೀಡಲು ವಿಭಾಗೀಯ ಮಟ್ಟದ ಸಭೆಯಲ್ಲಿ ಚರ್ಚೆ ನಡೆಸಿ ಅಂತಿಮ ನಿರ್ಣಯವನ್ನು ತೆಗೆದುಕೊಳ್ಳಲಾಗುವುದು ಎಂದು ಹೇಳಿದ್ದಾರೆ.

3. ಈ ಸಭೆಯ ಮೂಲ ಉದ್ದೇಶ ಮಕ್ಕಳ ಆರೋಗ್ಯ ಚೆನ್ನಾಗಿರುವಂತೆ ಪ್ರಯತ್ನಿಸುವುದು, ನೈತಿಕ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವುದು ಮತ್ತು ದೇವರ ಭಕ್ತಿಯನ್ನು ಕಲಿಸುವುದಾಗಿದೆ’, ಎಂದು ಬಿ.ಸಿ. ನಾಗೇಶ ಇವರು ಹೇಳಿದರು. ಶಾಲೆಯಲ್ಲಿ ಸಾತ್ವಿಕ ಆಹಾರವನ್ನು ಪ್ರಾರಂಭಿಸುವ ವಿಷಯದಲ್ಲಿಯೂ ಈ ಸಭೆಯಲ್ಲಿ ವಿಚಾರ ಮಾಡಲಾಯಿತು.